ಶ್ರೀ ಸುಶಮೀಂದ್ರ ತೀರ್ಥರ ಆರಾಧನೆ: ತಿರುಪತಿ ವೆಂಕಟೇಶ ದೇವರ ವಸ್ತ್ರ ಸಮರ್ಪಣೆ.
ಶ್ರೀ ಸುಶಮೀಂದ್ರ ತೀರ್ಥರ ಆರಾಧನೆ: ತಿರುಪತಿ ವೆಂಕಟೇಶ ದೇವರ ವಸ್ತ್ರ ಸಮರ್ಪಣೆ. ರಾಯಚೂರು,ಏ.26- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಶಮೀಂದ್ರತೀರ್ಥ ಶ್ರೀ ಪಾದಂಗಳವರ ಆರಾಧನೆ ನೆರವೇರಿತು.
ಬೆಳಿಗ್ಗೆ ಟಿಟಿಡಿ ಅಧಿಕಾರಿಗಳು ತಿರುಪತಿ ವೆಂಕಟೇಶ ದೇವರ ವಸ್ತ್ರ ತೆಗೆದುಕೊಂಡು ಬಂದರು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ವಸ್ತ್ರ ವನ್ನು ಶ್ರೀ ಸುಶಮೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು ನಂತರ ರಥೋತ್ಸವ ನೆರವೇರಿತು ಶ್ರೀ ಸುಶಮೀಂದ್ರತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿತು. ಉಂಜಲ ಮಂಟಪದಲ್ಲಿ ಶ್ರೀ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪಂಡಿತರಿಂದ ಉಪನ್ಯಾಸ ನಡೆಯಿತು.
Comments
Post a Comment