ನಗರದಲ್ಲಿ ಖೋಟಾ ನೋಟು ಪತ್ತೆ : ಚಲಾವಣೆ ಶಂಕೆ.

 


ನಗರದಲ್ಲಿ ಖೋಟಾ ನೋಟು ಪತ್ತೆ :  ಚಲಾವಣೆ ಶಂಕೆ.                     ರಾಯಚೂರು,ಮೇ.24- ನಗರದಲ್ಲಿ ಖೋಟಾ ನೋಟು ಪತ್ತೆಯಾಗಿದ್ದು ಖೋಟಾ ನೋಟು ಚಲಾವಣೆ ಶಂಕೆ ಮೂಡಿಸಿದೆ.                              ನಗರದ ಸ್ಟೇಷನ್ ರಸ್ತೆಯ ಐಡಿಬಿಐ ಬ್ಯಾಂಕ್ ನಲ್ಲಿ ಗ್ರಾಹಕರೊಬ್ಬರು ಬ್ಯಾಂಕ್ ಗೆ ಹಣ ಸಂದಾಯ ಮಾಡುವ ವೇಳೆ ಹಣ ಎಣಿಕೆ ಯಂತ್ರದಲ್ಲಿ  ಐದು ನೂರು ರೂಪಾಯಿ ಮುಖ ಬೆಲೆಯ ಒಂದು ಖೋಟಾ ನೋಟು ಎಂಬುದು ಖಾತರಿಯಾಗಿದ್ದು ಬ್ಯಾಂಕ್ ಸಿಬ್ಬಂದಿ ಈ ಬಗ್ಗೆ ಗ್ರಾಹಕರಿಗೆ ಅದನ್ನು ತಿಳಿಸಿದ್ದಾರೆ ಇದರಿಂದ ವಿಚಲಿತರಾದ ಗ್ರಾಹಕ ಆತಂಕಗೊಂಡಿದ್ದಾರೆ.                                    ಐದು ನೂರು ಮುಖ ಬೆಲೆಯುಳ್ಳ ಖೋಟಾ ನೋಟು ಚಲಾವಣೆಗೆ ಬಂದಿರುವ ಶಂಕೆ ವ್ಯಕ್ತವಾಗಿದೆ .                                            ಎಲ್ಲೆಡೆ ನಗದು ರೂಪದಲ್ಲಿ ಐದು ನೂರು ಮುಖ ಬೆಲೆಯ ನೋಟು ಹೆಚ್ಚು  ಕಾಣಲಾಗುತ್ತಿದ್ದು ಐದು ನೂರು ರೂಪಾಯಿ ಖೋಟಾ ನೋಟು ಪತ್ತೆಯಾಗಿದ್ದು ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದ್ದು  ಪೊಲೀಸ್ ಇಲಾಖೆ ಹಾಗೂ ಬ್ಯಾಂಕ್ ಗಳು ಈ ಬಗ್ಗೆ ತತಕ್ಷಣ ಕಾರ್ಯ ತತ್ಪರರಾಗಿ ಖೋಟಾ ನೋಟು ಜಾಲಕ್ಕೆ ಕಡಿವಾಣ ಹಾಕಬೇಕೆಂಬುದು ನಾಗರೀಕರ ಒತ್ತಾಯವಾಗಿದೆ ಇಲ್ಲದಿದ್ದರೆ ಅಕ್ಷರ ಅರಿಯದ ಅಮಾಯಕರು ಖೋಟಾ ನೋಟು ಮತ್ತು ನೈಜ ನೋಟಿನ ವ್ಯತ್ಯಾಸ ಅರಿಯದೆ ಮೋಸ ಹೋಗುವುದು ಗ್ಯಾರಂಟಿ.                        

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ