ಯುಗಾದಿ ಕವನ
ಯುಗಾದಿ ಕವನ ಬೇವಿನ ಹೂವಿನಲ್ಲಿರುವಂತೆ ಒಗರು ಒಗುರಾದ ಸ್ವಲ್ಪ ವೇ ಕಹಿ ಜೇನಿನಂತಹ ಬೆಲ್ಲದ ಸಿಹಿ ಬೇವು ಬೆಲ್ಲದ ಮಿಶ್ರಣ ನಿವೇದನೆಯೊಂದಿಗೆ ಪಂಚಾಂಗ ಶ್ರವಣ
ಬಾಳಲಿ ನೂತನ ವರುಷದ ಆಗಮನ
ಹರುಷವ ಸೂಸುತ
ಮಧುರ ಕೋಕಿಲ ಮಂಜುಳ ಗಾನದಂತೆ ಸುಸ್ವರ
ಸಂಗಮದ ಗಾನದಂತೆ
ನಮ್ಮಿ ಈ ಜೀವನದಲಿ ಸಂತಸದ ನಗು
ತುಂಬಿರಲಿ ಬಾಳಲಿ
ನಿತ್ಯ ನೂತನ ಮಾವಿನ ತೋರಣದಂತೆ ಹಚ್ಚ
ಹಸಿರಿನಿಂದ ಕೂಡಿ ಬೀಸಲಿ ಬೇವಿನ ಎಸಳಿನ ತಂಪಾದ ಗಾಳಿ ನಳ ನಳಿಸಲಿ
ಹಕ್ಕಿಗಳ ಇಂಚರ
ಮೋಡದಲಿ ರತ್ನ ಪಕ್ಷಿಯ ನೋಡುತ
ಹೊಸ ವರುಷವ
ಸ್ವಾಗತಿಸೋಣ ಸಿಹಿ ಹೂರಣ ಸೇವಿಸುತ ನವನವೀನ ವಸ್ತ್ರವ ಧರಿಸಿ ದೇವರ ಪೂಜಿಸುತ ಬೇವು ಬೆಲ್ಲ ಮೆಲ್ಲಮೆಲ್ಲನೆ ಸವಿಯುತಲಿ ನವನವೀನ ನವೋಲ್ಲಾಸದಲಿ
ಶ್ರೀಮತಿ ಭಾರತಿ ಗುರುರಾಜ ಕುಲಕರ್ಣಿ, ರಾಯಚೂರು.
Comments
Post a Comment