ಬಿಸಿಲಿನ ತಾಪ ತಣಿಸಿಕೊಳ್ಳಲು ಈಜುಗೊಳದತ್ತ ಯುವಕರು, ಬಾಲಕರು.

 


ಬಿಸಿಲಿನ ತಾಪ ತಣಿಸಿಕೊಳ್ಳಲು ಈಜುಗೊಳದತ್ತ ಯುವಕರು, ಬಾಲಕರು.                                  ರಾಯಚೂರು,ಏ.18- ಬೇಸಿಗೆ ಮಧ್ಯೆ ಭಾಗದಲ್ಲಿ ಸೂರ್ಯನ ಪ್ರಕೋಪ ಮಿತಿಮೀರಿದೆ ತಾಪಮಾನ ಗರಿಷ್ಟ ಪ್ರಮಾಣದಲ್ಲಿದ್ದು ಬಿಸಿಲಿನ ತಾಪ ತಣಿಸಿಕೊಳ್ಳಲು ಯುವಕರು, ಬಾಲಕರು ಈಜುಗೂಳದತ್ತ ಮುಖಮಾಡುತ್ತಿದ್ದಾರೆ. ನಗರದ ಬಿಜನಗೇರಾ ರಸ್ತೆಯ ತಿರುಮಲ ಹಿಲ್ಸ್ ಬಳಿಯ ಬ್ಲೂವ್ ಹೆವನ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಯುವಕರು, ಬಾಲಕರು ಈಜಾಡುತ್ತ ಬಿಸಿಲಿನ ಬೇಗುದಿ ತಣಿಸಿಕೊಳ್ಳುತ್ತಿದ್ದಾರೆ.               ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೂ ಈಜುಕೊಳ ತೆರೆಯಲಿದ್ದು ಒಂದು ಗಂಟೆ ಈಜಾಡಲು ತಲಾ ಒಬ್ಬರಿಗೆ 100ರೂ ಪ್ರವೇಶ       ದರವಿದ್ದು  ಯುವಕರು ತಮ್ಮ ಗೆಳೆಯರೊಂದಿಗೆ ಕೆಲಹೊತ್ತು ಈಜುಕೊಳದಲ್ಲಿ ಮಿಂದೆಳುತ್ತಾ, ಮೇಲಿಂದ ಜಿಗಿಯುತ್ತಾ ಬಿಸಿಲಿನ ಬೇಗುದಿಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಯುವಕರು ಮಾತ್ರವಲ್ಲದೆ ಬಾಲಕ ಬಲಕೀಯರು ಸಹ ತಮ್ಮ ಪಾಲಕರೊಂದಿಗೆ ಆಗಮಿಸಿ ಈಜಾಡುವ ದೃಶ್ಯ ಕಾಣುತ್ತೇವೆ.                                                       

ಬೇಸಿಗೆ ಬಿಸಿಲಿನ ತಾಪ ಏರುಗತಿಯಲ್ಲಿದೆ ರಾಜ್ಯದ ಹಲವೆಡೆ ಜಿಲ್ಲೆಯಲ್ಲಿಯೂ ಕೆಲವೆಡೆ ಮಳೆಯಾದ ಬಗ್ಗೆ ವರದಿಯಿದ್ದರು ನಗರದಲ್ಲಿ ಮಾತ್ರ ಮೋಡಕವಿದ ವಾತಾವರಣ ಕೆಲ ಹೊತ್ತು ಇದ್ದರೂ ಸಹ ಬಹುತೇಕ ಬಿಸಿಲಿನ ಝಳವೆ ಹೈರಾಣಾಗಿ ಸುತ್ತಿದೆ.     
                                                                                                                   " ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದೇವೆ ಮಡದಿ ಮಕ್ಕಳೊಂದಿಗೆ ಈಜುಗೊಳಕ್ಕೆ ಬಂದಿದ್ದು ಮಕ್ಕಳು ಈಜನ್ನು ಕಲಿಯುತ್ತಾರೆ ಕೆಲ ಹೊತ್ತು ಕೊಳದಲ್ಲಿ ಆಟವಾಡುತ್ತಾರೆ.                                                     ----ಡಾ. ಟೀಕಾ ರಾವ್ ಮುಜುಂದಾರ್, ರಾಯಚೂರು,                                                                                         " ಶಾಲೆಗಳು ರಜೆಯಿದ್ದ ಕಾರಣ ಸ್ವಲ್ಪ ಸಮಯ ಇಲ್ಲಿ ಈಜಾಡುತ್ತೇವೆ  ಮನಸಿಗೆ ಉಲ್ಲಾಸ ಮೂಡುತ್ತದೆ".     ---ಲಹರಿ, ಈಜಾಡಲು ಬಂದು ಬಾಲಕಿ.         

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ