ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಕಾರ್ಯಕರ್ತರಿಂದ ಭವ್ಯ ಸ್ವಾಗತ: ಜಿಲ್ಲೆ ನನಗೆ ತವರು ಮನೆಯಿದ್ದಂತೆ- ಕುಮಾರ್ ನಾಯಕ.

 


ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಕಾರ್ಯಕರ್ತರಿಂದ ಭವ್ಯ ಸ್ವಾಗತ:                                                          ಜಿಲ್ಲೆ ನನಗೆ ತವರು ಮನೆಯಿದ್ದಂತೆ- ಕುಮಾರ್ ನಾಯಕ.                                                             ರಾಯಚೂರು,ಮಾ.30- ಜಿಲ್ಲೆ ನನಗೆ ತವರು ಮನೆಯಿದ್ದಂತೆ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಹೇಳಿದರು.                                          ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರ ನಾನು  1999 ರಿಂದ 2002 ರವರೆಗೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಮಾಡಿದ್ದೇನೆ ಇಲ್ಲಿನ ಸಮಸ್ಯೆಗಳು ಬಗ್ಗೆ ಅರಿವಿದೆ ದೋಆಬ್ ಪ್ರದೇಶದೊಂದಿಗೆ ಅವಿನಾಭಾವ ಸಂಬಂಧವಿದೆ ಎಂದರು. ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಬಳಿಕ ನನಗೆ ಜನರ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡುವ ಗುರಿಯೊಂದಿಗೆ ಚುನಾವಣೆಗೆ ಸ್ಪರ್ದಿಸಿದ್ದೇನೆಂದ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಇನ್ನಿತರ ಮುಖಂಡರು ನನಗೆ ಅವಕಾಶ ನೀಡಿದ್ದಾರೆ ಅದೆ ರೀತಿ ಜಿಲ್ಲೆಯ ಹಿರಿಯ ನಾಯಕರಾದ ಎನ್.ಎಸ್.ಬೋಸರಾಜು, ಎ.ವಸಂತಕುಮಾರ ಮತ್ತಿತರರು ನನಗೆ ಜಿಲ್ಲೆಯ ರಾಜಕೀಯ ಕುರಿತು ಮಾರ್ಗದರ್ಶನ ಮಾಡಿದ್ದು ಎಲ್ಲರೊಂದಿಗೆ ಒಗ್ಗಟ್ಟು ಮೂಲಕ ಮುನ್ನಡೆಯುತ್ತೇನೆ ಎಂದರು.

ನನಗೆ ನನ್ನ ಹಿರಿಯರು ಕುಮಾರ್ ನಾಯಕನೆಂದು ನಾಮಕರಣ ಮಾಡಿದ್ದು ಕುಮಾರ್ ನಾಯಕ ಎಂಬುವವರು ಇಲ್ಲಿನ ಕೆಲ ದೊರೆಗಳು ಹೆಸರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರು ಎಂದರು. ಬೆಂಗಳೂರು ಮುಂತಾದ ಮಹಾ ನಗರಗಳಲ್ಲಿ ಮನೆ ಬಾಡಿಗೆ ಕರಾರು ಹನ್ನೊಂದು ತಿಂಗಳಿಗೆ ನೀಡುತ್ತಾರೆ ನೀವು ಯಾವುದೆ ಕರಾರು ಪತ್ರವಿಲ್ಲದೆ ಐದು ವರ್ಷ ನಿಮ್ಮ ಜಿಲ್ಲೆಯ ಸಂಸದನಾಗಿರಲು ಅವಕಾಶ ನೀಡುತ್ತೀರಿ ಎಂಬ ವಿಶ್ವವಾಸವಿದೆ ಎಂದರು. ಮೋದಿ ನೇತೃತ್ವದ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ ಈ ಬಾರಿ ಮೋದಿ ಅಧಿಕಾರದಿಂದ ಕೆಳಗಿಳಿಯುವದು ಗ್ಯಾರಂಟಿ ಎಂದರು.

ರಾಹುಲ ಗಾಂಧಿ ಭಾರತ ಜೋಡೋ ಯಾತ್ರೆ ಮುಖಾಂತರ ದೇಶವನ್ನು ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ ಎಂದರು. ನಾನು ನಿಶ್ಚಿತವಾಗಿ ಗೆಲ್ಲುತ್ತೇನೆ ಆಗ ರಾಯಚೂರು ಜಿಲ್ಲೆಯ ಸಮಸ್ಯೆಗಳ ಧ್ವನಿ ಪಾರ್ಲಿಮೆಂಟ್ ನಲ್ಲಿ ಮೊಳಗಿಸುತ್ತೇನೆಂದದು. ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ ಕುಮಾರ್ ನಾಯಕ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಜಿಲ್ಲೆಯ ಜನರ ಬಗ್ಗೆ ಒಡನಾಟವಿದೆ ಎಂದ ಅವರು ಬಿಜೆಪಿ ವಿರೋಧಿ ಪಕ್ಷಗಳನ್ನು ದಮನ ಮಾಡುತ್ತಿದೆ ಕಾಂಗ್ರೆಸ್ ಪಕ್ಷಕ್ಕೆ ಸಾವಿರಾರು ಕೋಟಿ ರೂ ಆದಾಯ ತೆರಿಗೆ ಕಟ್ಟಬೇಕೆಂದು ನೋಟೀಸ್ ನೀಡಿದೆ ನಾವು ವಿರೋಧಿಗಳ ಕುತಂತ್ರಕ್ಕೆ ಹೆದರುವುದಿಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎ .ವಸಂತಕುಮಾರ ಮಾತನಾಡಿ ಉತ್ತಮ ಅಭ್ಯರ್ಥಿ ನಿಮ್ಮ ಮುಂದೆ ಇದ್ದಾರೆ ನೀವೆಲ್ಲರೂ ಅವರನ್ನು ಗೆಲ್ಲಿಸಬೇಕೆಂದ ಅವರು ಬಿಜೆಪಿಗರು ನೀಡುವ ಸುಳ್ಳು ಭರವಸೆಗಳಿಗೆ ಮಾರು ಹೋಗದಿರಿ ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನು ನೋಡಿ ಕಾಂಗ್ರೆಸ್ ಬೆಂಬಲಿಸಿ ಎಂದರು. ಮುಖಂಡರಾದ ಪಾರಸಮಲ್ ಸುಖಾಣಿ, ಕೆ.ಶಾಂತಪ್ಪ ಇನ್ನಿತರರು ಮಾತನಾಡಿದರು. ಪ್ರಾಸ್ತಾವಿಕವಾಗಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಸವರಾಜ ರೆಡ್ಡಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ವೇದಿಕೆ ಮೇಲೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರು, ಮಾಜಿ ಶಾಸಕ ಸೈಯದ್ ಯಾಸೀನ್,ಬಸವರಾಜ ಪಾಟೀಲ ಇಟಗಿ,ಮೊಹಮ್ಮದ ಶಾಲಂ,ಜಿ. ಶಿವಮೂರ್ತಿ, ಶ್ರೀ ದೇವಿ ನಾಯಕ, ಜಯಣ್ಣ, ಬಶೀರುದ್ದೀನ್, ರುದ್ರಪ್ಪ ಅಂಗಡಿ ಸೇರಿದಂತೆ ಅನೇಕರು ಇದ್ದರು. ಅಮರೇಗೌಡ ಹಂಚಿನಾಳ ಸ್ವಾಗತಿಸಿದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.
ತೆರೆದ ವಾಹನದಲ್ಲಿ  ಮೆರವಣಿಗೆ: ಸಭೆಗೂ ಮುನ್ನ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ನೇತೃತ್ವದಲ್ಲಿ ಅಭೂತಪೂರ್ವ ಮೆರವಣಿಗೆ ನೆರವೇರಿತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ