ಕಾಡ್ಲೂರಲ್ಲಿ ನಾಳೆ ಶ್ರೀರಾಮನವಮಿ ಉತ್ಸವ

 


ಕಾಡ್ಲೂರಲ್ಲಿ ನಾಳೆ   ಶ್ರೀರಾಮನವಮಿ ಉತ್ಸವ                                   ರಾಯಚೂರು,ಏ.16- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ನವವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ ಏ.17ರಂದು ಶ್ರೀರಾಮನವಮಿ ಉತ್ಸವವನ್ನು  ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ಸುಪ್ರಭಾತ,  ನಿರ್ಮಾಲ್ಯ ವಿಸರ್ಜನೆ, ಅಯೋಧ್ಯದಿಂದ ತಂದ ಶ್ರೀ ರಾಮದೇವರ ಧ್ವಜಾರೋಹಣ,  ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮದೇವರಿಗೆ, ಶ್ರೀಪ್ರಾಣದೇವರಿಗೆ ಅಭಿಷೇಕ, ಅಲಂಕಾರ, ದೊಡ್ಡ ದೇವರ ಪ್ರತಿಮಾ ಪೂಜೆ, ಶ್ರೀ ರಾಮದೇವರ ತೊಟ್ಟಿಲು ಮಹೋತ್ಸವ, ದಾಮೋದರ್ ಆಚಾರ್ ಪುರೋಹಿತ ಇವರಿಂದ ಶ್ರೀರಾಮದೇವರ ಕಥೆ  ನಂತರ ನೈವೇದ್ಯ, ಮಹಾ ಮಂಗಳಾರತಿ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯ ಕುಮಾರ್ ದೇಸಾಯಿ,ವಿಜಯ ಕುಮಾರ್ ದೇಸಾಯಿ ಹಾಗೂ ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ