ಗಂಜಳ್ಳಿ ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ.

 


ಗಂಜಳ್ಳಿ ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ.                                                  ರಾಯಚೂರು,ಮೇ.24- ತಾಲೂಕಿನ ಗಂಜಳ್ಳಿ ಗ್ರಾಮದ ಕೃಷ್ಣಾ ನದಿಯಲ್ಲಿ ಬಾಲಕನೋರ್ವನನ್ನು ಮೊಸಳೆ ಎಳೆದೊಯ್ದಿದೆ.

ಮಧ್ಯಾಹ್ನ ಕುರಿಗಳಿಗೆ ನೀರು ಕುಡಿಸಲು ಹೋದ ವೇಳೆ ಈ ದುರ್ಘಟನೆ ನಡೆದಿದ್ದು ಮೃತ ಬಾಲಕನನ್ನು ವಿಶ್ವ (10) ಎಂದು ಗುರುತಿಸಲಾಗಿದೆ.   

                                             ನದಿ ದಡದಲ್ಲಿ ಕುರಿಗೆ ನೀರು ಕುಡಿಸುವ ವೇಳೆ ಮೊಸಳೆ ಬಲಕನನ್ನು ಎಳೆದೊಯ್ದಿದೆ ಎನ್ನಲಾಗಿದೆ. ಘಟನೆ ಸುದ್ದಿ ತಿಳಿದು ಗ್ರಾಮೀಣ ಠಾಣೆ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ನದಿಯಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ .   

   
ಬೃಹತ್ ಮೊಸಳೆಗಳು: ಕೃಷ್ಣಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಗಳಿದ್ದು ಜಾನುವಾರುಗಳನ್ನು ಎಳೆದೊಯ್ದ ಘಟನೆ ನೆಡೆದಿದ್ದವು ಆದರೆ ಇತ್ತೀಚೆಗೆ ಮನುಷ್ಯನ ರಕ್ತದ ರುಚಿ ಕಂಡಿರುವ ಮೊಸಳೆಗಳು ಜನರ ಮೇಲೆಯೂ ದಾಳಿ ನಡೆಸುತ್ತಿದ್ದು ಅರಣ್ಯ ಇಲಾಖೆ ಮೊಸಳೆಗಳ ಹಾವಳಿ ತಡೆಯಲು ಮುಂದಾಗಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ