ನಗರದ ಎನ್ ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ: ಶ್ರೀ ಸುಶಮೀಂದ್ರತೀರ್ಥರು ಅಕ್ಷರಶಃ ನಡೆದಾಡುವ ರಾಯರು-ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು.
ನಗರದ ಎನ್ ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ: ಶ್ರೀ ಸುಶಮೀಂದ್ರತೀರ್ಥರು ಅಕ್ಷರಶಃ ನಡೆದಾಡುವ ರಾಯರು-ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು. ರಾಯಚೂರು,ಫೆ.23- ಶ್ರೀ ಸುಶಮೀಂದ್ರತೀರ್ಥರು ಅಕ್ಷರಷ ನಡೆದಾಡುವ ರಾಯರೆ ಆಗಿದ್ದರು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಹೇಳಿದರು. ಅವರಿಂದು ನಗರದ ಎನ್ ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ ಕಾರ್ಯ ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀ ಸುಶಮೀಂದ್ರ ತೀರ್ಥರಿಗೆ ನವ ಮಂತ್ರಾಲಯ ನಿರ್ಮಾತೃಗಳಾದ ಶ್ರೀ ಸುಜಯೀಂದ್ರತೀರ್ಥ ಶ್ರೀ ಪಾದಂಗಳವರು 1985 ರಲ್ಲಿ ಬಿಚ್ಚಾಲಿ ನದಿ ತಟದಲ್ಲಿ ಸನ್ಯಾಸತ್ವ ನೀಡಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡಿದ್ದರು ಶ್ರೀ ಸುಜಯೀಂದ್ರತೀರ್ಥ ಶ್ರೀ ಪಾದಂಗಳವರು ಕಾಲವಾದ ನಂತರ ಸುಮಾರು ಎರೆಡು ದಶಕಗಳ ಕಾಲ ಶ್ರೀ ಸುಶಮೀಂದ್ರತೀರ್ಥರು ಪೀಠದಲ್ಲಿ ಇದ್ದರು ಅವರು ಭಕ್ತರ ಪಾಲಿಗೆ ನಡೆದಾಡುವ ರಾಯರೆ ಆಗಿದ್ದರು ಕರುಣಾಮೂರ್ತಿಗಳಾದ ಅವರು ನಮಗೆ ಪೂರ್ವಾಶ್ರಮದಲ್ಲಿ ವಿಶಿಷ್ಠವಾಗಿ ಅನುಗ್ರಹಿಸಿದ್ದಾರೆ ಎಂದು ಅಂದು ನಡೆದ ಪ್ರಸಂಗವನ್ನು ಮೆಲಕು ಹಾಕಿ ಗದ್ಗದಿತರಾದರು. ಶ್ರೀ ಸುಶಮೀಂದ್ರ ತೀರ್ಥರು ದಾನ ಶೂರರಾಗಿದ್ದರು ಗೋದಾನ, ಭೂದಾನ, ವಿದ್ಯಾದಾನ, ಮುಂತಾದ ದಾನ ನೀಡಿದ್ದರು ಅಲ್ಲದೆ ಸಂತಾನ ಹೀನರಿಗೆ ಸತ್ ಸಂತಾನ ಪ್ರಾಪ್ತಿ ಅನುಗ್ರಹ ಮಾಡಿದ್ದರು ಎಂದ ಅವರು ಶ್ರೀ ವೆಂಕಟರಮಣ ದೇವಸ್ಥಾನವನ್ನು ಶ್ರೀ ಸುಶಮೀಂದ್ರತೀರ್ಥರು ಪ್ರತಿಷ್ಟಾಪಿಸಿದ್ದರು ಇದುವರೆಗೆ ಇಲ್ಲಿ ಹರಿ, ವಾಯು ಗಳಿದ್ದರು ಈಗ ಗುರುಗಳು ಸಹ ಈ ಸನ್ನಿದಾನದಲ್ಲಿ ಸನ್ಹಿತರಾಗಿ ನಮ್ಮೇಲ್ಲರನ್ನು ಅನುಗ್ರಹಿಸಲಿದ್ದಾರೆ ಎಂದರು. ಶ್ರೀ ಸುಶಮೀಂದ್ರತೀರ್ಥರು ಇದ್ದಲ್ಲಿ ರಾಯರು ಸಹ ಇರುತ್ತಾರೆ ಅವರ ಸನ್ನಿದಾನವು ಇಲ್ಲಿ ಅಡಗಿದೆ ಎಂದರು. ಒಂದು ಬಾರಿ ಉಡುಪಿಯಲ್ಲಿ ಫಲಿಮಾರು ಹಿರಿಯ ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥರು ಶ್ರೀ ಸುಶಮೀಂದ್ರತೀರ್ಥರ ಕೈ ಹಿಡಿದು ನಿಮ್ಮನ್ನು ನೋಡಿದರೆ ರಾಯರನ್ನು ನೋಡಿದಂತಾಗುತ್ತದೆ ನೀವು ನಡೆದಾಡುವ ರಾಯರೆ ಎಂದು ಅಭಿದಾನವಿತ್ತಿದ್ದರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ದೇವಸ್ಥಾನ ಸಮಿತಿಯ ಡಾ.ಆನಂದ ತೀರ್ಥ ಫಡ್ನೀಸ್ ಮಾತನಾಡಿ ಶ್ರೀ ಸುಶಮೀಂದ್ರತೀರ್ಥರು ನಮ್ಮ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರನ್ನು ಸ್ಥಾಪಿಸಿದ್ದರು ಅವರ ಅನುಗ್ರಹದಿಂದ ದೇವಸ್ಥಾನ ಶ್ರೇಯೋಭಿವೃದ್ಧಿಯಾಗಿದೆ ಎಂದರು.
ಡಿ.ಕೆ.ಮುರಳಿಧರ್ ಮಾತನಾಡಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ ಕಾರ್ಯ ಸುಲಲಿತವಾಗಿ ನೆರವೇರಿದ್ದು ಶ್ರೀ ಪಾದಂಗಳವರಿಗೆ ಭಕ್ತಿಪೂರ್ವಕ ಪ್ರಣಾಮ ಸಲ್ಲಿಸಿದರು.ಪ್ರಾರಂಭದಲ್ಲಿ ಶ್ರೀ ಮನ್ಮೂಲ ರಾಮದೇವರು ಸಂಸ್ಥಾನ ಪೂಜೆ ನೆರವೇರಿತು. ಪಂಡಿತರು,ಶ್ರೀ ಮಠದ ಸಿಬ್ಬಂದಿಗಳು,ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು .
Comments
Post a Comment