ಪುಷ್ಕರಣಿಯಲ್ಲಿ ಮೇಲಿಂದ ಜಿಗಿದು ಈಜಾಡಿದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು.
ಪುಷ್ಕರಣಿಯಲ್ಲಿ ಮೇಲಿಂದ ಜಿಗಿದು ಈಜಾಡಿದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು. ರಾಯಚೂರು,ಫೆ.25- ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿರುವ ಪುಷ್ಕರಣಿಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಕೆಲ ಹೊತ್ತು ಈಜಾಡಿದರು.
ಪುರಾತನವಾದ ಪುಷ್ಕರಣಿಯಲ್ಲಿ ಸುಮಾರು 15 ಅಡಿಗಳ ಮೇಲಿಂದ ನೀರಿನಲ್ಲಿ ಜಿಗಿದು ಈಜಾಡಿದರು. ಬಾಲ್ಯದಿಂದಲೆ ನದಿ ಕೊಳಗಳಲ್ಲಿ ಈಜಾಡಿದ ಉತ್ತಮ ಈಜುಪಟುಗಳಾದ ಶ್ರೀ ಪಾದಂಗಳವರು ಬಿಸಿಲಿನ ತಾಪ ಏರುತ್ತಿರುದ್ದು ಶ್ರೀ ಪಾದಂಗಳವರು ಪುಷ್ಕರಣಿಯಲ್ಲಿ ಈಜಾಡಿದರು. ಅನೇಕ ಯುವಕರು ಶ್ರೀ ಪಾದಂಗಳವರೊಂದಿಗೆ ಈಜಾಡಿದರು. ಶ್ರೀಮಠದ ಶಿಷ್ಯರು, ಭಕ್ತರು ಇದ್ದರು.
Comments
Post a Comment