ನೇಹಾ ಕೊಲೆ ಪ್ರಕರಣ ಅತ್ಯಂತ ಖಂಡನೀಯ: ಪೊಲೀಸರ ಮಾಹಿತಿ ಆಧರಿಸಿ ಸಿಎಂ ಹೇಳಿಕೆ- ಸೆಮಿಯೋನ್.
ನೇಹಾ ಕೊಲೆ ಪ್ರಕರಣ ಅತ್ಯಂತ ಖಂಡನೀಯ: ಪೊಲೀಸರ ಮಾಹಿತಿ ಆಧರಿಸಿ ಸಿಎಂ ಹೇಳಿಕೆ- ಸೆಮಿಯೋನ್. ರಾಯಚೂರು,ಏ.20- ನೇಹಾ ಹಿರೇಮಠ ಕೊಲೆ ಪ್ರಕರಣ ಅತ್ಯಂತ ಖಂಡನೀಯವಾಗಿದ್ದು ಈ ಬಗ್ಗೆ ಪೊಲೀಸರ ಮಾಹಿತಿ ಆಧಾರಿಸಿ ಸಿಎಂ ಹೇಳಿಕೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡೆವಿಡ್ ಸೆಮಿಯೋನ್ ಹೇಳಿದರು. ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ ಘಟನೆ ಕುರಿತು ಹೇಳಿಕೆ ನೀಡಿದ್ದು ಅದು ಪೊಲೀಸರು ಮಾಹಿತಿ ಅನುಸರಿಸಿ ಎಂದ ಅವರು ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲವೆಂದ ಅವರು ನೇಹಾ ಕೊಲೆ ಅತ್ಯಂತ ಖಂಡನೀಯವಾಗಿದೆ ಅಲ್ಲದೆ ಇಂತಹ ತಪ್ಪು ಯಾರೇ ಮಾಡಿದರು ಅವರು ಮೇಲೆ ಕಠಿಣ ಕಾನೂನು ಕ್ರಮವಾಗಬೇಕೆಂದರು. ಗೃಹ ಸಚಿವ ಪರಮೇಶ್ವರ್ ಸಹ ನೀಡಿರುವ ಹೇಳಿಕೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೇಳಿದ್ದಾರೆ ಘಟನೆ ಬಗ್ಗೆ ಎಲ್ಲರಿಗೂ ದುಖ:ವಿದೆ ಎಂದರು.
Comments
Post a Comment