ಹೋಳಿ ಹಬ್ಬದ ಕವನ
ಹೋಳಿ ಹಬ್ಬದ ಕವನ. ಹೋಳಿ ಹೋಳಿ ಹಬ್ಬ ಬಂತಣ್ಣ ಸಂತಸ ತಂತಣ್ಣ
ಕಾಮ ದಹನ ಮಾಡಣ್ಣ ಮನದ
ಕಾಮಕ್ರೋಧ ಬಿಡಬೇಕಣ್ಣ
ಏಳು ಬಣ್ಣ ವಿವಿಧ
ನೋಡಣ್ಣ
ಸಪ್ತ ಗಿರಿ ವಾಸನನ್ನ
ನೆನೆಯಣ್ಣ
ಕಾಮ ಗೆದ್ದವವನನ್ನ
ಪ್ರಲ್ಹಾದನನ್ನು
ಹೋಲಿಕಾಳಿಂದ ಕಾಯ್ದವವನನ್ನ
ಬಣ್ಣ ಬಣ್ಣದ
ಸೊಬಗು ನೋಡಣ್ಣ
ತಣ್ಣೀರಿನ ಪಿಚಕಾರಿ
ತಂಪು ತಂಪಣ್ಣ
ಕಾಮನೆಗಳ ಸುಟ್ಟು ಹಾಕಣ್ಣ ಕಾಮ ದಹನ
ಮಾದರಿಯಣ್ಣ
ಜೀವನ ಒಂದು ವೈವಿಧ್ಯಮಯವಣ್ಣ
ನಲಿಯುತ ಕಲಿಯುತ
ಸ್ವಾಗತಿಸೋಣಣ್ಣ
ಮನೆ ಮನೆ ತೆರಳಿ
ಬಣ್ಣ ಹಚ್ಚುತ ಮೈ
ಮರೆಯುತ ಸ್ನೇಹಿತ
ರೆಲ್ಲರೂ ಒಂದಾಗೋಣ
ಹಬ್ಬದ ನೆವದಲ್ಲಿ ಭಾವೈಕ್ಯತೆಯ ಬಿತ್ತೋಣಣ್ಣ ಶಾಂತಿ
ಸಮಾಧಾನ ಜೀವನದಲ್ಲಿ ಸಂತೋಷ
ಬಲು ಮುಖ್ಯವಣ್ಣ
ಕಾಮದಹನದ ಮೂಲಕ ದ್ವೇಷ ಅಸೂಯೆ ಮಾಯಾ
ಮೋಹ ಸುಟ್ಟ ಹಾಕೋಣ ಬಣ್ಣ ಹಚ್ಚಿ ಕುಣಿ ಕುಣಿದಾಡೋಣ ಲೇಖಕರು: ಶ್ರೀಮತಿ ಭಾರತಿ ಕುಲಕರ್ಣಿ, ರಾಯಚೂರು.
Comments
Post a Comment