ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಸಾಮೂಹಿಕ ಉಪನಯನ: ಬ್ರಾಹ್ಮಣರು ತಮ್ಮ ಬುದ್ಧಿ ಶಕ್ತಿಯಿಂದ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು- ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು

 ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಸಾಮೂಹಿಕ ಉಪನಯನ:                                                                       


ಬ್ರಾಹ್ಮಣರು ತಮ್ಮ ಬುದ್ಧಿ ಶಕ್ತಿಯಿಂದ ಸಮಾಜದಲ್ಲಿ ಉನ್ನತ ಸ್ಥಾನ  ಪಡೆಯಬೇಕು-  ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು                 
                ರಾಯಚೂರು,ಫೆ.22- ಬ್ರಾಹ್ಮಣರು ತಮ್ಮ ಬುದ್ಧಿ ಶಕ್ತಿಯಿಂದ ಸಮಾಜದಲ್ಲಿ ಉನ್ನತ ಸ್ಥಾನ  ಪಡೆಯಬೇಕು ಎಂದು ಮಂತ್ರಾಲಯ  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಹೇಳಿದರು. 

                ಅವರಿಂದು ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಿದ  ಸಾಮೂಹಿಕ ಉಪನಯನದಲ್ಲಿ ನೂತನ ವಟುಗಳಿಗೆ ಬ್ರಹ್ಮೋಪದೇಶ ಮತ್ತು ಆಶೀರ್ವಾದ ನೀಡಿ ಮಾತನಾಡಿದರು. ಉಪನಯನ ದಿಂದ ವ್ಯಕ್ತಿಗೆ ಉತ್ತಮ ಸಂಸ್ಕಾರಯುಕ್ತ ವ್ಯಕ್ತಿಯಾಗಲು ಪ್ರೇರೇಪಿಸುತ್ತದೆ ಅಲ್ಲದೆ ಉಪನೀತನಾದ ವ್ಯಕ್ತಿಗೆ ಮಾತ್ರ ಹೋಮ ಹವನ ನೆರವೇರಿಸಲು ಬರುತ್ತದೆ ಎಂದು ಅವರು ಸಾಮೂಹಿಕ ಉಪನಯನದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಇಂದು ಮನೆಯಲ್ಲಿ ಉಪನಯನ ಮಾಡಲು ಆಗುವುದಿಲ್ಲ ಏಕೆಂದರೆ ಚಿಕ್ಕ ಮನೆಗಳು ಇರುತ್ತವೆ ಮತ್ತು ಕಲ್ಯಾಣ ಮಂಟಪದಲ್ಲಿ ಮಾಡಿದರೆ ಲಕ್ಷಾಂತರ ಹಣ ವ್ಯಯಿಸಿ ಬೇಕು  ಆದ್ದರಿಂದ ಕೀಳರಿಮೆ ಬಿಟ್ಟು ಸಾಮೂಹಿಕ ಉಪನಯನದಲ್ಲಿ ತಮ್ಮ ಮಕ್ಕಳ ಉಪನಯನ ಮಾಡಿ ಎಂದರು. ಬ್ರಾಹ್ಮಣರಿಗೆ ಯಾವುದೆ ಮೀಸಲಾತಿಯಲ್ಲಿ ಮತ್ತು ಸರ್ಕಾರ ಬ್ರಾಹ್ಮಣರಿಗೆ ಹೆಚ್ಚಿನ  ಆರ್ಥಿಕ,ರಾಜಕೀಯ, ಸೌಲತ್ತು ಸಹ ನೀಡುವುದಿಲ್ಲ ಆದ್ದರಿಂದ ಬ್ರಾಹ್ಮಣರು ತಮ್ಮ ವಿದ್ಯೆ, ಕೌಶಲ್ಯತೆ, ಬುದ್ಧಿಮತೆ, ಸಾಧನೆಯಿಂದ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕೆಂದರು.

ಬ್ರಾಹ್ಮಣರು ಸ್ವಾಭಿಮಾನಿಗಳು ಯಾರಲ್ಲೂ ಅಂಗಲಾಚುವುದಿಲ್ಲ  ನಮ್ಮತನ ಬಿಟ್ಟುಕೊಡದೆ ಸಮಾಜಕ್ಕೆ ಕೊಡುಗೆ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕೆಂದರು. ನೂತನ ವಟುಗಳಿಗೆ ಶ್ರೀ ಪಾದಂಗಳವರು ಮಂತ್ರೋಪದೇಶ ಮಾಡಿ ಸಂಧ್ಯಾವಂದನೆ ಸಾಮಗ್ರಿ ಪಂಚೆ,ತುಹಸಿಮಣಿ ಮುಂತಾದವುಗಳನ್ನು ನೀಡಿ ಆಶೀರ್ವದಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್