ಪಶ್ಚಿಮ ಬಂಗಾಳದಲ್ಲಿ ರಿಪಬ್ಲಿಕ್ ಟಿವಿ ವರದಿಗಾರ ಸಂತುಪನ್ ಬಂಧನ ಖಂಡಿಸಿ ಪ್ರತಿಭಟನೆ

 


ಪಶ್ಚಿಮ ಬಂಗಾಳದಲ್ಲಿ ರಿಪಬ್ಲಿಕ್ ಟಿವಿ ವರದಿಗಾರ ಸಂತುಪನ್  ಬಂಧನ ಖಂಡಿಸಿ ಪ್ರತಿಭಟನೆ


ರಾಯಚೂರು,ಫೆ.21- ಪಶ್ಚಿಮ ಬಂಗಾಳದ ಸಂದೇಶ್ ಕಾಲಿಯಲ್ಲಿ ರಿಪಬ್ಲಿಕ್ ಟಿವಿ ವರದಿಗಾರ ಸಂತುಪನ್ ಅವರ ಬಂಧನ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.


ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಹಿಂಸಾಚಾರದ ಕುರಿತು ವರದಿ ಮಾಡಲು ತೆರಳಿದ ಪತ್ರಕರ್ತನ ಮೇಲೆ ದೌರ್ಜನ್ಯ ನಡೆಸಿ ಬಂಧಿಸಿರುವುದು ಖಂಡನೀಯ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ತನ್ನದೆ ಆದ ಸ್ವಾತಂತ್ರ್ಯವಿದೆ.  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕರ್ತವ್ಯ ನಿರತ ಪತ್ರಕರ್ತನನ್ನು ಬಂಧನ ಮಾಡುವ ಮೂಲಕ ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಲು ಹೊರಟಿದೆ ಎಂದು ದೂರಿದರು. 


ಕೂಡಲೇ ಬಂಧಿತ ಪತ್ರಕರ್ತನನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ಹಾಕಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ  ಆರ್. ಗುರುನಾಥ ಮಾತನಾಡಿ, ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ‍ಪತ್ರಕರ್ತರು ಅನೇಕ ಸಮಸ್ಯೆ ಎದುರಿಸುತ್ತಿದ್ದು, ಕುಂದು ಕೊರತೆ ಆಲಿಸಬೇಕಿರುವ ಜಿಲ್ಲಾಧಿಕಾರಿ ನಿರ್ಲಕ್ಷಿಸಿದ್ದಾರೆ. ಶೀಘ್ರವೇ ಸಭೆ ಕರೆಯಬೇಕು ಎಂದು ಮನವಿ ಮಾಡಿದರು.



 ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಪ್ರಧಾನ ಕಾರ್ಯದರ್ಶಿ ಪಾಶಾ ಹುಟ್ಟಿ, ಪತ್ರಕರ್ತರಾದ ದತ್ತು ಸರ್ಕಿಲ್,ಎಚ್.ವೀರನಗೌಡ,ರಂಗನಾಥ ಕೆ. ಸತ್ಯನಾರಾಯಣ ಬಸವರಾಜ ನಾಗಡದಿನ್ನಿ, ವಿಜಯಕುಮಾರ ಜಾಗಟಗಲ್,  ಭೀಮೇಶ, ಧೀರೇಂದ್ರ ಕುಲಕರ್ಣಿ, ವೆಂಕಟೇಶ ಹೂಗಾರ, ಮಲ್ಲಿಕಾರ್ಜುನಯ್ಯ ಸ್ವಾಮಿ , ಗುಂಡಪ್ಪ, ನೀಲಕಂಠ ಸ್ವಾಮಿ, ಜಯಕುಮಾರ ದೇಸಾಯಿ ಕಾಡ್ಲೂರು,ರಾಚಯ್ಯ ಸ್ವಾಮಿ, ದುರುಗೇಶ, ಬಿ.ಎ.ನಂದಿಕೋಲಮಠ,ಗಿರಿಧರ್ ಎಂ,ನಾಗರೆಡ್ಡಿ, ಅಮರೇಶ ಸಜ್ಜನ್, ಬವಾಸಲಿ,ಈರಪ್ಪ ಮಂಡಲಗೇರಿ, ವಿರೇಶ, ಅಬ್ದುಲ್ ಖಾದರ್, ಜಿಲಾನಿ,ಯಲ್ಲಪ್ಪ,ತಾಯಪ್ಪ , ಶ್ರೀನಿವಾಸ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್