ಪ್ರಧಾನಿ ನರೇಂದ್ರ ಮೋದಿಯವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ರೈಲ್ವೇ ನಿಲ್ದಾಣ ಪುನಾರಾಭಿವೃದ್ಧಿಗೆ ಚಾಲನೆ: ಅಮೃತ ಭಾರತ್ ರೈಲ್ವೆ ನಿಲ್ದಾಣ ಪುನಾರಾಭಿವೃದ್ಧಿ ದೇಶದ ಅಭಿವೃದ್ಧಿಯ ಪ್ರತೀಕ - ಸಂಸದ ರಾಜಾ ಅಮರೇಶ್ವರ ನಾಯಕ
ಪ್ರಧಾನಿ ನರೇಂದ್ರ ಮೋದಿಯವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ರೈಲ್ವೆ ನಿಲ್ದಾಣ ಪುನಾರಾಭಿವೃದ್ಧಿಗೆ ಚಾಲನೆ: ಅಮೃತ ಭಾರತ್ ರೈಲ್ವೆ ನಿಲ್ದಾಣ ಪುನಾರಾಭಿವೃದ್ಧಿ ದೇಶದ ಅಭಿವೃದ್ಧಿಯ ಪ್ರತೀಕ - ಸಂಸದ ರಾಜಾ ಅಮರೇಶ್ವರ ನಾಯಕ
ರಾಯಚೂರು,ಫೆ.26-ಅಮೃತ ಭಾರತ್ ಯೋಜನೆಯಡಿ 21 ಕೋಟಿ ವೆಚ್ಚದಲ್ಲಿ ರಾಯಚೂರು ರೈಲ್ವೆ ನಿಲ್ದಾಣ ಮತ್ತು 17 ಕೋಟಿ ವೆಚ್ಚದಲ್ಲಿ ಯಾದಗಿರಿ ರೈಲು ನಿಲ್ದಾಣ ಪುನರಾ ಭಿವೃದ್ಧಿಗೆ ಕೇಂದ್ರ ರೈಲ್ವೆ ಇಲಾಖೆ ಮಹತ್ತರ ನಿರ್ಧಾರದ ಹಿಂದೆ ದೇಶದ ಸಮಗ್ರ ಅಭಿವೃದ್ಧಿಯ ಚಿಂತನೆ ಮೋದಿಯವರದ್ದಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಅವರಿಂದು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ 554 ಹೊಸ ರೈಲ್ವೆ ನಿಲ್ದಾಣ ಉದ್ಘಾಟನೆ ಹಾಗೂ ಸುಮಾರು 1500ಕ್ಕೂ ಅಧಿಕ ಸೇತುವೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ದೇಶದ ಅಭಿವೃದ್ಧಿ ಚಿಂತಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಭಾರತ ಯೋಜನೆ ಮೂಲಕ ರೈಲ್ವೆ ನಿಲ್ದಾಣಗಳನ್ನು ಪುನಾರಭಿವೃದ್ದಿ ಮಾಡುತ್ತಿರುವದು ರೈಲ್ವೇ ಇಲಾಖೆಗೆ ಹೊಸ ರೂಪ ತಂದಿದೆ ಎಂದರು.
ದೇಶದಲ್ಲೆ ರೈಲ್ವೆ ಸ್ಟೇಷನ್ ಕಾಮಗಾರಿ, ಭೂಮಿ ಪೂಜೆ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದು, 554 ರೈಲ್ವೆ ನಿಲ್ದಾಣ ಜೊತೆಯಲ್ಲಿ ರಾಯಚೂರು ಹಾಗೂ ಯಾದಗಿರಿ ರೈಲ್ವೆ ಸ್ಟೇಷನ್ ಗಳುಕೂಡ ಉದ್ಘಾಟನೆ ನೆರೆವೇರಿಸಿದರು ಎಂದರು. ಪ್ರಧಾನಿ ಮೋದಿ ಅವರು ನಿರಂತರ ದೇಶದ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದಾರೆ. ಅವರ ದೇಶ ಸೇವೆ ಕಾರ್ಯ ಜನರು ಶ್ಲಾಘಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳನ್ನು ದೇಶದ ಜನರು ಶ್ಲಾಘಿಸಿದ್ದಾರೆ. ರಾಯಚೂರು ಜಿಲ್ಲಾ ಕೇಂದ್ರದ ರೈಲ್ವೆ ನಿಲ್ದಾಣ ಗುಂತಕಲ್ ವಿಭಾಗದ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಅಮೃತ ಭಾರತ ಯೋಜನೆಯಡಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಕಾಮಗಾರಿಗಳಿಗಾಗಿ 21 ಕೋಟಿ ಮಂಜೂರು ಮಾಡಲಾಗಿದೆ, ಈ ಯೋಜನೆಯಡಿ ರೈಲ್ವೆ ನಿಲ್ದಾಣದ ಮುಂಭಾಗ ಮತ್ತು ಪ್ರವೇಶದ್ವಾರಗಳ ಸುಧಾರಣೆ, ರೈಲ್ವೆ ಫ್ಲಾಟ್ ಫಾರಂ ವಿಸ್ತರಣೆ, ಪಾರ್ಕಿಂಗ್ ಸೌಲಭ್ಯ, ಉದ್ಯಾನವನ ಸೇರಿದಂತೆ ಪ್ರವೇಶ ಕಮಾನು ನಿರ್ಮಾಣಗೊಳ್ಳಲಿದೆ ಎಂದು ಅವರು ವಾಡಿ, ಶಹಪುರ ಭಾಗದಲ್ಲಿಯೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅಕ್ಕಲಕೋಟೆ ಬೆಳಗಾವಿ ರಸ್ತೆ ಕಾಮಗಾರಿಗೆ 551 ಕೋಟಿ ಮೀಸಲಿಡಲಾಗಿದೆ. ತುಂಗಭದ್ರಾ, ಕಲ್ಮಾಲಾ ಮಧ್ಯೆ ರಸ್ತೆ ನಿರ್ಮಿಸಲಾಗುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅಮೃತ ಭಾರತ್ ಯೋಜನೆಯಡಿ ರಾಯಚೂರು ಮತ್ತು ಯಾದಗಿರಿ ರೈಲ್ವೆ ನಿಲ್ದಾಣಗಳನ್ನು ನವೀಕರಣ ಮಾಡುತ್ತಿರುವುದು ದೇಶದ ಅಭಿವೃದ್ಧಿ ಪ್ರತೀಕ ಮೋದಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರ ಪಂಪಣ್ಣ,ಮಾಜಿ ಎಂಎಲ್ಸಿ ಎನ್ ಶಂಕ್ರಪ್ಪ, ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿವಿಯ ಸ್ಮಿತಾ ಅಕ್ಕ, ರೈಲ್ವೆ ಅಧಿಕಾರಿಗಳಾದ ರಾಮಕೃಷ್ಣ, ವಿನೀತ ಸಿಂಗ್, ಅಶೋಕ ಕುಮಾರ, ರೈಲ್ವೆ ಸಲಹಾ ಸಮತಿ ಸದ್ಯಸರಾದ ಡಾ. ಬಾಬುರಾವ ಸೇರಿದಂತೆ ನಗರಸಭೆ ಸದಸ್ಯರು , ಬಿಜೆಪಿ ಮುಖಂಡರು, ಶಾಲಾ, ಕಾಲೇಜು ವಿದ್ಯಾರ್ಥಿಗಳು , ರೈಲ್ವೇ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು. ಪ್ರತಿಭಾ ಗೋನಾಳ ನಾಡಗೀತೆ ಪ್ರಸ್ತುತ ಪಡಿಸಿದರು, ದಂಡಪ್ಪ ಬಿರಾದಾರ್ ನಿರೂಪಿಸಿದರು.
Comments
Post a Comment