ಹರಿದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮಸುಂದರದಾಸರು- ಮುರಳಿದರ ಕುಲಕರ್ಣಿ


 ಹರಿದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮಸುಂದರದಾಸರು- ಮುರಳಿದರ ಕುಲಕರ್ಣಿ

 ರಾಯಚೂರು, ಮೇ.17- ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದ ಮಹನೀಯರಲ್ಲಿ ಶ್ರೀ ಶಾಮ ಸುಂದರ ದಾಸರು ಅಗ್ರಗಣ್ಯರಾಗಿ ನಿಲ್ಲುತ್ತಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ  ಹೇಳಿದರು     

    ಅವರು ಇಂದು ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ ಶ್ರೀ ಶಾಮ ಸುಂದರ ದಾಸರ ಮಧ್ಯರಾಧನೆಯ ನಿಮಿತ್ಯ ಹಮ್ಮಿಕೊಂಡ ಜ್ಞಾನ ಸತ್ರ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡುತ್ತಾ ಮಾತನಾಡಿದರು. 


ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು, ಶ್ರೀ ಜಗನ್ನಾಥದಾಸರ ದಾಸರು, ಶ್ರೀ ಪ್ರಾಣೇಶ ದಾಸರು ಮತ್ತಿತರ ದಾಸರಂತೆ ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದ ಮಹನೀಯರಲ್ಲಿ ಶ್ರೀ ಶಾಮ ಸುಂದರ ದಾಸರು ಅಗ್ರಗಣ್ಯರಾಗಿ ನಿಲ್ಲುತ್ತಾರೆ  ಎಂದ ಅವರು ಶ್ರೀ ಶಾಮ ಸುಂದರ ದಾಸರು ವರ ಕವಿಗಳು, ಅವರು ಹಲವಾರು ಸುಳಾದಿಗಳನ್ನು, ಉಗಾಭೋಗಗಳನ್ನು ವಿಶೇಷವಾಗಿ ತಾರತಮ್ಯುಕ್ತವಾದ  ನೂರಾರು ಸಂಕೀರ್ತಿನೆಗಳನ್ನು ರಚಿಸಿದ್ದಾರೆ ಎಂದರು.

ಶ್ರೀ ಅಸ್ಕಿ ಹಾಳ ಗೋವಿಂದ ದಾಸರ ಶಿಷ್ಯರಾಗಿ ಶ್ರೀ ಜಗನ್ನಾಥಸರ ಅನುಗ್ರಹದಿಂದ ಶ್ರೀ ಶ್ಯಾಮ ಸುಂದರ ವಿಠಲ ಎಂಬ ಸ್ವಪ್ನಾoಕಿತವನ್ನು ಪಡೆದು ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ ದಾಸ ವರೇಣ್ಯರು ಎಂದರು.

ಉಪಲಿ ಕುಪ್ಪೆರಾಯರು, ವರದೇಂದ್ರರು, ರಾಘವೇಂದ್ರರಾ ಚಾರ್ಯ ಕುರ್ಡಿ ಇವರಿಗೆ ದಾಸ ದೀಕ್ಷೆಯನ್ನು ನೀಡಿ ದಾಸ ಸಾಹಿತ್ಯವನ್ನು ಮುಂದುವರಿಸಿದರು ಎಂದು ಉಪನ್ಯಾಸದಲ್ಲಿ ಹೇಳಿದರು. 


  ಪತ್ರಕರ್ತ  ಜಯಕುಮಾರ್ ದೇಸಾಯಿ ಕಾಡ್ಲೂರು ಮಾತನಾಡಿ ಶ್ರೀ ಶಾಮಸುಂದರ ದಾಸರ ಕೀರ್ತಿನೆಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಆಶಯವನ್ನು ಕಾಣುತ್ತೇವೆ  ಅದರ ಜೊತೆಗೆ ಭಕ್ತಿರಸವನ್ನು ಎಲ್ಲಾ ಕಡೆ ಪಸರಿಸುವಂತೆ ಮಾಡಿದ ಶ್ರೇಯಸ್ಸು ಶಾಮ ಸುಂದರ ದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು. 

    ರವೀಂದ್ರ ಕುಲಕರ್ಣೀ ಅವರು ಮಾತನಾಡಿ ವರಕವಿ ದ.ರಾ ಬೇಂದ್ರೆ ಅವರಿಂದ ಶಾಮ ಸುಂದರ ದಾಸರ ಕವಿತ್ವದ ಶಕ್ತಿಯನ್ನು  ಪ್ರಶಂಶಿಸಲ್ಪಟ್ಟ ಮಹನೀಯರು ಇವರು ಶ್ರೀ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಮೇಲೆ ರಚಿಸಿದ ಎಲ್ಲಾ ಹಾಡುಗಳು ಭಜನೆಗಳಲ್ಲಿ ಅಳವಡಿಸಿಕೊಂಡು ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು. 


  ಈ ಸಂದರ್ಭದಲ್ಲಿ  ತ್ರಿವೇಣಿ ಬಾಯಿಯವರಿಂದ ಅವರಿಂದ ಸುಳಾದಿ ವಾಚನವಾಯಿತು. ದಾಸವಾಣಿಯನ್ನು  ಸುರೇಶ್ ಕಲ್ಲೂರ್, ವೆಂಕಟೇಶ್ ಕೋಲಾರ್, ಗುಂಡಾಚಾರ್ಯ ಹೊಳಗುಂದಿ, ಶ್ರೀಕಾಂತ್ ಕುಲಕರ್ಣಿ, ಸುಷ್ಮಾ ಕರ್ಣಂ, ವಾಸುಕಿ ಕರ್ಣಂ, ಶ್ರೀಮತಿ ರತ್ನ ಕಲ್ಲೂರ್, ಇಂದಿರಾ ಬಾಯಿ ಸಂಗಮ್ ಮುಂತಾದವರಿಂದ ದಾಸವಾಣಿ ಜರುಗಿತು.

   ಕಾರ್ಯಕ್ರಮದಲ್ಲಿ ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀಧರಾಚಾರ್ಯ ಮುಂಗ್ಲಿ, ಪ್ರಸನ್ನ ಆಲಂಪಲ್ಲಿ, ರಾಘವೇಂದ್ರ ಚೂಡಾಮಣಿ ವಕೀಲ,ಕೊಪ್ರೇಶ ದೇಸಾಯಿ, ರಾಘವೇಂದ್ರ  ಜಾಗೀರ್ದಾರ್, ಶ್ರೀ ಹನುಮೇಶ ಸರಾಫ್, ರಂಗಾಚಾರ್ ಜೋಷಿ, ರಮಕಾಂತ್ ಶಿಕ್ಷಕರು, ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿಯ ಸದಸ್ಯರುಗಳು, ಹರಿದಾಸ ಭಕ್ತರು ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್