ಜೂ.4 ರಂದು ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ: 161 ಸುತ್ತುಗಳಲ್ಲಿ ಮತ ಎಣಿಕೆ- ಜಿಲ್ಲಾ ಚುನಾವಣಾಧಿಕಾರಿ.

 


ಜೂ.4 ರಂದು ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ:                                            161 ಸುತ್ತುಗಳಲ್ಲಿ ಮತ ಎಣಿಕೆ - ಜಿಲ್ಲಾ ಚುನಾವಣಾಧಿಕಾರಿ.                    ರಾಯಚೂರು,ಮೇ.31- ರಾಯಚೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯನ್ನು ಜೂ.4 ರಂದು ನಡೆಸಲಾಗುತ್ತಿದ್ದು ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 161 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರ ಶೇಖರ ನಾಯಕ ಹೇಳಿದರು.                           ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಅಂದು ನಗರದ ಎಸ್ಆರ್ ಪಿಎಸ್ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 7ಕ್ಕೆ ಮತಯಂತ್ರಗಳ ಭದ್ರತಾ ಕೊಠಡಿ ತೆರೆಯಲಾಗುತ್ತದೆ ನಂತರ 8 ಗಂಟೆಯಿಂದ ಮತಯಂತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.                             ಸುರಪುರ, ಶಹಾಪುರ,ಯಾದಗಿರಿ ಮತ್ತು ದೇವದುರ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಎಲ್ ವಿ ಡಿ ಕಾಲೇಜಿನಲ್ಲಿ ಮಾಡಲಾಗುತ್ತಿದೆ ಉಳಿದಂತೆ ರಾಯಚೂರು, ರಾಯಚೂರು ಗ್ರಾಮೀಣ, ಮಾನ್ವಿ, ಲಿಂಗಸ್ಗೂರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಎಸ್ ಆರ್ ಪಿ ಎಸ್ ಪಿಯು ಕಾಲೇಜಿನಲ್ಲಿ ಮಾಡಲಾಗುತ್ತಿದೆ ಎಂದರು. 

                      ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 14 ಟೇಬಲ್ ಗಳು ವ್ಯವಸ್ಥೆ ಮಾಡಲಾಗಿದೆ ಎಂದರು.ಇಟಿಪಿಬಿಎಸ್, ಪಿಬಿ, ಇವಿಎಂ, ವಿವಿ ಪ್ಯಾಟ್ ಸ್ಲಿಪ್ ಕೌಂಟಿಂಗ್ ಕ್ರಮವಾಗಿ ಮಾಡಲಾಗುತ್ತಿದೆ ಇಟಿಪಿಬಿಎಸ್, ಪಿಬಿ ಮಾತು ಎಣಿಕೆ ಪ್ರಾರಂಭವಾದ 30 ನಿಮಿಷಗಳ ನಂತರ ಇವಿಎಂ ಮತ ಎಣಿಕೆ ಪ್ರಾರಂಭವಾಗುತ್ತದೆ ಅದು ಮುಕ್ತಾಯವಾದ  ನಂತರ ವಿವಿಪ್ಯಾಟ್ ಸ್ಲಿಪ್ ಎಣಿಕೆ ನಡೆಯುತ್ತದೆ   ಎಂದರು. ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಲಾಗಿದ್ದು ಅಲ್ಲಿ ಅಂತರ್ಜಾಲ, ಲ್ಯಾಪ ಟಾಪ್ ವ್ಯವಸ್ಥೆ ಮಾಧ್ಯಮದವರಿಗೆ ಮಾಡಲಾಗಿದ್ದು ಮತ ಎಣಿಕೆ ನಡೆಯುವ ಸ್ಥಳದಲ್ಲಿ ಮೊಬೈಲ್ ನಿಷೇಧಿಸಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಕುಮಾರ್ ಮಾತನಾಡಿ ಭದ್ರತೆಗಾಗಿ ಇಬ್ಬರು ಎಎಸ್ಪಿ, ನಾಲ್ವರು ಡಿಎಸ್ಪಿ,17 ಸಿಪಿಐ, 44 ಪಿಎಸ್ಐ , 11 ಎಎಸ್ ಐ,388 ಹೆಚ್.ಸಿ ಮತ್ತು ಪಿಸಿ,79 ಮಹಿಳಾ ಹೆಚ್ ಸಿ ಮತ್ತು ಪಿಸಿ ಸೇರಿದಂತೆ ಒಟ್ಟು 645 ಪೊಲೀಸ್ ಸಿಬ್ಬಂದಿಗಳು ಅಲ್ಲದೆ 200 ಜನ ಗೃಹ ರಕ್ಷಕ ದಳ ಸಿಬ್ಬಂದಿ, 3 ತುಕಡಿ ಕೆ ಎಸ್ ಆರ್ ಪಿ, 1 ತುಕಡಿ ಸಿಎಪಿಎಫ್,10 ಡಿಎಆರ್ ತುಕಡಿ, ಎಎಸ್ಸಿ 1ತಂಡ  ಹಾಗೂ 02 ಆಂಬ್ಯೂಲೆನ್ಸ್, 2 ಅಗ್ನಿ ಶಾಮಕ ದಳ ಸನ್ನಧ್ಧವಾಗಿರುತ್ತದೆ ಎಂದರು.

ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರದಲ್ಲಿ  ಪ್ರವೇಶ ಅವಕಾಶವಿದ್ದು ಮಾಧ್ಯಮದವರಿಗೆ ಸುದ್ದಿ ಮಾಡಲು ಅನುಕೂಲಕ್ಕಾಗಿ  ಮೋಬೈಲ್ ಬಳಸಲು ಅವಕಾಶ ನೀಡಲಾಗಿದೆ ಎಂದ ಅವರು ಮತ ಎಣಿಕೆ ಕೇಂದ್ರದ ಸುತ್ತಲು 144 ಸೆಕ್ಷನ್ ಜಾರಿ ಮಾಡಲಾಗಿದ್ದು ನಗರ ಮತ್ತು ಜಿಲ್ಲೆಯಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಲಾಗಿದ್ದು ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ವಿಜಯೋತ್ಸವಕ್ಕೆ ನಿರ್ಬಂಧಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ