ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ : ದೇಶದ ಭದ್ರತೆ ಹಾಗೂ ವಿಕಾಸಕ್ಕೆ ಆದ್ಯತೆ-ರಾಜಾ ಅಮರೇಶ್ವರ ನಾಯಕ
ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ : ದೇಶದ ಭದ್ರತೆ ಹಾಗೂ ವಿಕಾಸಕ್ಕೆ ಆದ್ಯತೆ-ರಾಜಾ ಅಮರೇಶ್ವರ ನಾಯಕ ರಾಯಚೂರು,ಏ.15- ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿಂದು ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು
ನೀಡಿರುವ ಸಂಕಲ್ಪ ಪತ್ರದ ಕುರಿತಂತೆ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಸಂಸದರು ಹಾಗೂ ರಾಯಚೂರು ಲೋಕಸಭಾ ಚುನಾವಣೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿದರು. ಬಿಜೆಪಿ ಪಕ್ಷ ದೇಶದ ಐಕ್ಯತೆ ಮತ್ತು ಸುರಕ್ಷತೆ ಹಾಗೂ ವಿಕಾಸಕ್ಕೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ನಗರ ಶಾಸಕರಾದ ಡಾ.ಶಿವರಾಜ್‌ಪಾಟೀಲ್ , ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶಂಕರೆಡ್ಡಿ, ನಗರಾಧ್ಯಕ್ಷರಾದ ಉಟ್ಕೂರು ರಾಘವೇಂದ್ರ, ಜಿಲ್ಲಾ ರೈತಮೋರ್ಚಾದ ಅಧ್ಯಕ್ಷರಾದ ಸಿದ್ಧನಗೌಡ ನೆಲಹಾಳ್, ಜಿಲ್ಲಾ ಮಾಧ್ಯಮ ವಕ್ತಾರರಾದ ಕೆ.ಎಂ ಪಾಟೀಲ್ , ಮಲ್ಲಿಕಾರ್ಜುನ ಹಳ್ಳೂರು, ರವೀಂದ್ರ ಜಲ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment