ಜೋಡು ವೀರಾಂಜನೇಯ ದೇವಸ್ಥಾನದ ಶ್ರೀ ರಾಮೋತ್ಸವದಲ್ಲಿ ಭಾಗಿಯಾದ ಸಂಸದ ರಾಜಾ ಅಮರೇಶ್ವರ ನಾಯಕ: ಉಡುಪಿ ಅದಮಾರು ಮತ್ತು ಪಲಿಮಾರು ಶ್ರೀಗಳಿಂದ ಆಶೀರ್ವಾದ
ಜೋಡು ವೀರಾಂಜಿನೇಯ ದೇವಸ್ಥಾನದ ಶ್ರೀ ರಾಮೋತ್ಸವದಲ್ಲಿ ಭಾಗಿಯಾದ ಸಂಸದ ರಾಜಾ ಅಮರೇಶ್ವರ ನಾಯಕ: ಉಡುಪಿ ಅದಮಾರು ಮತ್ತು ಪಲಿಮಾರು ಶ್ರೀಗಳಿಂದ ಆಶೀರ್ವಾದ
ರಾಯಚೂರು,ಏ.15- ರಾಯಚೂರು ನಗರದ ಸಾವಿತ್ರಿ ಕಾಲೋನಿಯಲ್ಲಿರುವ ಶ್ರೀ ಜೋಡು ಆಂಜನೇಯ್ಯ ದೇವಸ್ಥಾನದಲ್ಲಿ ಜರುಗುತ್ತಿರುವ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ್ ಅವರು ಭಾಗಿಯಾಗಿದರು.
ಮೊದಲಿಗೆ ಶ್ರೀ ಜೋಡು ವೀರಾಂಜಿನೇಯ ದೇವರ ದರ್ಶನ ಆರ್ಶೀವಾದ ಪಡೆದುಕೊಂಡು ನಂತರ ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀಗಳಾದ ಶ್ರೀ ವಿಧ್ಯಾಧೀಶ ಶ್ರೀಪಾದರು ಹಾಗೂ ಉಡುಪಿಯ ಅದಮಾರು ಮಠದ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ ಸನ್ಮಾನಿಸಿ ಆರ್ಶೀವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ರಾಮೋತ್ಸವ ಸಮಿತಿ ಪದಾಧಿಕಾರಿಗಳು ,ಬಿಜೆಪಿ ಪಕ್ಷದ ಮುಖಂಡರು, ಬ್ರಾಹ್ಮಣ ಸಮುದಾಯದ ಮುಖಂಡರು, ಭಕ್ತರು ಉಪಸ್ಥಿತರಿದ್ದರು.
Comments
Post a Comment