ದಿ.ಜಯಾಚಾರ್ ಕೊಪ್ಪರ್ ಸ್ಮರಣಾರ್ಥ ದಾಸ ಸಾಹಿತ್ಯದತ್ತಿ ಉಪನ್ಯಾಸ :ಅಚ್ಚ ಕನ್ನಡದಲ್ಲಿ ಸಂಕೀರ್ತನೆಗಳನ್ನು ರಚಿಸಿದ ದಾಸ ಶ್ರೇಷ್ಠರು ಕನಕದಾಸರು- ವಿದ್ವಾನ್ ಸಿ ಜಿ ವಿಜಯ ಸಿಂಹಾಚಾರ್ಯ

 


ದಿ.ಜಯಾಚಾರ್ ಕೊಪ್ಪರ್ ಸ್ಮರಣಾರ್ಥ ದಾಸ ಸಾಹಿತ್ಯ ದತ್ತಿ ಉಪನ್ಯಾಸ:

ಅಚ್ಚ ಕನ್ನಡದಲ್ಲಿ ಸಂಕೀರ್ತನೆಗಳನ್ನು ರಚಿಸಿದ ದಾಸ ಶ್ರೇಷ್ಠರು ಕನಕದಾಸರು
-ವಿದ್ವಾನ್ ಸಿ ಜಿ ವಿಜಯ ಸಿಂಹಾಚಾರ್ಯ

 ರಾಯಚೂರು,ಮಾ.29-  ಸಾವಿರಾರು ಸಂಸ್ಕೃತ  ಕ್ಲಿಷ್ಟ ಪದಗಳನ್ನು ಸರಳ ಕನ್ನಡಕ್ಕೆ ತುರ್ಜಿಮೆ ಮಾಡಿ, ಸಂಕೀರ್ತನೆಗಳನ್ನು ರಚಿಸಿದ ಕೀರ್ತಿ ದಾಸ ಶ್ರೇಷ್ಠ ಕನಕದಾಸರಿಗೆ ಸಲ್ಲುತ್ತದೆ  ಎಂದು ಖ್ಯಾತ ವಿದ್ವಾಂಸರಾದ ಬೆಂಗಳೂರಿನ ಸಿ.ಜಿ ವಿಜಯಸಿಂಹಾಚಾರ್ ಅವರು ಹೇಳಿದರು.
 ಅವರು ಗುರುವಾರ  ಸಂಜೆ ನಗರದ  ಕರ್ನಾಟಕ ಸಂಘದಲ್ಲಿ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ
ದಿ. ಜಯಚಾರ್ ಕೊಪ್ಪರ ಇವರ ಸ್ಮರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನಕದಾಸರ ಸಾಹಿತ್ಯದಲ್ಲಿ ಕಾವ್ಯ ಸೂಕ್ಷ್ಮಗಳು ಮತ್ತು ಪ್ರಮೇಯಗಳು ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಿ ಮಾತನಾಡಿದರು.
     ಅವರು ಹರಿದಾಸರೆ ಇರಲಿ ವಚನಕಾರರೇ ಇರಲಿ ಅಜ್ಞಾನದ ವಿರುದ್ಧ ಬಂಡಾಯವನ್ನು ಹೂಡಿದವರೇ ಆಗಿದ್ದಾರೆ.



ಬಂಡಾಯದ ಮನಸ್ಥಿತಿ ವೇದಗಳ ಕಾಲದಿಂದಲೂ ನೋಡುತ್ತೇವೆ. ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಶ್ರೀ ಕನಕದಾಸರ ಕೀರ್ತನೆಗಳಲ್ಲಿಯೂ ಸಹ ಬಂಡಾಯವನ್ನು ಕಾಣುತ್ತೇವೆ.
ವೇದ ಉಪನಿಷತ್ತುಗಳ ಸಾರವನ್ನು ಕನಕದಾಸರು ಅಚ್ಚ ಕನ್ನಡದಲ್ಲಿ ಕಾವ್ಯಗಳನ್ನು
ರಚಿಸುವ ಮೂಲಕ ದಾಸ ಶ್ರೇಷ್ಠರಾಗಿದ್ದಾರೆ.
ಕವಿಗಳ ಮಾತು ಮೂರ್ತವಾದರೆ ಕವಿತ್ವ ಅಮೂರ್ತವಾಗಿದೆ.
    ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವ ಮಾತು ಯಾವುದೇ ವೃತ್ತಿಯ ನಿಂದನೆ ಯಾಗಿರುವುದಿಲ್ಲ. ವೃತ್ತಿಯ ಮೋಹಕ್ಕೆ ಒಳಗಾಗದೆ, ವೃತ್ತಿಯನ್ನು ಸಮರ್ಪಣಾ ಭಾವದಿಂದ ನೋಡಬೇಕು.


ಕನಕದಾಸರ ಕೀರ್ತನೆಗಳನ್ನು ತುಂಡು ತುಂಡಾಗಿ ನೋಡುವುದಕ್ಕಿಂತ ಸಂಪೂರ್ಣವಾಗಿ ಅಧ್ಯಯನ ಮಾಡಿದಾಗ ಮಾತ್ರ ಪರಿಪೂರ್ಣತೆ ಲಭ್ಯವಾಗುತ್ತದೆ ಎಂದು ಉಪನ್ಯಾಸದಲ್ಲಿ ಹೇಳಿದರು.
    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ವೀರ ಹನುಮಾನ ಮಾತನಾಡುತ್ತಾ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ದಾಸ ಸಾಹಿತ್ಯದ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುತ್ತಾ ಬಂದಿರುತ್ತಾರೆ. ಅವರ ಸಮರ್ಪಣ ಭಾವದಿಂದಲೇ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿತು, ಅವರ ತಂದೆಯವರಾದ ದಿ. ಜಯಚಾರ್ ಕೊಪ್ಪರ್ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಮತ್ತು ಉಪನ್ಯಾಸ ಮಾಡುವುದರ ಮೂಲಕ ದಾಸ ಸಾಹಿತ್ಯ ಸೇವೆಯನ್ನು ಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
                                                   ಸಮಾರಂಭದಲ್ಲಿ  ದಾಸ ಸಾಹಿತ್ಯ  ಕ್ಷೇತ್ರದಲ್ಲಿ
ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ ಯವರಿಗೆ ದಿ. ಜಯಚಾರ್ಯ ಕೊಪ್ಪರ್ ಇವರ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.


       ಅವರು ಪ್ರಶಸ್ತಿ ಸ್ವೀಕರಿಸಿ  ಮಾತಾಡುತ್ತಾ ದಿ. ಜಯಚಾರ್ ಕೊಪ್ಪರ ರವರು ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದಾಗ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನೂರಾರು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ದಂಡಾಧಿಕಾರಿಗಳಾಗಿದ್ದಾಗ 150ಕ್ಕೂ ಹೆಚ್ಚು ಕನ್ನಡದಲ್ಲಿ ತೀರ್ಪು ನೀಡಿದ ಕೀರ್ತಿ ಇವರದಾಗಿದೆ. ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ತಮ್ಮ ತಂದೆಯ ಸ್ಮರಣಾರ್ಥ ಕೊಡ ಮಾಡುತ್ತಿರುವ ಈ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗುತ್ತಿದೆ. ಎಂದು ಪ್ರಶಸ್ತಿ ಸ್ವೀಕರಿಸಿ  ಹೇಳಿದರು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವೇ. ಪಂ. ಮುಕುಂದಾಚಾರ್ಯ
ಜೋಶಿಯವರು ಮಾತನಾಡುತ್ತಾ  ಡಾ.
ಜಯಲಕ್ಷ್ಮಿ ಮಂಗಳಮೂರ್ತಿ ಅವರು  ತಂದೆಯನ್ನು ಸ್ಮರಿಸುತ್ತಾ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಬೇವಿನ ಬೆಂಚಿ ಮಾತನಾಡುತ್ತ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಟ್ಟ ದತ್ತಿದಾನಿಗಳಿಂದ ಅವರ ಹಿರಿಯರನ್ನು ಸ್ಮರಿಸುವ ಕಾರ್ಯ ನಿರಂತರವಾಗಿ ದತ್ತಿ ಉಪನ್ಯಾಸದ ಮೂಲಕ ಮಾಡುತ್ತಿದ್ದೇವೆ .ಇಂದು ದಿವಂಗತ ಜಯಚಾರ್ ಕೊಪ್ಪ ರವರ ದಾಸ ಸಾಹಿತ್ಯ ಸೇವೆಯನ್ನು ಸ್ಮರಿಸುತ್ತಾ ದತ್ತಿ ಉಪನ್ಯಾಸವನ್ನು ಹಮ್ಮಿಕೊಂಡಿರುವುದು ಸಾರ್ಥಕವೆನಿಸುತ್ತದೆ, ಎಂದು ಹೇಳಿದರು.
   ವೇದಿಕೆ ಮೇಲೆ ಸಮೀರ ಸಂಸ್ಕೃತಿಕ ಸೇವಾ ಸಮಿತಿಯ ಅಧ್ಯಕ್ಷರಾದ ಹನುಮಂತರಾವ್ ಕಲ್ಲೂರ್, ಕಾರ್ಯದರ್ಶಿಗಳಾದ ಹರೀಶ್ ಆಚಾರ್ಯ ಕೊಪ್ಪರ್
ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ ಉಪಸ್ಥಿತರಿದ್ದರು.
     .ಪ್ರಾಸ್ತಾವಿಕವಾಗಿ
ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಮಾತನಾಡಿದರು.
ಮುಖ್ಯ ಅತಿಥಿಗಳ ಪರಿಚಯವನ್ನು  ವಸುದೇಂದ್ರ ಸಿರವಾರ, ವೆಂಕಟೇಶ್ ನವಲಿ ಅವರು ಮಾಡಿಕೊಟ್ಟರು.
 
     ಕಾರ್ಯಕ್ರಮದಲ್ಲಿ ರಾವುತ್ ರಾವ್ ಬರೂರ, ಶ್ರೀಮತಿ ರೇಖಾ ಬಡಿಗೇರ್, ವೆಂಕಟರಾವ್ ಕುಲಕರ್ಣಿ, ರವೀಂದ್ರನಾಥ್ ಗುತ್ತಲ್, ಶ್ರೀನಿವಾಸ್ ಗಟ್ಟು, ಡಾ. ಶರಣಪ್ಪ ಗೋನಾಳ್ ನ್ಯಾಯವಾದಿಗಳಾದ ಕೆ. ಪ್ರಹ್ಲಾದ ರಾವ್, ಸುರೇಶ್ ಕಲ್ಲೂರ್, ರವೀಂದ್ರ ಕುಲಕರ್ಣಿ,
ರಮಾಕಾಂತ್ ಕುಲಕರ್ಣಿ, ಬ್ಯಾಂಕ್ ನರಸಿಂಗರಾವ್, ಪ್ರಸನ್ನ ಆಲಂಪಲ್ಲಿ ಮುಂತಾದವರು ಭಾಗವಹಿಸಿದ್ದರು.
   ಕರ್ನಾಟಕ ಸಂಘದಲ್ಲಿ ನೂರಾರು ಆಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 
ಮುರಳಿಧರ
ಕುಲಕರ್ಣಿ ನಿರೂಪಿಸಿದರು.  ಕೊಪ್ರೇಶ್ ದೇಸಾಯಿ ಮತ್ತು ತಂಡ ಪ್ರಾರ್ಥಿಸಿದರು. ಸ್ವಾಗತವನ್ನು ತಾಲೂಕ ಪರಿಷತ್ತಿನ ಖಜಾಂಚಿ ಡಾ. ಬಿ ವಿಜಯರಾಜೇಂದ್ರ ಮಾಡಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್