ದೇಶಕ್ಕೆ ಭವಿಷ್ಯವನ್ನು ಸಂವಿಧಾನದ ಮೂಲಕ ರೂಪಿಸಿದ ಮಹಾನ್ ಮೇಧಾವಿ ಡಾ. ಬಿ.ಆರ್ ಅಂಬೇಡ್ಕರ್


 ದೇಶಕ್ಕೆ ಭವಿಷ್ಯವನ್ನು  ಸಂವಿಧಾನದ ಮೂಲಕ ರೂಪಿಸಿದ  ಮಹಾನ್ ಮೇಧಾವಿ ಡಾ. ಬಿ.ಆರ್ ಅಂಬೇಡ್ಕರ್                        ರಾಯಚೂರು,ಏ.14- ದೇಶಕ್ಕೆ ಭವಿಷ್ಯವನ್ನು  ಸಂವಿಧಾನದ ಮೂಲಕ ರೂಪಿಸಿದ  ಮಹಾನ್ ಮೇಧಾವಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಆಗಿದ್ದಾರೆ ಎಂದು ರಾಯಚೂರು ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಬೇವಿನ ಬೇವಿನಬೆಂಚಿ ಹೇಳಿದರು. ಅವರು ನಗರದ ಕನ್ನಡ ಭವನದಲ್ಲಿ ಜರುಗಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್ ಅವರು  ಸ್ವಾತಂತ್ರ, ಸಮಾನತೆ, ಭಾತೃತ್ವದ, ನೆಲೆಯಲ್ಲಿ ದೇಶವನ್ನು ಕಟ್ಟಬೇಕು ಮತ್ತು ಜಾತಿರಹಿತ ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದು ತಿಳಿದು ಅದರಂತೆ ಶ್ರಮಿಸಿ ಸರ್ವಜನರ ಹಿತಕ್ಕಾಗಿ ದುಡಿದ ಜ್ಞಾನಿ. ಅವರ ಶ್ರಮದ ಫಲ ಇವತ್ತು ಎಲ್ಲಾ ಸಮುದಾಯಗಳು ಹಂಚಿಕೊಂಡು ತಿನ್ನುತ್ತಿದ್ದೇವೆ ಎಂದು ತಿಳಿಸಿದರು.                                 

 ದೇಶದ ಅರ್ಥ ವ್ಯವಸ್ಥೆಯಿಂದ ಹಿಡಿದು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯ ಬದಲಾವಣೆಗೆ ಅವರು ಹಾಕಿಕೊಟ್ಟ ದಾರಿ ತುಂಬಾ ಶ್ರೇಷ್ಠವಾದದ್ದು ಎಂದು ಹೇಳಿದರು.                                                                ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವೀರ ಹನುಮಾನ ಅವರು ಮಾತನಾಡುತ್ತಾ, ಪ್ರಪಂಚದ ಅತ್ಯಂತ ಶ್ರೇಷ್ಠ ಮೇಧಾವಿಗಳಲ್ಲಿ ಅಂಬೇಡ್ಕರ್ ಅವರು ಒಬ್ಬರಾಗಿದ್ದಾರೆ. ಅವರ ಚಿಂತನೆಗಳು ಇವತ್ತು ನಮ್ಮ ಬದುಕಿಗೆ ದಾರಿದೀಪಗಳಾಗಿವೆ.  ಅವರ ತತ್ವ ಚಿಂತನೆಗಳ ಹಿನ್ನೆಲೆಯಲ್ಲಿ ದೇಶ ನಡೆದರೆ‌ ಯಾವ ತೊಂದರೆಗಳು ಬರಲು ಸಾದ್ಯವಿಲ್ಲ ಎಂದರು.  ಮಾರ್ಕ್ಸ್ ವಾದ ಸಮಾನತೆ  ವರ್ಗ ವ್ಯವಸ್ಥೆಗೆ ಪರಿಹಾರ ಕೊಟ್ಟಂತೆ ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಗೆ ಪರಿಹಾರ ಸೂಚಿಸಿದರು ಎಂದರು.     ಇದೇ ಸಂದರ್ಭದಲ್ಲಿ ರಾಯಚೂರಿನ ಹಿರಿಯ ರಂಗ ಕಲಾವಿದರಾದ ವಿ.ಎನ್‌ ಅಕ್ಕಿ  ಅವರು ಮಾತನಾಡುತ್ತಾ, ಈ ದೇಶದಲ್ಲಿ ಅನೇಕ ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತೇವೆ. ಆದರೆ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ನಾವೆಲ್ಲ ಆಚರಣೆ ಮಾಡಲೇಬೇಕು. ಯಾಕೆಂದರೆ ಅವರು ದೇಶದ  ಜನರಲ್ಲಿ ವೈಚಾರಿಕ ಚಿಂತನೆಗಳನ್ನು ಕೊಟ್ಟ ಮಹಾನ ಮೇಧಾವಿಗಳು, ಅಷ್ಟೆ ಅಲ್ಲ ಸಮಾನತೆಯ ಪ್ರತಿಪಾದಕರು, ಅವರ ವಿಚಾರಗಳು ನಮ್ಮ ಯುವಕರಿಗೆ ಮಾರ್ಗದರ್ಶಿಯಾಗಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ನಾಗಪ್ಪ ಹೊರಪ್ಯಾಟಿ , ಸಹ ಕಾರ್ಯದರ್ಶಿಯಾದ ದಂಡಪ್ಪ ಬಿರಾದಾರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾವುತ ರಾವ್ ಬರೂರ್,  ಸಂಘಟನಾ ಕಾರ್ಯದರ್ಶಿ ಗಳಾದ ರೇಖಾ ಬಡಿಗೇರ,  ವಿದ್ಯಾ ಸಾಗರ ಯಲ್ಲಪ್ಪ ಮರ್ಚೇಡ್, ಬಶೀರ್ ಅಹಮದ್ ಹೊಸಮನೆ, ವೀರೇಶ್ ಬಾಬು,ನರಸಿಂಹಲು ವಡವಾಟಿ ಬಾವಸಾಬ್ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಸಾಹಿತಿಗಳು ಇದ್ದರು.                               ಈ ಕಾರ್ಯಕ್ರಮದಲ್ಲಿ ಮತದಾರ ಸಾಕ್ಷರತಾ ಕ್ಲಬ್ ನೊಡಲ್ ಅಧಿಕಾರಿ  ದಂಡಪ್ಪ ಬಿರಾದಾರ್ ಮತದಾರರ ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್