371 (ಜೆ) ತಡೆಗೆ ಪತ್ರ ಸಚಿವ ಎಚ್ ಕೆ ಪಾಟೀಲ್ ಹೇಳಿಕೆಗೆ ಬಾಬುರಾವ ತೀವ್ರ ಖಂಡನೆ
371 (ಜೆ) ತಡೆಗೆ ಪತ್ರ ಸಚಿವ ಎಚ್ ಕೆ ಪಾಟೀಲ್ ಹೇಳಿಕೆಗೆ ಬಾಬುರಾವ ತೀವ್ರ ಖಂಡನೆ
ರಾಯಚೂರು, ಏ.10- ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಗೆ ಜಾರಿಗೆ ಬಂದಿರುವ 371ಜೆ ಮೀಸಲಾತಿಯನ್ನು ತಡೆಹಿಡಿಯುವಂತೆ ಪತ್ರ ಬರೆದ ಸಚಿವ ಹೆಚ್ ಕೆ ಪಾಟೀಲ್ ಹೇಳಿಕೆಯನ್ನು ಸಮಾಜ ಸೇವೆಕ ಡಾ. ಬಾಬುರಾವ ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಆರ್ಥಿಕವಾಗಿ ತೀವ್ರ ಹಿಂದುಳಿದಿದ್ದು ಈ ಬೆನ್ನಲೇ ಸಚಿವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಆರ್ಥಿಕ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ 371ಜೆ ಮೀಸಲಾತಿ ಅನುಷ್ಠಾನ ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದ 24 ಜಿಲ್ಲೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಅನ್ಯಾಯವಾಗುತ್ತಿರುವ ಹಿನ್ನೆಲೆ 371ಜೆ ಕಲಂ ಅಡಿ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ ಪ್ರಕ್ರಿಯೆಯನ್ನು ತಡೆಯಬೇಕೆಂದಿರುವುದು ಹೇಳಿಕೆ ಖಂಡನೀಯ ಎಂದರು.ಕಲ್ಯಾಣ ಕರ್ನಾಟಕೇತರ ಆಭ್ಯರ್ಥಿಗಳ ಹಿತದೃಷ್ಟಿಯಿಂದ ಕರ್ನಾ ಟಕ ಲೋಕಸೇವಾ ಆಯೋಗ, ಕನಾ ೯ಟಕ ಪರೀಕ್ಷಾ ಪ್ರಾಧಿಕಾರ, ಕೇಂದ್ರಿ ಕೃತ ದಾಖಲಾತಿ ಘಟಕ ಸಂಸ್ಥೆಗಳ ನೇಮಕಾತಿಯಲ್ಲಿ ಸಂವಿಧಾನದ ಕಲಂ 371(ಜೆ) ದಡಿ ಮೀಸಲಾತಿ ಮುಂದುವರೆಸದಂತೆ ಸಚಿವ ಎಚ್.ಕೆ ಪಾಟೀಲ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ವರದಿಯಾಗಿದೆ.ಈ ಭಾಗದ ಅಭಿವೃದ್ಧಿ 370 ಜೆ ಸಹಕಾರಿಯಾಗಿದೆ. 370ಕಲಂನಡಿ ಈ ವರೆಗೆ ಶೈಕ್ಷಣಿಕವಾಗಿ ಉತ್ತಮ ಅವಕಾಶ ದೊರೆತಿದ್ದರೂ ಉದ್ಯೋಗ ಅವಕಾಶ, ಮುಂಬಡ್ತಿ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಹೆಚ್ ಕೆ ಪಾಟೀಲ್ ಅವರು ತಡೆ ಕುರಿತು ಹೇಳಿಕೆ ನೀಡಿರುವುದು ಸರಿಯಲ್ಲ. ಇನ್ನು ಭಾಗ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿಜಾಮರ ಕಾಲದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತೇಕ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ. ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ 371 ಅತ್ಯಂತ ಸಹಕಾರಿಯಾಗಿದೆ ಎಂದರು.ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಓರ್ವ ಅಭ್ಯರ್ಥಿ ಪ್ರಕರಣದಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆದೇಶವನ್ನೆ ಮುಂದಿಟ್ಟು ಈ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸದಂತೆ ಇಲಾಖೆ ಹಂತದಲ್ಲಿಯೆ ಕೆ.ಎ.ಟಿ ಆ ದೇಶ ಮತ್ತು ಸಾರ್ವಜನಿಕರಿಂದ ಬಂದಿರುವ ದೂರು ಪರಿಶೀಲನೆ ನಡೆಸಲುಸಮಿತಿಯೊಂದನ್ನು ರಚಿಸಬೇಕು. ಸಮಿತಿ ವರದಿ ಬರವವರೆಗೆ ಮೀಸಲಾತಿ ಮುಂದುವೆಸದಂತೆ ಬರೆದಿರುವುದು ಅತ್ಯಂತ ಖಂಡನೀಯ.
ಕಾರಣ ಸಂವಿಧಾನ ಕಲಂ 371 (ಜೆ) ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಯಥಾವತ್ತಾಗಿ ಮುಂದು ವರೆಸಬೇಕು. ಅನ್ಯ ಜಿಲ್ಲೆ ಅಭ್ಯರ್ಥಿಗಳಿಗೆ ಅನ್ಯಾಯ ಆಗುವ ವಿಚಾರ ಮುಂದಿಟ್ಟುಕೊಂಡು ಸರಕಾರಕ್ಕೆ ದ್ರೋಹ ಬಗೆದಿರುವ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
Comments
Post a Comment