ಜಿ .ಕುಮಾರ ನಾಯಕ್ ಪರ ಬಿರುಸಿನ ಪ್ರಚಾರ ಕೈಗೊಂಡ ಶಾಸಕ ಬಸನಗೌಡ ದದ್ದಲ್
ಜಿ .ಕುಮಾರ ನಾಯಕ್ ಪರ ಬಿರುಸಿನ ಪ್ರಚಾರ ಕೈಗೊಂಡ ಶಾಸಕ ಬಸನಗೌಡ ದದ್ದಲ್
ರಾಯಚೂರು ಏ.15- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಂಕೇಶ್ವರ ಮತ್ತು ಸಾದಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಜಿ. ಕುಮಾರ್ ನಾಯಕ್ ರವರ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು, ಗ್ಯಾರೆಂಟಿ ಕಾರ್ಡ್ ಗಳನ್ನು ವಿತರಿಸಿ ಮಾತನಾಡಿದ ಬಸನಗೌಡ ದದ್ದಲ್ ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ರವರು
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಹಿಂದೆ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದೆ, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಸಂಪುಟ ನುಡಿದಂತೆ ನಡೆದಿದೆ ಕೊಟ್ಟ ಮಾತಿನಂತೆ 5 ಗ್ಯಾರೆಂಟಿಗಳಾದ ಗೃಹ ಲಕ್ಷ್ಮಿ , ಶಕ್ತಿ, ಗೃಹ ಜ್ಯೋತಿ , ಯುವನಿಧಿ, ಅನ್ನಭಾಗ್ಯ ಯೋಜನೆಯಡಿ 5 ಕೆ ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿ ಅಕ್ಕಿಯ ಬದಲಾಗಿ ಹಣ ನೇರವಾಗಿ ಅವರಖಾತೆಗೆ ಹಣ ಜಮಾವಣೆ ಇಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್ ಪಕ್ಷ ಎಂದರು.
ಈಗಲೂ ಸಹ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ ವಾರ್ಷಿಕ 1ಲಕ್ಷ ರೂಪಾಯಿ,ರೈತರ ಸಾಲ ಮನ್ನಾ , ಸೇರಿದಂತೆ ಇನ್ನೂ ಹಲವು ಜನಪರ ಯೋಜನೆಗಳನ್ನು 2024 ರ ಲೋಕಸಭಾ ಚುನಾವಣಾ ಭರವಸೆಗಳ ನೀಡಿದೆ ಎಂದರು.
ಈ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ರಾಯಚೂರು ಜಿಲ್ಲೆಯಲ್ಲಿ ಜಿ ಕುಮಾರ್ ನಾಯಕ್ ರವರು ಗೆಲ್ಲಬೇಕು, ರಾಯಚೂರು ಜಿಲ್ಲೆಯ ಜನರ ಧ್ವನಿಯಾಗಿ, ದೆಹಲಿಯ ಸಂಸತ್ ನಲ್ಲಿ ಧ್ವನಿಯಾಗಬೇಕು, ಎಂದರೆ ಜಿ ಕುಮಾರ್ ನಾಯಕ್ ಅವರು ಗೆಲುವು ಸಾಧಿಸಬೇಕು.
ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಮುಖಂಡರುಗಳು ತಮ್ಮ ತಮ್ಮ ಬೂತ್‌ಮಟ್ಟದಲ್ಲಿ ತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಎದುರಿಸೋಣ ಬೂತ್‌ಗೆದ್ದರೆ ಕ್ಷೇತ್ರ ಗೆದ್ದಂತೆ, ನಾವೆಲ್ಲಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ತಾಯಂದಿರು, ಸಹೋದರಿಯರ ಜೊತೆ ಕುಳಿತು ಗ್ಯಾರೆಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ, ಸೋಮಶೇಖರ್,ಅಯ್ಯನಗೌಡ, ಪಾಟೀಲ್, ನಾಗೇಂದ್ರಪ್ಪ,ಬಸಪ್ಪ ವಕೀಲ ಷಣ್ಮುಖಪ್ಪ, ಶ್ರೀನಿವಾಸ,ರಮೇಶ್ ರೋಸ್ಲಿ ,ಕೆ.ಈರಣ್ಣ , ವಿಶ್ವನಾಥ ರೆಡ್ಡಿ,ಹುಲಿಗಯ್ಯ ಸಾಹುಕಾರ್,ಭೀಮಯ್ಯ, ಶಿವ ರಾಜಪ್ಪ ಗೌಡ, ವೆಂಕಟೇಶ, ಮೌನೇಶ ದದ್ದಲ್,ಪಕ್ಷದ ಹಿರಿಯ ಮುಖಂಡರುಗಳು , ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು,ನಾಮನಿರ್ದೆಶನ ಸದಸ್ಯರುಗಳು , ಗ್ರಾ.ಪಂ ಸದಸ್ಯರುಗಳು,ಕಾರ್ಯಕರ್ತರು, ತಾಯಂದಿರು ಗ್ರಾಮಸ್ಥರು ಉಪಸ್ಥಿತರಿದ್ದರು.
Comments
Post a Comment