ನಗರದಲ್ಲಿ ಮಾ. 28ರಂದು ವಿದ್ವಾನ್ ಸಿ.ಜಿ.ವಿಜಯಸಿಂಹಾಚಾರ್ಯ ರಿಂದ ಉಪನ್ಯಾಸ


 ನಗರದಲ್ಲಿ ಮಾ .28ರಂದು ವಿದ್ವಾನ್ ಸಿ.ಜಿ.ವಿಜಯಸಿಂಹಾಚಾರ್ಯ ರಿಂದ ಉಪನ್ಯಾಸ
   ರಾಯಚೂರು ,ಮಾ.23- ಖ್ಯಾತವಾಗ್ಮಿಗಳು, ಅಧ್ಯಾತ್ಮಿಕ ಚಿಂತಕರು ವಿದ್ವಾನರಾದ ಶ್ರೀ ಸಿ.ಜಿ. ವಿಜಯ ಸಿಂಹಾಚಾರ್ಯ ಇವರಿಂದ ಇದೇ ಮಾ. 28ರಂದು ಗುರುವಾರ ಸಂಜೆ  5.30 ಕೆ ನಗರದ ಕರ್ನಾಟಕ ಸಂಘದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
    ಇವರು ಕನಕದಾಸರ ಸಾಹಿತ್ಯದಲ್ಲಿ ಕಾವ್ಯ ಸೂಕ್ಷ್ಮಗಳು ಮತ್ತು ಪ್ರಮೇಯಗಳು ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಲಿದ್ದಾರೆ.
  ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ಅವರು ದಿ. ಜಯಚಾರ್ ಕೊಪ್ಪರ್  ನಿವೃತ್ತ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸ್ಮರಣಾರ್ಥ ಹಮ್ಮಿಕೊಂಡ ದಾಸ ಸಾಹಿತ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.
   ವಿದ್ವಾನ್ ಸಿ.ಜಿ. ವಿಜಯಸಿಂಹಾಚಾರ್ಯರು ಭಾಗವತ, ವೇದ,ಉಪನಿಷತ್,
ಮುಂತಾದ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದಿದ್ದು, ಇವರು ಉಡುಪಿಯ ಪ್ರಾಥಸ್ಮರಣೀಯರಾದ ಪೇಜಾವರ ಶ್ರೀಗಳವರಲ್ಲಿ ಮತ್ತು ವಿದ್ಯಾ ವಾಚಸ್ಪತಿಗಳಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ರಲ್ಲಿ ವಿದ್ಯಾಭ್ಯಾಸವನ್ನು  ಕೈಗೊಂಡಿದ್ದಾರೆ.
     ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಹಲವಾರು ವಿಷಯಗಳ ಮೇಲೆ ಉಪನ್ಯಾಸವನ್ನು ನೀಡಿ ಗಮನ ಸೆಳೆದಿದ್ದಾರೆ.
    ಉಪನ್ಯಾಸ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಬೇಕೆಂದು ದತ್ತಿ ದಾನಿಗಳಾದ ಶ್ರೀಮತಿ ಲಲಿತಾಬಾಯಿ ಕೊಪ್ಪರ್  ಇವರ ಮಕ್ಕಳಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ,
ಹರೀಶ್ ಆಚಾರ್ ಕೊಪ್ಪರ್ ಇವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್