ನನ್ನ ಮೇಲೆ ಕಾಣದ ಕೈಗಳಿಂದ ದ್ವೇಷ ಸಾಧನೆ: ನೀರಿನ ಕರ ಪಾವತಿಸಿದರೂ ಶಿಕ್ಷಣ ಸಂಸ್ಥೆಗೆ ನೀರು ಬರುತ್ತಿಲ್ಲ-ಎಸ್.ಆರ್.ರೆಡ್ಡಿ.

 


ನನ್ನ ಮೇಲೆ ಕಾಣದ ಕೈಗಳಿಂದ ದ್ವೇಷ ಸಾಧನೆ:                                     ನೀರಿನ ಕರ ಪಾವತಿಸಿದರೂ ಶಿಕ್ಷಣ ಸಂಸ್ಥೆಗೆ  ನೀರು ಬರುತ್ತಿಲ್ಲ-ಎಸ್.ಆರ್.ರೆಡ್ಡಿ.                                 ರಾಯಚೂರು,ಮಾ.27- ನನ್ನ ಮೇಲೆ ಕಾಣದ ಕೈಗಳಿಂದ ದ್ವೇಷ ಸಾಧಿಸಲಾಗುತ್ತಿದ್ದು ನಗರಸಭೆಗೆ ನೀರಿನ ಕರ ಪಾವತಿಸಿದರೂ ನೀರು ಬರುತ್ತಿಲ್ಲವೆಂದು ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ಮಾಜಿ ಶಾಸಕ ಎಸ್.ಆರ್.ರೆಡ್ಡಿ ಹೇಳಿದರು.                                                      ಅವರಿಂದು ನವೋದಯ ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆ ಕಳೆದ 32 ವರ್ಷದಿಂದ ಸಮಾಜ ಮುಖಿಯಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು ಕೆಲ ಕಾಣದ ಕೈಗಳು ದ್ವೇಷ ಸಾಧನೆಯಲ್ಲಿ ತೊಡಗಿವೆ ಎಂದರು.          ನಮ್ಮ ಸಂಸ್ಥೆಯ ಆಸ್ಪತ್ರೆ ಮತ್ತು ಕಾಲೇಜು ಹಾಗೂ ವಸತಿ ನಿಲಯಕ್ಕೆ ದಿನಾಲೂ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆಯಿದ್ದು ಅದಕ್ಕೆ ತಕ್ಕಂತೆ ನಗರಸಭೆಗೆ ನೀರಿನ ಕರ ಪಾವತಿ ಮಾಡಿದರು ನಮಗೆ ನೀರು ಸಿಗುತ್ತಿಲ್ಲ ಎಂದರು. ನಮ್ಮ ಶಿಕ್ಷಣ ಸಂಸ್ಥೆಗೆ ಮುಖ್ಯ ಪೈಪ್ ಮೂಲಕ ಲಕ್ಷಾಂತರ ರೂ. ಸ್ವಂತ ವೆಚ್ಚದಲ್ಲಿ ಪೈಪ್ ಲೈನ್ ಮಾಡಿದರು ಪ್ರಭಾವಿಗಳು ಅದಕ್ಕೆ ರಂದ್ರ ಕೊರೆದು ತಮ್ಮ ಮನೆಗಳಿಗೆ ನೀರು ಬಿಟ್ಟು ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ನಗರಸಭೆಗೆ ಆಸ್ತಿ ಕರ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲವೆಂದ ಅವರು                        ಕ್ಷುಲ್ಲಕ ರಾಜಕೀಯದಲ್ಲಿ ಮೂಗು ತೂರಿಸಲು ನನಗೆ ಆಸಕ್ತಿಯಿಲ್ಲ  ಮತ್ತು ಸಣ್ಣ ಪುಟ್ಟ ವಿಚಾರಕ್ಕೆ ನಮ್ಮ ಸಂಸ್ಥೆಯ ವೈದ್ಯರು , ವಿದ್ಯಾರ್ಥಿಗಳು ಸಿಬ್ಬಂದಿಗಳನ್ನು ಬೀದಿಯಲ್ಲಿ ಹೋರಾಟಕ್ಕೆ ಕೂಡಿಸಲು ಆಗುವುದಿಲ್ಲವೆಂದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ