ಮಾ.28 ರಿಂದ 30ರವರೆಗೆ ನವೋದಯ ಮಹಾವಿದ್ಯಾಲಯದಲ್ಲಿ "ರಿಗೇಲ್-24" ಕಾರ್ಯಕ್ರಮ: ನವೋದಯ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕ್ರೀಡಾ ಸಮುಚ್ಛಯ ನಿರ್ಮಾಣ ಗುರಿ-ಎಸ್.ಆರ್.ರೆಡ್ಡಿ.

 


ಮಾ.28 ರಿಂದ 30ರವರೆಗೆ ನವೋದಯ ಮಹಾವಿದ್ಯಾಲಯದಲ್ಲಿ "ರಿಗೇಲ್-24" ಕಾರ್ಯಕ್ರಮ:              ನವೋದಯ  ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕ್ರೀಡಾ ಸಮುಚ್ಛಯ ನಿರ್ಮಾಣ ಗುರಿ-ಎಸ್.ಆರ್.ರೆಡ್ಡಿ.                                                             ರಾಯಚೂರು,ಮಾ.27- ನಗರದ ನವೋದಯ ಮಹಾವಿದ್ಯಾಲಯದಲ್ಲಿ ಮಾ.28 ರಿಂದ 30ರವರೆಗೆ ರಿಗೇಲ್- 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನವೋದಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಎಸ್.ಆರ್.ರೆಡ್ಡಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.28 ರಂದು ಸಂಜೆ 6.30ಕ್ಕೆ ರಿಗೇಲ್-24 ಉದ್ಘಾಟನೆಯನ್ನು ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಉದ್ಘಾಟನೆ ಮಾಡಲಿದ್ದು  ಮಾ.29 ರಂದು ಬೆಳಿಗ್ಗೆ 10ಕ್ಕೆ ನವೋದಯ ಪ್ರೇಕ್ಷಾಗೃಹದಲ್ಲಿ ನರ್ಸಿಂಗ್, ಫಾರ್ಮಸಿ, ಪ್ಯಾರಾ ಮೆಡಿಕಲ್, ಫಿಸಿಯೋಥೆರಪಿ,ಮತ್ತು ಶಿಕ್ಷಣ ಪದವೀಧರರಿಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಡಾ.ಕೆ.ಎಸ್.ರವೀಂದ್ರನಾಥ ಪದವಿ ಪ್ರದಾನ ಮಾಡಲಿದ್ದಾರೆ ಎಂದರು. ಸಂಜೆ 6.30ಕ್ಕೆ ನವೋದಯ ಕ್ರೀಡಾಂಗಣದಲ್ಲಿ ವೈವಿಧ್ಯಮಯವಾದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು .

ಮಾ.30 ರಂದು ಬೆಳಿಗ್ಗೆ 10.45ಕ್ಕೆ ಮೆಡಿಕಲ್ ಮತ್ತು ದಂತ ಪದವೀಧರರಿಗೆ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ  ರಾಥೋಡ್ ಪದವಿಧರರಿಗೆ ಪದವಿ ಪ್ರದಾನ ಮಾಡಲಿದ್ದಾರೆ ಎಂದ ಅವರು ಸಂಜೆ 7ಕ್ಕೆ ನವೋದಯ ನಗೋತ್ಸವದಲ್ಲಿ  ಗಂಗಾವತಿ ಪ್ರಾಣೇಶ್, ನರಸಿಂಹ ಜೋಷಿ, ಬಿ.ಎಸ್. ಮಹಾಮನಿಯವರಿಂದ   ಹಾಸ್ಯ ಸಂಜೆ  ನಡೆಯಲಿದೆ ಎಂದರು.                                  ಕಳೆದ 32 ವರ್ಷಗಳಿಂದ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದ್ದು ಮುಂದಿನ ದಿನಗಳಲ್ಲಿ  ತನ್ನದೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಗುರಿ ಹೊಂದಿದೆ ಎಂದರು. ಸುಮಾರು 130 ಎಕರೆ ವಿಸ್ತೀರ್ಣದಲ್ಲಿ 3 ಕ್ಯಾಂಪಸ್ ಗಳಲ್ಲಿ ವೈದ್ಯಕೀಯ, ದಂತ ,ಫಿಸಿಯೋಥೆರಪಿ, ಇಂಜಿನಿಯರಿಂಗ್ ಮುಂತಾದ ಕೊರ್ಸ್ ಗಳನ್ನು ಬೋಧನೆ ಮಾಡುತ್ತಿದೆ ಎಂದ ಅವರು 2000 ಉದ್ಯೋಗಿಗಳಿದ್ದು 6500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.557 ವಿದ್ಯಾರ್ಥಿಗಳು ಕಳೆದ ವರ್ಷ ಪದವೀಧರರಾಗಿದ್ದಾರೆಂದ ಅವರು ಶೇ.95 ಉತ್ತೀರ್ಣರಾಗಿದ್ದಾರೆ ಎಂದರು.                         54 ವಿದ್ಯಾರ್ಥಿಗಳು ಸುವರ್ಣ ಪದಕ ಪಡೆದಿದ್ದಾರೆ ಎಂದರು.ಅನನ್ಯ ಸುರೇಶ್ ಎಂಬ ವಿದ್ಯಾರ್ಥಿನಿ ಅಂತರಾಷ್ಟ್ರೀಯ ಚೆಸ್ ಪಟು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. 149 ಸಂಶೋಧನಾ ಪ್ರಕಟಣೆ, 342 ಸಂಶೋಧನಾ ಪ್ರಾಜಕ್ಟ್ ಪೂರ್ಣವಾಗಿದ್ದು 394 ಪ್ರಾಜಕ್ಟ್ ಚಾಲ್ತಿಯಲ್ಲಿವೆ ಎಂದರು. ಬಹುಕೋಟಿ ವೆಚ್ಚದಲ್ಲಿ ಲ್ಯಾಬ್ ಮತ್ತು ಯಂತ್ರೋಪಕರಣಗಳ ಉನ್ನತೀಕರಣ ಮಾಡಲಾಗಿದೆ ಎಂದು ಅವರು 12600 ಆರೋಗ್ಯ ಕಾರ್ಡ್ ನೀಡಲಾಗಿದ್ದು ಕಳೆದ ವರ್ಷ 1424 ಜನರು ಉಚಿತ ಆರೋಗ್ಯ ಸೇವೆ ಪಡೆದಿದ್ದಾರೆ ಎಂದರು.

ಆಯುಷ್ಮಾನ್ ಭಾರತ ಮತ್ತು ಯಶಸ್ವಿನಿಯಡಿ ಬಡ ರೋಗಿಗಳು ಸೌಲಭ್ಯ ಪಡೆದಿದ್ದಾರೆ ಎಂದರು. ಮಹಾವಿದ್ಯಾಲಯದಲ್ಲಿ ನೂತನವಾಗಿ ನಿವ್ರೋ ಸರ್ಜರಿ ಮತ್ತು  ಯುರಾಲಜಿ  ವಿಭಾಗ ಸ್ಥಾಪಿಸಲಾಗಿದೆ ಶೀಘ್ರದಲ್ಲೆ ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗ ಪ್ರಾರಂಭಿಸಲಾಗುತ್ತಿದೆ ಎಂದರು. ರೋಗಿಗಳಿಗೆ ಮತ್ತು ಅವಲಂಬಿತರಿಗೆ ಉಚಿತ ಆಹಾರ ನೀಡಲಾಗುತ್ತದೆ ಎಂದ ಅವರು 3711 ಹೆರಿಗೆಗಳಾಗಿದ್ದು ಅವರಿಗೆ 1134 ರೂ. ಮೌಲ್ಯದ ತಾಯಿ ಮಡಿಲು ಕಿಟ್ ನೀಡಲಾಗಿದೆ ಎಂದರು. ಪಲ್ಸ್ ಪೋಲಿಯೊ ಇತರೆ ವ್ಯಾಕ್ಸಿನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ 40 ವಿದ್ಯಾರ್ಥಿಗಳಿಗೆ 90 ಲಕ್ಷ ರೂಗಳ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು. ಜಿಎನ್ ಎಮ್ ಮತ್ತು ನರ್ಸಿಂಗ್ ತಲಾ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.ಈ ಭಾಗದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹಾವಿದ್ಯಾಲಯ ತನ್ನ ಸಹಾಯ ಸಹಕಾರ ನೀಡುತ್ತಿದೆ ಎಂದರು. ಮಹಾವಿದ್ಯಾಲಯದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಅವರಿಗೆ ಉತ್ತೇಜನ ನೀಡಲು ಮುಂದಿನ ದಿನಗಳಲ್ಲಿ ಬೃಹತ  ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ರಿಜಿಸ್ಟ್ರಾರ್ ಟಿ.ಶ್ರೀನಿವಾಸ ಸೇರಿದಂತೆ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು ಇದ್ದರು.

Comments

Popular posts from this blog