ಪ್ರಜಾ ಸಾಕ್ಷಿ ಸಂಪಾದಕ ರಮೇಶ್ ಗೋರೆಬಾಳ್ ನಿಧನಕ್ಕೆ ಪತ್ರಕರ್ತರಿಂದ ಶ್ರದ್ಧಾಂಜಲಿ ಸಭೆ



ಪ್ರಜಾ ಸಾಕ್ಷಿ ದಿನಪತ್ರಿಕೆ ಸಂಪಾದಕ ರಮೇಶ್ ಗೋರೆಬಾಳ್ ನಿಧನಕ್ಕೆ ಪತ್ರಕರ್ತರಿಂದ ಶ್ರದ್ಧಾಂಜಲಿ ಸಲ್ಲಿಕೆ.                                                           ರಾಯಚೂರು,ಫೆ.19- ಇತ್ತೀಚೆಗೆ ನಿಧನರಾದ ಪ್ರಜಾ ಸಾಕ್ಷಿ ದಿನ ಪತ್ರಿಕೆ ಸಂಪಾದಕ ರಮೇಶ್ ಗೋರೆಬಾಳ್ ನಿಧನಕ್ಕೆ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.                                          ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ ರಮೇಶ್ ರವರ ಅಕಾಲಿಕ ಸಾವು ನಮ್ಮೆಲ್ಲರಿಗೂ ಅತೀವ ದುಃಖ ತಂದಿದೆ ಅವರು ಕಠಿಣ ಪರಿಶ್ರಮ ಮಾಡಿ ಪತ್ರಿಕೆ ನಡೆಸುತ್ತಿದ್ದರು ಸದಾ ಕ್ರಿಯಾಶೀಲರಾಗಿದ್ದರು ಎಂದರು.

ಕೆಯುಡ್ಬ್ಲೂಜೆ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹೀರೆಮಠ ಮಾತನಾಡಿ ರಮೇಶ ರವರು ತಮ್ಮ ಸಣ್ಣ ವಯಸ್ಸಿನಲ್ಲೇ ಮೃತರಾಗಿದ್ದು ಅವರು ತಮ್ಮ ಮೇಲೆ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ಪತ್ರಿಕೆ ಮುನ್ನೆಡಿಸಿಕೊಂಡು ಹೋಗುತ್ತಿದ್ದರು ಪತ್ರಕರ್ತರು ವೃತ್ತಿಯ ಜೊತೆಗೆ ತಮ್ಮ ಮತ್ತು ತಮ್ಮ ಕುಟುಂಬದ ಯೋಗಕ್ಷೇಮದ ಬಗ್ಗೆಯೂ ಕಾಳಜಿವಹಿಸಬೇಕೆಂದರು. ಪತ್ರಕರ್ತರಾದ ಸಿದ್ದು ಬಿರಾದಾರ್, ಆನಂದ ಸ್ವಾಮಿ, ಜಯ ಕುಮಾರ್ ದೇಸಾಯಿ ಕಾಡ್ಲೂರು, ಲಕ್ಷ್ಮಣ ಕಪಗಲ್, ಅಂಬಣ್ಣ ಅರೋಲಿ ಮುಂತಾದವರು ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.           ಶ್ರದ್ಧಾಂಜಲಿ ಸಭೆಯಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಹಿರಿಯ ಕಿರಿಯ ಪತ್ರಕರ್ತರು, ಕ್ಯಾಮರಾಮೆನ್  ಇದ್ದರು.                         ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ‌.

Comments

Popular posts from this blog