ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವೆ: ಮುರಳಿಧರ ಕುಲಕರ್ಣಿಗೆ ಸನ್ಮಾನ
ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವೆ: ಮುರಳಿಧರ ಕುಲಕರ್ಣಿಗೆ ಸನ್ಮಾನ
ರಾಯಚೂರು ,ಮೇ.18- ನಗರದ ಸತ್ಯನಾಥ ಕಾಲೋನಿ ಶ್ರೀ ಪ್ರಾಣದೇವರ ದೇವಸ್ಥಾನದಲ್ಲಿ ಶ್ರೀ ಶಾಮ ಸುಂದರ ದಾಸರ ಪ್ರತಿಷ್ಠಾನ ನಿನ್ನೆ ಹಮ್ಮಿಕೊಂಡ ಶ್ಯಾಮ ಸುಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಮುರಳಿಧರ ಕುಲಕರ್ಣಿಯವರು ನಗರದಲ್ಲಿ ನಿರಂತರ ಸಾಂಸ್ಕೃತಿಕ ಮತ್ತು ದಾಸ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ.
ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಪ್ರತಿ ಹರಿದಾಸರ ಆರಾಧನೆಯನ್ನು ಹಮ್ಮಿಕೊಳ್ಳುವುದರ ಮೂಲಕ ದಾಸ ಸಾಹಿತ್ಯದ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಈಗಾಗಲೇ ಹಲವಾರು ದಾಸ ಸಾಹಿತ್ಯದ ಬೃಹತ್ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಮತ್ತು ಆಕರ್ಷಣೀಯ ನಿರೂಪಣೆಯೊಂದಿಗೆ ಜನ ಮೆಚ್ಚುಗೆ ಗಳಿಸಿದ್ದಾರೆ.
ಇವರು ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಗುಲ್ಬರ್ಗ, ಮೈಸೂರು ಮಂತ್ರಾಲಯ ತಿರುಪತಿ ಯಲ್ಲಿ ನಡೆದ ಬೃಹತ್ ವೇದಿಕೆಗಳ ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಸುಂದರವಾಗಿ ನಿರೂಪಣೆಯನ್ನು ಮಾಡಿದ್ದಾರೆ.
ನಗರದಲ್ಲಿ ಪ್ರತಿವರ್ಷ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ಗೋವಿಂದ ಗಾನ ಎಂಬ ಕಾರ್ಯಕ್ರಮವನ್ನು ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್ ಇವರ ಜೊತೆಗ ನಗರದ ರಂಗಮಂದಿರದಲ್ಲಿ ಹಮ್ಮಿಕೊಳ್ಳುತ್ತಿದ್ದಾರೆ ಇದು ಜನ ಮೆಚ್ಚುಗೆ ಪಡೆದ ಕಾರ್ಯಕ್ರಮವಾಗಿರುತ್ತದೆ.
ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಪ್ರತಿ ತಿಂಗಳು ದಾಸ ನಮನ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಹರಿದಾಸ ಸಾಹಿತ್ಯವನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡಿದ್ದಾರೆ.
ಹಲವಾರು ದಾಸವಾಣಿ ಗಾಯಕರಿಗೆ ಶ್ರುತಿ ಸಾಹಿತ್ಯ ಮೇಳದ ಮುಖಾಂತರ ವೇದಿಕೆ ಕಲ್ಪಿಸುವುದರ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸಿದ್ದಾರೆ. ಸನ್ಮಾನ ಕಾರ್ಯಕ್ರಮದಲ್ಲಿ ವೇ. ಪಂ. ಮುಕುಂದಾಚಾರ್ಯ ಜೋಶಿ, ಸರ್ವೇಶ ವಿಠಲಾಂಕಿತರಾದ ಶಿರ್ವಾಳ್ ರಾಘವೇಂದ್ರ ಆಚಾರ್ಯರು,
ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಚೀಕಲಪರ್ವಿ ಜಗನ್ನಾಥದಾಸರು, ಸೇತು ಮಾಧವರಾವ ಕೋಟೆ, ಡಾಕ್ಟರ್ ರಾಜಶ್ರೀ ಕಲ್ಲೂರ್ಕರ್, ಟಿಟಿಡಿ ಸಂಚಾಲಕರಾದ ಪ್ರಹ್ಲಾದ್ ಫಿರೋಜಾಬಾದ್, ಗುಂಡಾಚಾರ್ಯ ಹೊಳಗುಂದಿ, ಶ್ರೀಕಾಂತ್ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದು ಮುರಳಿಧರ ಕುಲಕರ್ಣಿ ಅವರಿಗೆ ಅಭಿನಂದಿಸಿದರು.
Comments
Post a Comment