ಮುಂಜಿವೆ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ.

 


ಮುಂಜಿವೆ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ.               ರಾಯಚೂರು,ಏ.30- ಲೋಕಸಭಾ ಚುನಾವಣೆ ಮತದಾನಕ್ಕೆ ದಿನ ಗಣನೆ ಪ್ರಾರಂಭವಾಗಿದ್ದು ಈ ಬಾರಿ ಮತದಾನ ಹೆಚ್ಚಳವಾಗಬೇಕೆಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ ಇದರೊಟ್ಟಿಗೆ ವಿವಿಧ ಸಂಘ ಸಂಸ್ಥೆಗಳು, ಸಮಾಜ ಸೇವಕರು ಶೇ.100 ರಷ್ಟು

ಮತದಾನವಾಗಬೇಕೆಂಬ ಉದ್ದೇಶದಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ ವಿವಿಧ ಶುಭ ಸಮಾರಂಭದಲ್ಲಿ ವಿವಿಷ್ಟ ಬಗೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಅದರಂತೆ ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ ಸುಪುತ್ರ ರಘುಮಾನ್ಯನ ಉಪನಯನ                             

( ಮುಂಜಿವೆ) ಕಾರ್ಯಕ್ರಮದಲ್ಲಿ   ಮತದಾನ ಜಾಗೃತಿಯನ್ನು ರಾಜೇಂದ್ರಶಿವಾಳೆ ಮಾಡಿದರು ಶೇ.100 ರಷ್ಟು ಮತದಾನ ಮಾಡಬೇಕು ಆ ಮೂಲಕ ನಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕೆಂದು ಕೋರಿದರು .

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್