ಹರಿದಾಸ ಶ್ರೇಷ್ಠರು ಮೊದಲಕಲ್ಲು ಶ್ರೀ ಶೇಷ ದಾಸರು- ಮುರಳಿಧರ ಕುಲಕರ್ಣಿ
ಹರಿದಾಸ ಶ್ರೇಷ್ಠರು ಮೊದಲಕಲ್ಲು ಶ್ರೀ ಶೇಷ ದಾಸರು- ಮುರಳಿಧರ ಕುಲಕರ್ಣಿ
ರಾಯಚೂರು,ಮೇ.15- ಹರಿದಾಸ ಪರಂಪರೆಯಲ್ಲಿ ಮೊದಲಕಲ್ಲು ಶ್ರೀ ಶೇಷ ದಾಸರು ಹರಿದಾಸ ಶ್ರೇಷ್ಠರಾಗಿದ್ದಾರೆ ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು. ಅವರು ಇಂದು ಸಂಜೆ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ ಮೊದಲಕಲ್ಲು ಶೇಷ ದಾಸರ ಮಧ್ಯರಾದನೆಯ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡುತ್ತಾ ಹೇಳಿದರು. ಹರಿದಾಸ ಸಾಹಿತ್ಯದಲ್ಲಿ ಶ್ರೀ ಶೇಷ ದಾಸರ ಕೃತಿಗಳೆಲ್ಲವೂ ಶ್ರೇಷ್ಠವಾದವುತಮ್ಮ ಅನುಭವದ ಮಾತುಗಳನ್ನು ತಮ್ಮ ಕೃತಿಗಳಲ್ಲಿ ಶ್ರೀಹರಿಯ ಮತ್ತು ವಾಯುದೇವರ ಮಹಿಮೆಯನ್ನು ಕೊಂಡಾಡಿದ್ದಾರೆ ಎಂದರು.
ಅವರು ಮುಂದುವರೆದು ಮಾತನಾಡುತ್ತಾ,ಮೊದಲ ಕಲ್ಲು ಶೇಷದಾಸರು ಕ್ರಿ.ಶ.1817 ರಿಂದ 1885 ರವರೆಗೆ ಇದ್ದಂತಹ ಮಹಾನುಭಾವರು ಇವರು ಶಾನುಭೋಗರ ವೃತ್ತಿಯನ್ನು ಮಾಡುತ್ತಿದ್ದ ಸಂದರ್ಭದಲ್ಲಿ ರಾಜ ಸಭೆಯಲ್ಲಿ ಅವಮಾನವಾದ ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಅವರಿಗೆ ಚಿಂತರವೇಲಿ ವಾಯುದೇವರ ಅನುಗ್ರಹವಾಗಿ ಶ್ರೀ ವಿಜಯದಾಸರ ಸಪ್ನಾoಕಿತದಿಂದ ಗುರು ವಿಜಯ ವಿಠಲ ಅಂಕಿತ ವಾಗಿ ನೂರಾರು ಸುಳಾದಿಗಳು,ಉಗಾ ಭೋಗಳನ್ನು, ಸಂಕೀರ್ತನೆಗಳನ್ನು ರಚಿಸಿದ್ದಾರೆ ಇವರ ಸುಳಾದಿಗಳಲ್ಲಿ ಜ್ಞಾನ ಯಜ್ಞ ಸುಳಾದಿ ಮೇರು ಕೃತಿಯಾಗಿದೆ ಎಂದು ಹೇಳಿದರು.
ಪತ್ರಕರ್ತ ಜಯ ಕುಮಾರ ದೇಸಾಯಿ ಕಾಡ್ಲೂರು ಮಾತನಾಡಿ ಮೊದಲಕಲ್ಲು ಶೇಷ ದಾಸರು ಹರಿಭಕ್ತಿಯನ್ನು ಎಲ್ಲ ಕಡೆ ಸಾರಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹಲವಾರು ಸುಳಾದಿಗಳನ್ನು ರಚಿಸಿದ್ದಾರೆ ಎಂದ ಅವರು ನಮಗೆ ಪ್ರಸ್ತುತ 43 ಸುಳಾದಿಗಳು ,14 ಉಗಾ ಭೋಗಗಳು ನೂರಾರು ಕೀರ್ತನೆಗಳು ಲಭ್ಯ ಇವೆ ಎಂದು ಹೇಳಿದ ಅವರು ಶೇಷದಾಸರ ಜೀವನ ವೃತ್ತಾಂತ ವಿವರಿಸಿದರು.
ರಂಗನಾಥ್ ಶಿಕ್ಷಕರು ಮಾತನಾಡಿ ಶ್ರೀ ಮೊದಲಕಲ್ಲು ಶೇಷದಾಸರು ಪವಾಡ ಪುರುಷರಾಗಿದ್ದಾರೆ ಅವರ ಆರಾಧನೆಯಿಂದ ಹಲವಾರು ರೋಗಗಳು ಪರಿಹಾರವಾಗುತ್ತವೆ ಎಂದ ಅವರು ಇಂದಿಗೂ ನಂಬಲಾಗಿದೆ ಎಂದು ಹೇಳಿದರು ಇಂದು ಅವರ ವಂಶಸ್ಥರಾದ ತುಂಗಭದ್ರ ಲಕ್ಷ್ಮಿಕಾಂತ ಹಾಗೂ ಕಲ್ಲೂರು ಶ್ರೀನಿಧಿ ಇವರ ಮನೆಯಲ್ಲಿ ಇರುವ ಮೂಲಪಾದುಕೆಗಳ ಪೂಜೆ ಮಾಡುವ ಮೂಲಕ ಆರಾಧನೆಯನ್ನು ಆಚರಿಸಲಾಯಿತು.
ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀಶೇಷದಾಸರ ಆರಾಧನೆ ಪ್ರಯುಕ್ತ ಬೆಳಿಗ್ಗೆಯಿಂದ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೇವಸ್ಥಾನದಲ್ಲಿ ರಥೋತ್ಸವ,ವಾಯುದೇವರಿಗೆ ಪಂಚಾಮೃತ ಅಭಿಷೇಕ, ತೊಟ್ಟಿಲು ಸೇವೆ,ವೇದಮೂರ್ತಿ ಪಂಡಿತ್ ಪ್ರಹ್ಲಾದಾಚಾರ್ಯ ಗಲಗಲಿ ಅವರಿಂದ ಉಪನ್ಯಾಸ ಜರುಗಿದವು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ಕಲ್ಲೂರು, ಕುಮಾರಿ ವಾಸುಕಿ ಕರ್ಣo, ಇಂದಿರಾ ಬಾಯಿ ಸಂಗಮ್, ಶ್ರೀಮತಿ ಸುಷ್ಮಾಕರಣo, ಇವರಿಂದ ದಾಸವಾಣಿ ಜರುಗಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಜಾಗೀರದಾರ್,
ಶ್ರೀ ರಂಗನಾಥ್ ಸಹ ಶಿಕ್ಷಕರು, ಶ್ರೀನಿವಾಸ್ ಬ್ಯಾಗವಾಟ್,ಶ್ರೀಶೈಲ, ರಾಘವೇಂದ್ರ ದೇಶಪಾಂಡೆ, ಭೀಮಾದೇವಿ, ಕಲ್ಲೂರು ಶ್ರೀನಿಧಿ, ತುಂಗಭದ್ರ ಲಕ್ಷ್ಮಿಕಾಂತ್, ಕೆ ನಾಗರತ್ನ ಸಹಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.
Comments
Post a Comment