ಏ.19 ರಂದು ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ತೆರೆಗೆ: ಭಕ್ತಿ ಪ್ರಧಾನ ಚಿತ್ರಗಳಿಗೆ ಉತ್ತಮ ಮನ್ನಣೆ- ಜೋಷಿ.
ಏ.19 ರಂದು ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ತೆರೆಗೆ: ಭಕ್ತಿ ಪ್ರಧಾನ ಚಿತ್ರಗಳಿಗೆ ಉತ್ತಮ ಮನ್ನಣೆ- ಜೋಷಿ. ರಾಯಚೂರು,ಮಾ.30- ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ಪ್ರಪಂಚದಾದ್ಯಂತ ಏ.19 ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ಪಾತ್ರಧಾರಿ ತ್ರಿವಿಕ್ರಮ ಜೋಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ತಂದೆ ತಾಯಿಯವರ ಆಶೀರ್ವಾದದೊಂದಿಗೆ ಈ ನಮ್ಮ ಸ್ವ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಮಾಡಲಾಗಿದ್ದು ದಾಸರ ಶರಣರ ಬೀಡು ರಾಯಚೂರು ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದರು. ಮಸರಕಲ್, ಚೀಕಲಪರ್ವಿ,ಅಸ್ಕಿಹಾಳ, ಮಾನ್ವಿ ಮುಂತಾದೆಡೆ ದಾಸರು ಜನ್ಮಸ್ಥಳವಿದೆ ಎಂದರು. ಜಗತ್ತಿಗೆ ಭಕ್ತಿ ಪಂಥವನ್ನು ಸಾರಿದವರು ದಾಸವರೇಣ್ಯರು ಎಂದು ಅವರು ಈ ಹಿಂದೆ ಶ್ರೀ ಜಗನ್ನಾಥದಾಸರು, ಪ್ರಸನ್ನ ವೆಂಕಟದಾಸರು ಚಿತ್ರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಸಾಂಪ್ರದಾಯಿಕ ಉಡಪಿನೊಂದಿಗೆ ಭಜನೆ ಮಾಡುತ್ತ ಆಗಮಿಸಿದ್ದು ವಿಶೇಷವಾಗಿತ್ತು ಎಂದರು.
ನಗರದ ಖಾಜನಗೌಡರ ಪುರಾತನ ಮನೆ ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದ್ದು ಯಾವುದೆ ವಿವಾದಕ್ಕೆ ಆಸ್ಪದ ನೀಡದೆ ಚಿತ್ರ ಮೂಡಿಬಂದಿದೆ ಎಂದರು. ಚಿತ್ರದ ನಿರ್ದೇಶಕ ಮಧುಸೂದನ ಹವಾಲ್ದಾರ್ ಮಾತನಾಡಿ ದಾಸ ಮತ್ತು ಶರಣ ಪರಂಪರೆಯನ್ನು ನಾವೆಲ್ಲರು ಬೆಳೆಸಬೇಕೆಂದ ಅವರು ನನಗೆ ಚಿತ್ರ ಹಣ ಮತ್ತು ಕೀರ್ತಿ ತಂದಿದೆ ಎಂದ ಅವರು ಏ.12 ರಿಂದ ಚಿತ್ರದ ಬುಕಿಂಗ್ ಪ್ರಾರಂಭಿಸಲಾಗುತ್ತಿದೆ ಏ.19 ರಂದು ತೆರೆಗೆ ಬರಲಿದೆ ಎಂದರು.ಮುಂದಿನ ದಿನಗಳಲ್ಲಿ ಅಂಕಲಿ ಮಠದ ಹಿರಿಯ ಗುರುಗಳ ಬಗ್ಗೆ ಚಿತ್ರ ನಿರ್ಮಾಣ ಮಾಡುವ ಬಗ್ಗೆ ಕೋರಿಕೆಯಿದೆ ಇಂತಹ ಅನೇಕ ಚಿತ್ರ ನಿರ್ಮಿಸುವ ಗುರಿಯಿದೆ ಎಂದರು . ಈ ಸಂದರ್ಭದಲ್ಲಿ ಕೊಟ್ರೇಶಪ್ಪ ಕೋರಿ, ರಾಘವೇಂದ್ರ ಶಿರವಾಳ, ರಾಮರಾವ್ ಗಣೇಕಲ್,ಪ್ರಹಲ್ಲಾದ ಫಿರೋಜಾಬಾದ ಇದ್ದರು.
Comments
Post a Comment