ನಾಳೆ ಮಾಜಿ ಸಂಸದ ಬಿ.ವಿ.ನಾಯಕ ಬೆಂಬಲಿಗರ ಸಭೆ: ಹಾಲಿ ಸಂಸದರು ಐದು ವರ್ಷ ಜನರಿಂದ ದೂರವಿದ್ದರು- ತಿಮ್ಮಾರೆಡ್ಡಿ ಭೋಗಾವತಿ
ನಾಳೆ ಮಾಜಿ ಸಂಸದ ಬಿ.ವಿ.ನಾಯಕ ಬೆಂಬಲಿಗರ ಸಭೆ: ಹಾಲಿ ಸಂಸದರು ಐದು ವರ್ಷ ಜನರಿಂದ ದೂರವಿದ್ದರು- ತಿಮ್ಮಾರೆಡ್ಡಿ ಭೋಗಾವತಿ ರಾಯಚೂರು,ಮಾ.26- ಬಿಜೆಪಿ ಪಕ್ಷದ ಟಿಕೆಟ್ ವಂಚಿತ ಬಿ.ವಿ.ನಾಯಕ ಬೆಂಬಲಿಗರ ಸಭೆಯನ್ನು ನಾಳೆ ನಗರದಲ್ಲಿ ಕರೆಯಲಾಗಿದೆ ಎಂದು ಮುಖಂಡರಾದ ತಿಮ್ಮಾರೆಡ್ಡಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಳೆ ಬೆಳಿಗ್ಗೆ 11 ಕ್ಕೆ ಸಂತೋಷಿ ಹಬ್ ನಲ್ಲಿ ಬೆಂಬಲಿಗರ ಸಭೆ ಕರೆಯಲಾಗಿದ್ದು ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನ ಸಭಾ ಕ್ಷೇತ್ರದ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಲಿದ್ದು ಬಿ.ವಿ.ನಾಯಕರಿಗೆ ಬಿಜೆಪಿ ವರಿಷ್ಟರು ಮತ್ತೊಮ್ಮೆ ಪರಿಶೀಲಿಸಿ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುತ್ತದೆ ಎಂದರು. ಹಾಲಿ ಸಂಸದರು ಐದು ವರ್ಷ ಜನರಿಂದ ದೂರವಿದ್ದರು ಅವರ ಬಗ್ಗೆ ಜನರ ಅಸಮಾಧಾನ ಹಿನ್ನೆಲೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಿ.ವಿ.ನಾಯಕರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಆದರೆ ಅವರು ಟಿಕೆಟ್ ನೀಡದೆ ವಂಚನೆ ಮಾಡಿದ್ದು ಪಕ್ಷವು ಪುನರ್ ಪರಿಶೀಲಿಸಿ ಬಿ.ವಿ.ನಾಯಕರಿಗೆ ಅವಕಾಶ ನೀಡಬೇಕೆಂದ ಅವರು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಪಕ್ಷವನ್ನು ಗೆಲ್ಲಿಸಲು ನಾವು ಸಿದ್ಧವೆಂದ ಅವರು ಮೋದಿ ಅಲೆಯಲ್ಲಿ ಯಾರೆ ಅಭ್ಯರ್ಥಿಯಾದರು ಗೆಲುವು ಸಿದ್ಧ ಆದರೆ ನಮ್ಮ ಕ್ಷೇತ್ರದಲ್ಲಿ ಬದಲಾವಣೆ ಕಾರಣಕ್ಕಾಗಿ ಬಿ.ವಿ.ನಾಯಕರಿಗೆ ಟಿಕೆಟ್ ನೀಡಬೇಕೆಂದರು. ಈ ಸಂದರ್ಭದಲ್ಲಿ ವೀರಭದ್ರಪ್ಪಗೌಡ ,ಜಂಬಣ್ಣ ನೀಲಗಲ್, ವಿರೇಶ ನಾಯಕ, ಮಲ್ಲಿಕಾರ್ಜುನ , ನಾಗಲಿಂಗ ಸ್ವಾಮಿ, ಮಹಾಂತೇಶ ಪಾಟೀಲ ,ನರಸಿಂಹ ಕುಲಕರ್ಣಿ ಇತರರು ಉಪಸ್ಥಿತರಿದ್ದರು.
Comments
Post a Comment