ವಾರ್ಡ್ ನಂ 1 ರಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ: ರವಿ ಬೋಸರಾಜು ಅವರಿಂದ ಸ್ವಚ್ಛತಾ ಕಾರ್ಯ ಪರಿಶೀಲನೆ
ವಾರ್ಡ್ ನಂ 1 ರಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ:
ರವಿ ಬೋಸರಾಜು ಅವರಿಂದ ಸ್ವಚ್ಛತಾ ಕಾರ್ಯ ಪರಿಶೀಲನೆ
ರಾಯಚೂರು,ಮಾ.24- ಸ್ವಚ್ಛ ಮತ್ತು ಸುಂದರ ನಗರಕ್ಕಾಗಿ ನಗರಸಭೆ ಹಾಗೂ ಜಿಲ್ಲಾಡಳಿತ ವತಿಯಿಂದ ವಾರ್ಡ್ ನಂ 1 ರಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭಾಗವಹಿಸಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು.
ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರೊಂದಿಗೆ ಮಾತನಾಡಿ ಸ್ವಚ್ಛತೆಯ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ನಗರಸಭೆ ವಿಶೇಷ ಪ್ರಯತ್ನದೊಂದಿಗೆ ಪ್ರತಿದಿನ ಸಂಜೆ 25 ತ್ಯಾಜ್ಯ ವಿಲೇವಾರಿ ವಾಹನಗಳು ಎಲ್ಲಾ ವ್ಯಾಪಾರಸ್ತರ ಮಾರಾಟ ಮಳಿಗೆ ಹಾಗೂ ಬಂಡಿ ವ್ಯಾಪಾರಸ್ತ ಫುಟ್ ಪಾತ್ ಸ್ಥಳಗಳಿಗೆ ಬರಲಿವೆ ವಾಹನಗಳಿಗೆ ಪ್ರತಿದಿನದ ತ್ಯಾಜ್ಯವನ್ನು ನೀಡಬೇಕು ಎಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರುದ್ರಪ್ಪ, ಎನ್ ಶ್ರೀನಿವಾಸ ರೆಡ್ಡಿ, ನರಸಿಂಹಲು ಮಾಡಗಿರಿ, ಬಿ ರಮೇಶ್, ಮಹಾಲಿಂಗ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment