ಕರ್ನಾಟಕ ರಾಜ್ಯ ರಾಜಕೀಯ ಪ್ರಯೋಗ ಶಾಲೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸಿ- ಡೆವಿಡ್ ಸೆಮಿಯೋನ್.

 


ಕರ್ನಾಟಕ ರಾಜ್ಯ ರಾಜಕೀಯ ಪ್ರಯೋಗ ಶಾಲೆ:                                ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸಿ- ಡೆವಿಡ್ ಸೆಮಿಯೋನ್.                                    ರಾಯಚೂರು,ಏ.20- ಕರ್ನಾಟಕ ರಾಜ್ಯ  ರಾಜಕೀಯ ಪ್ರಯೋಗ ಶಾಲೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡೆವಿಡ್ ಸಿಮಿಯೋನ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು ಕರ್ನಾಟಕ ರಾಜ್ಯ ಪಾಲಿಟಿಕಲ್ ಲ್ಯಾಬೋರೇಟರಿಯಾಗಿದೆ ಇಲ್ಲಿ ಅನೇಕ ಅನೇಕ ಪಕ್ಷಗಳು ಉದಯಿಸಿವೆ ಜನತಾ ಪಕ್ಷ, ಜನತಾದಳ ಎಸ್ ,ಜನತಾದಳ ಯು ಮುಂತಾದ ಪಕ್ಷಗಳು ಪ್ರಾರಂಭವಾಗಿವೆ ಎಂದರು.

ಕಾಂಗ್ರೆಸ್ ಪಕ್ಷ ಬಡವರ ಪರವಾದ ಪಕ್ಷವಾಗಿದೆ ಧ್ವನಿಯಿಲ್ಲದವರ ಬಗ್ಗೆ ಹೋರಾಡುತ್ತಿದೆ ಈ ಬಾರಿ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರು, ವೀರಶೈವ ಲಿಂಗಾಯಿತರು ,ಹಿಂದೂಯೇತರರು ಎಲ್ಲರು ಕಾಂಗ್ರೆಸ್ ಗೆ ಬೆಂಬಲಿಸಲಿದ್ದಾರೆ ಎಂದರು. ಸಂವಿಧಾನ ಬದಲಾಯಿಸುತ್ತೇನೆಂದು ಅನೇಕ ಬಿಜೆಪಿ ನಾಯಕರು ಹೇಳಿದ್ದಾರೆ ಆದರೆ ಪ್ರಧಾನಿ ಮೋದಿ ಸಂವಿದಾನ ಬದಲಾವಣೆ ಮಾಡುವುದಿಲ್ಲವೆಂದು ಹೇಳಿದ್ದಾರೆ ಎಂದರು.      ಈ ಬಾರಿ ಶೇ. 100 ರಷ್ಟು ಮತದಾನವಾಗಬೇಕು ಎಂದ ಅವರು ಕಾಂಗ್ರೆಸ್ ಕ್ರೈಸ್ತ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು.                         ಈ ಸಂದರ್ಭದಲ್ಲಿ ಪವನ್ ಪಾಟೀಲ್, ರಾಬರ್ಟ್ ರಾಜಶೇಖರ್, ಜೇಕಬ್ ಕುರ್ಡಿ, ವಿಜಯಕುಮಾರ್,ರುಬಿನ್, ಇಂದು ವಾಸಿ, ಎಂ.ಭಂಡಾರಿ, ಮುತ್ತಪ್ಪ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ