ಪೇರಸೋಮುಲಾ ಶ್ರೀ ವಿಷ್ಣುಕಾಂತಿ ಕ್ಷೇತ್ರದ ಶ್ರೀ ರಾಮ್ ಮೋಹನ್ ಸ್ವಾಮೀಜಿ ಆಶೀರ್ವಾದ ಪಡೆದ ಸಚಿವ ಎನ್ಎಸ್ ಬೋಸರಾಜು
ಪೇರಸೋಮುಲಾ ಶ್ರೀ ವಿಷ್ಣುಕಾಂತಿ ಕ್ಷೇತ್ರದ ಶ್ರೀ ರಾಮ್ ಮೋಹನ್ ಸ್ವಾಮೀಜಿ ಆಶೀರ್ವಾದ ಪಡೆದ ಸಚಿವ ಎನ್ಎಸ್ ಬೋಸರಾಜು
ರಾಯಚೂರು,ಮಾ.28-ನಗರದಲ್ಲಿ ಕರ್ನೂಲ್ ಜಿಲ್ಲೆಯ ನಂದ್ಯಾಳ್ ತಾಲೂಕಿನ ಪೇರಸೋಮುಲಾ ಶ್ರೀ ವಿಷ್ಣು ಕಾಂತಿ ಕ್ಷೇತ್ರದ ನರಸಿಂಹಲು ಸ್ವಾಮಿ ಶ್ರೀ ರಾಮ್ ಮೋಹನ್ ಸ್ವಾಮೀಜಿಗಳನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಭೇಟಿ ಮಾಡಿ ಸನ್ಮಾನಿಸಿ ಶ್ರೀಗಳ ಆಶೀರ್ವಾದ ಪಡೆದರು.
ನಗರದ ಜಟ್ರಾಮ್ ಶ್ರೀನಿವಾಸ್ ಅವರ ನಿವಾಸದಲ್ಲಿ ತಂಗಿದ್ದ ಶ್ರೀಗಳನ್ನು ಭೇಟಿ ಮಾಡಿದರು.
ಶ್ರೀಗಳು ಸಚಿವರಿಗೆ ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಟ್ರಮ್ ಶ್ರೀನಿವಾಸ್ ಅಯ್ಯ, ಜಟ್ರಮ್ ಗೋವಿಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment