ಮ್ಯಾಚ್ ಫಿಕ್ಸಿಂಗ್ ನಿಂದ ನನಗೆ ಟಿಕೆಟ್ ತಪ್ಪಿದೆ -ಬಿ.ವಿ.ನಾಯಕ
ಮ್ಯಾಚ್ ಫಿಕ್ಸಿಂಗ್ ನಿಂದ ನನಗೆ ಟಿಕೆಟ್ ತಪ್ಪಿದೆ -ಬಿ.ವಿ.ನಾಯಕ
ರಾಯಚೂರು,ಮಾ.25- ಮಾಜಿ ಸಂಸದ ಬಿ.ವಿ ನಾಯಕ್ ತಮಗೆ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ದಕ್ಕೆ ತೀರ್ವ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವ ಪಕ್ಷದವರ ವಿರುದ್ಧವೇ ಆರೋಪ ಮಾಡಿರುವ ಅವರು ಕಾಣದ ಕೈಗಳು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನನಗೆ ಪ್ರಾರಂಭದಿಂದಲು ಆತ್ಮ ವಿಶ್ವಾಸ ಮೂಡಿಸಿ ಟಿಕೆಟ್ ತಪ್ಪಿಸಿ ಬಲಿಪಶು ಮಾಡಿದ್ದಾರೆ ಎಂದು ಬಿ.ವಿ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಟಿಕೆಟ್ ಕೊಡುತ್ತೇನೆ ಎಂದು ಆಸೆ ತೋರಿಸಿದ್ದಾರೆ ಕ್ಷೇತ್ರದಾದ್ಯಂತ ಓಡಾಡಿ ಕಾರ್ಯ ಚಟುವಟಿಕೆ ಮಾಡು ಎಂದು ವರಿಷ್ಠರೇ ಹೇಳಿದ್ದರು ಎಂದರು.
ಹಿತಶತ್ರುಗಳ ಶಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ ಎಂದು ದೂರಿದ ಅವರು ಮೊದಲೇ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಆದ್ದರಿಂದ ನಾನು ಈಗಿನ ಚುನಾವಣೆಗೆ ತಟಸ್ಥನಾಗಿರುತ್ತೇನೆ ನನಗೆ ಟಿಕೆಟ್ ತಪ್ಪಿದ್ದಕ್ಕೆ ಲಕ್ಷಾಂತರ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮನದಾಳದ ಮಾತು ಹೇಳಿದ್ದಾರೆ.
Comments
Post a Comment