ಕಾನೂನು ಮತ್ತು ಸಂಸದೀಯ, ವ್ಯವಹಾರ ಸಚಿವ ಹೆಚ್. ಕೆ. ಪಾಟೀಲ್ 371 ಜೆ ಕಲಂ ಕುರಿತಾಗಿರುವ ಪತ್ರಕ್ಕೆ ಕರವೇ ಖಂಡನೆ


ಕಾನೂನು ಮತ್ತು ಸಂಸದೀಯ, ವ್ಯವಹಾರ  ಸಚಿವ ಹೆಚ್. ಕೆ. ಪಾಟೀಲ್ 371 ಜೆ ಕಲಂ ಕುರಿತಾಗಿರುವ ಪತ್ರಕ್ಕೆ ಕರವೇ ಖಂಡನೆ


ರಾಯಚೂರು,ಏ.10- ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ (ಕಲ್ಯಾಣ ಕರ್ನಾಟಕ) ದಶಕಗಳ 371 ಜೆ ಕಲಂ ಹೋರಾಟ ಯಶಸ್ವಿಯಾಗಿ ದೊರಕಿದ ಪ್ರತಿಫಲವೇ 371 ಜೆ ತಿದ್ದುಪಡಿ ಜಾರಿಯಾಗಿರುವದು. 

371 ಜೆ ತಿದ್ದುಪಡಿ ಜಾರಿಯಾಗಿ ಇತ್ತೀಚೆಗೆ 10 ವರ್ಷಗಳಾಗುತ್ತಿದೆ. ಈ ತಿದ್ದುಪಡಿ ಜಾರಿಯಾದ ನಂತರ ಕಲ್ಯಾಣ ಕರ್ನಾಟಕಕ್ಕೆ ಎಷ್ಟು ಲಾಭ ಆಗಿದೆ ? ಎನ್ನುವುದು ಎಚ್ ಕೆ ಪಾಟೀಲರಿಗೆ ಏನಾದರೂ ಅಂಕಿ ಅಂಶ ಗೊತ್ತಿದೆಯೇ?. ಅವರೆ ಪತ್ರದಲ್ಲಿ ತಿಳಿಸಿದ ಪ್ರಕಾರ 24 ಜಿಲ್ಲೆಗಳಿಗೆ ಅನ್ಯಾಯ ಆಗುತ್ತಿರುವುದು, ತಮ್ಮ ಪತ್ರದಲ್ಲಿ ಬರೆದು ಮುಖ್ಯ ಮಂತ್ರಿಗಳಿಗೆ ಗಮನಕ್ಕೆ ತಂದಿದ್ದಿರಲ್ಲ!!!  ಏನು ಅಂಕಿ ಅಂಶಗಳು ನಿಮ್ಮಲ್ಲಿದೆ ??. 371 ಜೆ ಕಲಂ ವೃಂದಗಳಲ್ಲಿ 24 ಜಿಲ್ಲೆಗೆ ಅನ್ಯಾಯವಾಗಿರುವುದನ್ನು ಪತ್ರ ಬರೆಯುತ್ತಿದ್ದೀರಲ್ಲ. ಇದಕ್ಕೆ ಹೈದರಾಬಾದ್ ಕರ್ನಾಟಕದಲ್ಲಿರುವ ಆಡಳಿದಲ್ಲಿರುವ, ಮಂತ್ರಿಗಳು ಮೌನ ಏಕೆ??. ಸಚಿವ ಬೋಸರಾಜ್ ರವರ ಅಷ್ಟೇ, ಇದರ ಬಗ್ಗೆ ನನ್ನ ಗಮನಕ್ಕೆ ಇಲ್ಲ, ನಾನು ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾತನಾಡುತ್ತೇನೆಂದು ತಿಳಿಸಿರುತ್ತಾರೆ. ಉಳಿದ ಕಲ್ಯಾಣ ಕರ್ನಾಟಕದ ಮಂತ್ರಿಗಳು, ಶಾಸಕರು ಪಕ್ಷಭೇದ ಮರೆತು ಇದರ ಕುರಿತು ಯಾಕೆ ಖಂಡಿಸುತ್ತಿಲ್ಲ??. ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೇಂದ್ರದಲ್ಲಿ ಮಂತ್ರಿಗಳಾಗಿ ರುವಾಗ, ಅವರ ಪರಿಶ್ರಮವೇ ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಕಲಂ ಜಾರಿಯಾಗಿದೆ. ಈಗ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿಗಳು ಹೆಚ್. ಕೆ ಪಾಟೀಲರ ಪತ್ರಕ್ಕೆ 371ಜೆ ತಿದ್ದುಪಡಿಯ ರೂವಾರಿಗಳಾದ ಮಲ್ಲಿಕಾರ್ಜುನ ಖರ್ಗೆ ಜಿಯ ಸುಪುತ್ರರು ಮತ್ತು ಮಂತ್ರಿಗಳಾದ ಪ್ರಿಯಾಂಕ ಖರ್ಗೆ ಅವರು ಮೌನವೆಕೇ ?ಹೆಚ್. ಕೆ ಪಾಟೀಲರಿಗೆ ಬೆಂಬಲುಸುತ್ತಿದ್ದಾರೆಯೇ ? ಯಾಕೆ ಅವರು ಮೌನವಾಗಿದ್ದಾರೆ. ಬರಿ ಅವರಿಗಲ್ಲದೆ ಕರವೇ ಸಂಘಟನೆಯ ಪ್ರಶ್ನೆ ಎಲ್ಲಾ ಮಂತ್ರಿಗಳಿಗೂ, ಕ.ಕ. ದ ಎಲ್ಲ ಶಾಸಕರಿಗೂ ನಮ್ಮ ನೇರ ಪ್ರಶ್ನೆ ??  371 ಜೆ ತಿದ್ದುಪಡಿ ನಿರಂತರವಾಗಿ ಕಲ್ಯಾಣ ಕರ್ನಾಟಕಕ್ಕೆ ಮುಂದುವರೆಯಬೇಕು. ಕಾನೂನು ಸಂಸದೀಯ ಮಂತ್ರಿಗಳ ಪತ್ರಕ್ಕೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಸಿ ಕೆ ಜೈನ  ತೀವ್ರವಾಗಿ ಖಂಡಿಸಿದ್ದಾರೆ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಹೋರಾಟಕ್ಕೆ ತಡೆಹಿಡಿಯಲಾಗಿದೆ. ಈ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಇದಕ್ಕೆ ತೆರೆ ಎಳೆಯಬೇಕೆಂದು ಸಂಘಟನೆ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ