ವರುಣನ ಕೃಪೆ
ವರುಣನ ಕೃಪೆ. ಊರು ಊರು ನಮ್ಮೂರು ರಾಯಚೂರಿನಲ್ಲಿ ಬಿಸಿಲಿನ ಝಳವು ಬಲು ಜೋರು ಜೋರು ಅಪರಾತ್ರಿ ಎನ್ನದೇ ಬಂದ ವರುಣನು ತೋರುತ ಅತಿ ಆರ್ಭಟವನು ಸಿಡಿಲು ಮಿಂಚಿನ ಸಂಚಿನಲಿ ಗುಡುಗುತ ಸಿಡಿಯುತ ಅತೀ ಸಿಟ್ಟಿನಲ್ಲಿ ಗಟ್ಟಿ ರಾಯಚೂರಿನ ಜನತೆಗೆ ಕೊಟ್ಟೆ ಬಿಟ್ಟ ವರುಣ ಕೃಪೆ ತೋರಿ ವರ್ಷ ಧಾರೆ ಹರ್ಷದೋರಿ ಬಿಸಿಲಿನ ತಾಪಕ್ಕೆ ಕಂಗಾಲಾದ ಜನತೆಗೆ ತಂಪನ್ನು ಬೀರಿ ತಾಳ್ಮೆಯಿಂದಿದ್ದರೆ ತಲ್ಲಣವು ಮಳೆಯ ಝಲ್ಲಣವು ಗುಡುಗು ಮಿಂಚಿನ ಸಮ್ಮೇಳನವು ಪರಿಶುದ್ಧ ಗೊಂಡ ವಸುಧೆಯು ಪರಿಶುಭ್ರ ವಾತಾವರಣವು ವರುಣನ ಆಗಮನವು ನಿನಗೆ ನಮ್ಮೆಲ್ಲರ ನೆಚ್ಚಿನ ಸ್ವಾಗತವು ಹಿತ ನೀಡಿದ ನಿನಗೆ ಅಭಿನಂದನೆಯು ಅಭಿನಂದನೆಯು.
ಆಹಾ ಮಳೆಯೇ! ಮಳೆಯೇ ನೀನು ಸಣ್ಣ ಗೆಜ್ಜೆ ಕಟ್ಟಿ ಕುಣಿದಂತಿದೆ ಮನ ತಣಿಸುವ ಮೆಲ್ಲನೆ ಕಚಗುಳಿಯಿಟ್ಟಂತಿದೆ ಮುತ್ತು ಕೊಟ್ಟಂತಿದೆ ರವಿಗೆ ವಿರಾಮ ತಂದಂತಿದೆ ನಿನ್ನ ತನನವು ಮಧುರ ಹಾಡುತ್ತಿದೆ ಹಸಿರಿಗೆ ಹಬ್ಬವಾದಂತಿದೆ ಬಿಸಿಲಿಗೆ ಗರ ಬಡಿದಂತಿದೆ ಅಮೃತಧಾರೆ ಸುರಿದಂತಿದೆ ಕೊಂಚ ನೆಮ್ಮದಿ ತಂದಂತಿದೆ ಆನಂದವಾದಂತಿದೆ.
-ಶ್ರೀಮತಿ ಭಾರತಿ ಕುಲಕರ್ಣಿ, ರಾಯಚೂರು.
Comments
Post a Comment