ರಸ್ತೆ - ಫುಟ್ ಪಾತ್ ಅತಿಕ್ರಮಿಸಿ ವ್ಯಾಪಾರ: ಸಂಚಾರಿ ಪೊಲೀಸರಿಂದ ತೆರವು ಕಾರ್ಯಚರಣೆ.
ರಸ್ತೆ - ಫುಟ್ ಪಾತ್ ಅತಿಕ್ರಮಿಸಿ ವ್ಯಾಪಾರ: ಸಂಚಾರಿ ಪೊಲೀಸರಿಂದ ತೆರವು ಕಾರ್ಯಚರಣೆ. ರಾಯಚೂರು,ಫೆ.22-ನಗರದ ಮಾರುಕಟ್ಟೆ ಸ್ಥಳದಲ್ಲಿ ವಾಹನ ಮತ್ತು ಪಾದಚಾರಿಗಳು ಸುಗಮವಾಗಿ ಸಂಚರಿಸುವುದುಕ್ಕೆ ಅಡತಡೆಯಾದ ರಸ್ತೆ ಮತ್ತು ಫುಟ್ ಪಾತ್ ಅತಿಕ್ರಮಣವನ್ನು ಸಂಚಾರಿ ಪೊಲೀಸರು ಇಂದು ಸಂಜೆ ತೆರವುಗೊಳಿಸಿದರು . ನಗರದ ಜನನಿಬಿಡ ತೀನ್ ಕಂದೀಲ್ ಬಳಿ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಅಂಗಡಿಗಳ ಮಾಲೀಕರು ತಮ್ಮ ಸರಕು, ಉತ್ಪನ್ನಗಳನ್ನು ರಸ್ತೆ ಇಕ್ಕೆಲಗಳಲ್ಲಿ ಇಟ್ಟು ವ್ಯಾಪಾರ ಮಾಡುತ್ತಾ ವಾಹನ ಸಂಚಾರಕ್ಕೆ ಮತ್ತು ನಡೆದುಕೊಂಡು ಹೋಗುವ ಜನರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಇಂದು ಟ್ರಾಫಿಕ್ ಪೊಲೀಸರು ಫೀಲ್ಡಿಗಿಳಿದು ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ತಮ್ಮ ಸಾಮಗ್ರಿಗಳನ್ನು ರಸ್ತೆ, ಪಾದಚಾರಿ ಮಾರ್ಗ ಅತಿಕ್ರಮಿಸಿ ಇಟ್ಟಿರುವುದನ್ನು ತೆಗೆಸಿದರು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ ನಾಯಕ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಇದ್ದರು . ಟ್ರಾಫಿಕ್ ಈಸ್ ಡ್ರೈವ್ ನಿರಂತರವಾಗಿರಲಿ: ಪೊಲೀಸರು ಈ ತೆರವು ಕಾರ್ಯವನ್ನು ಒಂದೆ ದಿನಕ್ಕೆ ಸೀಮಿತಗೊಳಿಸದೆ ನಿರಂತರವಾಗಿ ರಸ್ತೆ-ಫುಟ್ ಪಾತ್ ಅತಿಕ್ರಮಣಕಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಾ ನಗರದಲ್ಲಿ ಸುಗಮ ಸಂಚಾರಕ್ಕೆ ಮುಂದಾಗಬೇಕು ಮತ್ತು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಉಪದ್ರವವಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂಬುದು ನಾಗರೀಕರ ಒತ್ತಾಯವಾಗಿದೆ.
Comments
Post a Comment