ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಯುವ ಗೋಷ್ಟಿ ಆಯೋಜನೆ: ಯುವಕರು ಕೀಳರಿಮೆ ತೊರೆದು ಪ್ರತಿಭೆ ಮೂಲಕ ಹೊರಹೊಮ್ಮಬೇಕು- ಪಲಿಮಾರು ಶ್ರೀ.


ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಯುವ ಗೋಷ್ಟಿ ಆಯೋಜನೆ:
ಯುವಕರು ಕೀಳರಿಮೆ ತೊರೆದು ಪ್ರತಿಭೆ ಮೂಲಕ ಹೊರಹೊಮ್ಮಬೇಕು- ಪಲಿಮಾರು ಶ್ರೀ.     
                                     ರಾಯಚೂರು,ಏ.14- ಯುವಕರು ಕೀಳರಿಮೆ ತೊರೆದು  ತಮ್ಮ ಪ್ರತಿಭೆ ಮೂಲಕ ಸಮಾಜದಲ್ಲಿ ಹೊರಹೊಮ್ಮಬೇಕು ಎಂದು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಹೇಳಿದರು. ಅವರಿಂದು ನಗರದ ಸಾವಿತ್ರಿ ಕಾಲೋನಿಯ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಯುವ ಗೋಷ್ಟಿಯಲ್ಲಿ  ಆಶೀರ್ವಚನ ನೀಡಿದರು.                            ಧರ್ಮ ಎಂದರೆ ನಮಗೆ ವಿಹಿತವಾದ ಕರ್ಮ ಮಾಡುವುದು ಎಂದ ಅವರು ಯೋಧ ದೇಶವನ್ನು ಕಾಯುವುದು, ಅಧ್ಯಾಪಕ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಅವರವರ ಕಾರ್ಯವನ್ನು ಅವರು ಮಾಡಬೇಕೆಂದರು. ನಾವು ಮೊದಲು ನಮ್ಮ ಮನೆಯ ನಂದಾ ದೀಪ ಹಚ್ಚಬೇಕು ನಂತರ ಅನ್ಯರಿಗೆ ದಾರಿದೀಪ ಆಗಬೇಕೆಂದರು. ಸಮಾಜದಲ್ಲಿ ನಾವೆಲ್ಲ ಉತ್ತಮ ರೀತಿಯಲ್ಲಿ ಜೀವನ ನಡೆಸಬೇಕು ಎಂದರು. ದೇಶವನ್ನು ರಕ್ಷಿಸುವ ಪಣ ತೊಡಬೇಕು ಅಧರ್ಮಿಗಳ ತಪ್ಪು ಕೆಲಸವನ್ನು ಖಂಡಿಸಬೇಕೆಂದರು. ಮನೆಯ ಯುವತೀಯರು ದುಡುಕದೆ ಹಿರಿಯರು ಹಾಕಿದ ಮಾರ್ಗದಲ್ಲಿ ಸಾಗಬೇಕೆಂದರು. 

                                  ವಿ‌ಷಯ ಮಂಡನಾ ಕಾರರಾಗಿ ಆಗಮಿಸಿದ ಎ.ನಾಗರಾಜ     ಮಾತನಾಡಿ ಯಾವುದು ಧಾರಣೆ ಮಾಡುತ್ತದೆ ಅದು ಧರ್ಮ ಎಂದ ಅವರು ನಮ್ಮದು ಧರ್ಮಾಧಾರಿತ ದೇಶ  ನಮ್ಮ‌ ಸನಾತನ ಪರಂಪರೆ ಉಳಿದಿದ್ದ ರಿಂದ ಭಾರತ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದರು. ಶಿವಾಜಿ ಮಹಾರಾಜರಿಂದ ದೇಶದಲ್ಲಿ ಹಿಂದುತ್ವ ಉಳಿಯಿತು ಎಂದರು. ತ್ರಿಕರ್ಣ ಶುದ್ದಿ ಹೊಂದಬೇಕು, ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕೆಂದರು. ಇದೆ ವೇಳೆ ಜಗನ್ನಾಥ ದಾಸರು  ನಾಟಕವನ್ನು ಸಾವಿತ್ರಿ ಕಾಲೋನಿ ಮಕ್ಕಳಿಂದ ನಾಟಕ ಪ್ರದರ್ಶನ ವಾಯಿತು. 

ಯುವ ಗೋಷ್ಟಿಯಲ್ಲಿ     ಯುವಕ, ಯವತೀಯರು , ಹಿರಿಯರು ಮಹಿಳೆಯರು ಮಕ್ಕಳು ಅನೇಕರಿದ್ದರು . 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ