ದೇವನಪಲ್ಲಿ ಹಾಗೂ ಗಧಾರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ


ದೇವನಪಲ್ಲಿ ಹಾಗೂ  ಗಧಾರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ


 ರಾಯಚೂರು,ಮೇ.14- ತಾಲೂಕಿನ ದೇವನಪಲ್ಲಿ ಗ್ರಾಮದಲ್ಲಿ ಗಂಗಾಸಪ್ತಮಿ ಅಂಗವಾಗಿ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಶ್ರೀ ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪೂಜೆ ಮಾಡುವು ಮೂಲಕ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮಾಜದ ಬಾಂಧವರು ಭಾಗವಹಿಸಿದ್ದರು ಹಾಗೂ ಭಗೀರಥ ಗ್ರಾಮ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ,ಕಾರ್ಯದರ್ಶಿಗಳು ಹಾಗೂ ಸರ್ವಸದಸ್ಯರು ಹಾಗೂ  ಸಮಾಜದ ಹಿರಿಯರು ಭಾಗವಹಿಸಿದ್ದರು.

 


ಗಧಾರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ:

 ತಾಲೂಕಿನ ಗಧಾರ ಗ್ರಾಮದಲ್ಲಿ ಗಂಗಾಸಪ್ತಮಿ ಅಂಗವಾಗಿ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.  ಭಗೀರಥ ಭಾವಚಿತ್ರಕ್ಕೆ ಪೂಜೆ ಮಾಡುವು ಮೂಲಕ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.                      ಈ ಸಂದರ್ಭದಲ್ಲಿ ಗಧಾರ ಗ್ರಾಮದ  ಸಮಾಜದ ಬಾಂಧವರು  ಹಾಗೂ  ಭಗೀರಥ ಸಮಾಜದ ಗ್ರಾಮ ಘಟಕದ ಸದಸ್ಯರು ಊರಿನ ಹಿರಿಯರು ಯುವಕರು ಗ್ರಾಮದ ಎಲ್ಲಾ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.

Comments

Popular posts from this blog