ವಾರ್ಡ್ ನಂ. 9 ರಲ್ಲಿ ಸ್ವಚ್ಚತಾ ಅಭಿಯಾನ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ರವಿ ಬೋಸರಾಜು
ವಾರ್ಡ್ ನಂ. 9 ರಲ್ಲಿ ಸ್ವಚ್ಚತಾ ಅಭಿಯಾನ:
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ರವಿ ಬೋಸರಾಜು
ರಾಯಚೂರು,ಫೆ.25- ನಗರದ ವಾರ್ಡ್ ನಂ 9 ರಲ್ಲಿ ನಗರಸಭೆ ವತಿಯಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭಾಗವಹಿಸಿ ಕುಡಿಯುವ ನೀರು ಸರಬರಾಜು, ಚರಂಡಿ, ರಸ್ತೆ ವ್ಯವಸ್ಥೆ ಪರಿಶೀಲಿಸಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ಸಾರ್ವಜನಿಕರೊಂದಿಗೆ ರವಿ ಬೋಸರಾಜು ಮಾತನಾಡಿ ನಗರದ ಸಂಪೂರ್ಣ ಸ್ವಚ್ಛತೆಗಾಗಿ ನಗರಸಭೆಯ ಪೌರಕಾರ್ಮಿಕರು ಹಾಗೂ ಸ್ವಚ್ಛತೆಗಾಗಿ ನೀಡಿ ಆಡಳಿತಾತ್ಮಕ ನಿರ್ದೇಶನಗಳಿಗೆ ಜನರು ಸಹಕರಿಸಿ, ಬಡಾವಣೆಗೆ ಬರುವ ನಗರಸಭೆಯ ತ್ಯಾಜ್ಯವಿಲೇವಾರಿ ವಾಹನಗಳಿಗೆ ಕಸವನ್ನು ಬೇರ್ಪಡಿಸಿ ನೀಡಿ ಸ್ವಚ್ಚತೆಯಿಂದ ಕಾಪಾಡಬೇಕಾದ ಜವಾಬ್ದಾರಿನಮ್ಮೆಲ್ಲರ ಮೇಲಿದೆ ಎಂದು ಮನವಿ ಮಾಡಿದರು.
ಕುಡಿಯುವ ನೀರು, ಚರಂಡಿ, ರಸ್ತೆ, ಶೌಚಾಲಯ ಸೇರಿ ಅನೇಕ ಮೂಲಭೂತ ಸಮಸ್ಯೆಗಳ ನಿವಾರಣೆ ಬಗ್ಗೆ ಮಹಿಳೆಯರು ರವಿ ಬೋಸರಾಜು ಅವರಿಗೆ ಮನವಿ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಶಾಲಂ, ನಗರಸಭೆ ಸದಸ್ಯರಾದ ದರೂರು ಬಸವರಾಜ ಸಾಜೀದ್ ಸಮೀರ್, ನರಸಿಂಹಲು ಮಾಡಗಿರಿ, ನಗರಸಭೆ ಸದಸ್ಯರಾದ ವಾಹಿದ್, ಪ್ರಸಾದ್ ಕುಮಾರ್, ಕಡಗೋಲ್ ಚೇತನ್, ಮುನಿರಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment