ನಗರದಲ್ಲಿ ಶ್ವಾನ ಕಳ್ಳರ ಹಾವಳಿ: ಹಗ್ಗ ಸಮೇತ ಮನೆಗಳಿಗೆ ದಾಳಿ ಮಾಡುವ ಖದೀಮರು
ನಗರದಲ್ಲಿ ಶ್ವಾನ ಕಳ್ಳರ ಹಾವಳಿ: ಹಗ್ಗ ಸಮೇತ ಮನೆಗಳಿಗೆ ದಾಳಿ ಮಾಡುವ ಖದೀಮರು ರಾಯಚೂರು,ಮಾ.22- ನಗರದಲ್ಲಿ ನಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ . ಓಣಿಗಳಲ್ಲಿ ಸುಳಿದಾಡುವ ಖದೀಮರು ಮನೆಗಳ್ಳಲ್ಲಿ ಸಾಕಿರುವ ನಾಯಿ ಮರಿಗಳನ್ನು ಹೊತ್ತೊಯುತ್ತಾರೆ.
ಉತ್ತಮ ತಳಿಗಳ ನಾಯಿ ಮರಿಗಳನ್ನು ಕಳುವು ಮಾಡಿ ದುಬಾರಿ ಬೆಲೆಗೆ ಮಾರಿಕೊಳ್ಳುವ ಧಂದೆ ಮಾಡುತ್ತಿದ್ದಾರೆ. ಹಗ್ಗ ಹಿಡಿದುಕೊಂಡು ಬರುವ ಕಳ್ಳರು ಮನೆಯಲ್ಲಿ ಯಾರು ಇರದಿರುವುದನ್ನು ನೋಡಿ ಅವುಗಳ ಕಾಲು ಕಟ್ಟಿ ಹೊತ್ತೊಯುತ್ತಾರೆ ಇದರಿಂದ ಶ್ವಾನ ಮಾಲೀಕರಲ್ಲಿ ಆತಂಕ ಮನೆ ಮಾಡಿದ್ದು ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಶ್ವಾನ ಪ್ರಿಯರು ಒತ್ತಾಯವಾಗಿದೆ.
Comments
Post a Comment