ಕರುಳಿನ ಕೂಗು.

 


ಕರುಳಿನ ಕೂಗು.                                                   ಬಿಸಿಲಿದೆ  ಎಂದು 

ಬರಿ  ಗೊಣಗುತಿಯಲ್ಲ

ಕಟ್ಟಿಗೆ  ಕಡಿಯುವ  

ಬಡ ಹೆಣ್ಣು  ಎಷ್ಟು  ಶ್ರಮ  ಪಡುತಿಹಳಲ್ಲ

ನಾಳಿನ  ಚಿಂತೆಯು  ಕಾಡಿದೆಯಲ್ಲ  

ಚಿಂತೆಯ  ಸಂತೆಯೇ  

ಮನ ತುಂಬಿದಂತಿದೆಯಲ್ಲ

ಮನೆ  ಕಡೆ  ಗಮನ  

ಹೋದಂತಿದೆಯಲ್ಲ  

ಅವಸರದಲಿ  ಮಕ್ಕಳಿಗೆ 

ನಾ ಕಟ್ಟಿಗೆಗೆ  ಹೋಗುವ  

ಸುದ್ದಿ  ತಿಳಿಸಲೇ  ಇಲ್ಲ

ಪಾಪ ಊಟ ಮಾಡದೇ  

ನನ್ನ ಮಕ್ಕಳು  ಕುಳಿತಿರಬಹುದಲ್ಲ 

ಕಟ್ಟಿಗೆ  ಕಾಸು  

ನಾಳೆ ಹೊಟ್ಟೆಗೆ  

ಹಿಟ್ಟಾದಿತಲ್ಲ  

ಸುಮ್ಮನೆ  ನಾ ಕೂತರೆ  

ನನ್ನ ಕೆಲಸ  ಕೆಟ್ಟಿತಲ್ಲ  

ಆಲೋಚನೆಯ  ಬಿಟ್ಟು 

ಬಿಡು  ಮನ  ಎಂದಿತಲ್ಲ 

ನಾ ಉಣ್ಣದಿದ್ದರೆ  

ಪರವಾಗಿಲ್ಲ ಆದರೆ  

ನನ್ನ  ಮಕ್ಕಳು ಹಸಿವಿನಿಂದ ಬಳಲೋದು ಬಳಲುವದ  ನಾ  ಎಂದಿಗೂ ಸಹಿಸುವಳಲ್ಲ  

ಪೋನಾಯಿಸುವೆನೆಂದರೆ ಚಾರ್ಜ್ ಇಲ್ಲವೇ  ಇಲ್ಲ 

ಮನ ಮಕ್ಕಳ ನೆನೆಯುವುದರಲ್ಲಿ  

ಕಾಡಿಗೆ  ಬಂದೆ  ಬಿಟ್ಟವಲ್ಲ  ಅವ್ವ

ನಮಗೆ ಬೇಸಿಗೆ  ರಜೆ  

ಇದೆ ನೀ  ಮರೆತಂತಿದೆಯಲ್ಲ 

ಕರೆದರೆ  ನಾವು  ನಿನ್ನೊಡನೆ  ಬರುತ್ತಿದ್ದೆವಲ್ಲ 

ನೀನೊಬ್ಬಳೇ ಶ್ರಮ  

ಪಡುವುದು ಹೇಗೆ?

 ನೋಡುವುದವ್ವ ..

ಕರುಳಿನ  ಕೂಗು ಕಾಡಿನ ಆಚೆ  ಊರಿನ  ಮಕ್ಕಳಿಗೆ  ಕೇಳಿತಲ್ಲ 

ಮೊಬೈಲ್ಗಿಂತ  ಬೇಗ ಸಂಬಂಧದ  ನೆಟ್ವಕ೯ 

ಕನೆಕ್ಟ  ಆಯಿತಲ್ಲ ಅಲ್ಲವೇ? ಬುತ್ತಿಯ  

ತಂದ ಮಕ್ಕಳು  

ಹಂಚಿ  ತಾಯಿಗೆ ತಿನಿಸುತ  ತಾವು  ತಿಂದರಲ್ಲ  

ಬೇಗದಿ ಕಟ್ಟಿಗೆ  ಒಟ್ಟಿಗೆ  ಗೂಡಿಸುತ  ಮೂಟೆ  ಕಟ್ಟೇ  ಬಿಟ್ಟರಲ್ಲ  ಊರಿನಡೆಗೆ  ಸಾಗಿಬಿಟ್ಟರಲ್ಲ  

ಕಷ್ಟವ  ಬಿಸಿಲಿನಲ್ಲಿಲ್ಲ  

ಇಷ್ಟವ ಪಟ್ಟು  ಕುಟುಂಬದ  ಹೊರೆ  

ಹೊರುವವಳಿಗೆ  

ಬೆಟ್ಟದಷ್ಟು  ಕಷ್ಟವೇ 

ಸಹಿಸುವ ಶಕ್ತಿ  

ಭಗವಂತ ಕೊಟ್ಟಿಹನಲ್ಲ

ತಾಯಿ ಮಕ್ಕಳಿಗಿದೆಯಲ್ಲ  

ಪ್ರೀತಿ ತಾಯಿಯ ಮಮತೆ  ಸಾಕು  ಜೀವನಕೆ  ಬೇರೆ ಬೇಕಾಗಿಲ್ಲ  ಸಿರಿತನವಲ್ಲ 

ಬಡತನದಲ್ಲೂ  ಮಮತೆಯ  ಸಿರಿವಂತಿಕೆ  ತುಂಬಿದೆಯಲ್ಲ ಕನ್ನಡ  

ಶಾಲೆಯ  ಮಕ್ಕಳಿಗಿದೆ  

ನೈತಿಕ  ಮೌಲ್ಯವಿದೆಲ್ಲ  

ಅವರು ಸಾಮಾನ್ಯರಲ್ಲ   ಅತಿ  ಬುದ್ಧಿವಂತರೆಲ್ಲ


-ಶ್ರೀ ಮತಿ ಭಾರತಿ ಕುಲಕರ್ಣಿ             

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್