ಆಟೋ ಚಾಲಕನಿಂದ ಸಂಚಾರಿ ಅರವಟಿಗೆ: ಕಾಯಕದೊಂದಿಗೆ ನೀರಿನ ದಾಹ ತೀರಿಸುವ ಫಿರೋಜ್

 




ಆಟೋ ಚಾಲಕನಿಂದ ಸಂಚಾರಿ ಅರವಟಿಗೆ:             
ಕಾಯಕದೊಂದಿಗೆ ನೀರಿನ ದಾಹ ತೀರಿಸುವ ಫಿರೋಜ್

ರಾಯಚೂರು,ಮೇ.28- ಬಿರುಬಿಸಿಲಿನ ಬೇಸಿಗೆ ಶುರುವಾದರೆ ನಗರ, ಪಟ್ಟಣ ಪ್ರದೇಶದಲ್ಲಿ ಸಂಘ-ಸಂಸ್ಥೆಗಳು ಜನನೀಬಿಡ ಪ್ರದೇಶದಲ್ಲಿ ನೀರಿನ ಅರವಟ್ಟಿಗೆ ಸ್ಥಾಪಿಸುವ ಬಾಯಿರಿಕೆಯಾದವರಿಗೆ ನೀರಿನ ದಾಹ ತಿರಿಸುವುದುನ್ನು ನಾವು ನೋಡಿದ್ದೇವೆ.  ಆದರೆ ರಾಯಚೂರಿನ ಆಟೋ ಡ್ರೈವರ್ ತನ್ನ ನಿತ್ಯ ದುಡಿಮೆಯೊಂದಿಗೆ ಸ್ವಂತ ದುಡ್ಡಿನಲ್ಲಿ ನೀರಿನ ದಾಹವನ್ನು ತೀರಿಸುತ್ತಿದ್ದಾನೆ.


ನಗರದಲ್ಲಿ ಆಟೋ ಡ್ರೈವರ್ ಒಬ್ಬರು ನಿತ್ಯ ದುಡಿಮೆಗಾಗಿ ನಗರದಲ್ಲಿ ಪ್ರಯಾಣಿಕರನ್ನು ಅವರ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತ ಈ ಸಮಯದಲ್ಲಿ ಪ್ರಯಾಣಿಕರಿಗೆ ಕಾಯುತ್ತಿರುವಾಗ ರಸ್ತೆಯಲ್ಲಿ ಓಡಾಡುವ ಜನರಿಗೆ ಕೆಲವೊಂದು ಪ್ರದೇಶ ಉಚಿತವಾಗಿ ನೀರು ಸಿಗುವುದಿಲ್ಲ, ಅಂಗಡಿಯಲ್ಲಿ ಖರೀದಿಸಿ ಸೇವಿಸಬೇಕಾಗುತ್ತದೆ. ಆದರೆ  ತಾನು ನಿಂತ ಜಾಗದಲ್ಲಿ ನೀರಿನ ದಾಹವಾದವರಿಗೆ ನೀರಿನ ಸೇವೆ ಒದಗಿಸಬೇಕು ಎಂದು ಸಾವಿರಾರು ವ್ಯಯ ಮಾಡಿ, ಆಟೋಕ್ಕೆ ನೀರಿನ ಕ್ಯಾನ್ ಆಳವಡಿಸಿ, ಫಿಲ್ಟರ್ ನೀರನ್ನು ತುಂಬಿ ನೀರಿನ ದಾಹವಾದರಿಗೆ ನೀರು ಸೇವನೆ ಅವಕಾಶ ಮಾಡಿಕೊಟ್ಟಿದ್ದಾನೆ.


ಹೌದು, ನಗರದ ಟಿಪ್ಪುಸುಲ್ತಾನ್ ರಸ್ತೆ ಹತ್ತಿರ ಬರುವ ಲಾಲ್ ಪಹಾಡಿ ನಿವಾಸಿಯಾಗಿರುವ ಎಂ.ಡಿ.ಫಿರೋಜ್ ಬೇಸಿಗೆ ಆರಂಭವಾದಾಗಿನಿಂದ ನೀರಿನ ಸೇವೆ ಮಾಡುತ್ತಿದ್ದಾನೆ. ಆಟೋ ಓಡಿಸಿ ಬದುಕು ನಡೆಸುವ ಈತ ದಿನಂಪ್ರತಿ ನಗರದಲ್ಲಿ ಸಂಚಾರಿಸುತ್ತಾನೆ. ಹಲವು ವರ್ಷಗಳಿಂದ ಆಟೋ ಚಾಲನೆ ಮಾಡುತ್ತಿದ್ದಾನೆ. ಪ್ರಸಕ್ತ ಬೇಸಿಗೆಯಲ್ಲಿ ವಿಪರೀತವಾದ ಬಿಸಿಲಿನ ತಾಪಮಾನ ಕಂಡು ಬಂದಿದೆ. ಹೀಗಾಗಿ ಜನರಿಗೆ ತನ್ನಿಂದ ಅನುಕೂಲವಾಗಲಿ ಎಂದು ಸುಮಾರು ೧೫೦೦ ರೂಪಾಯಿ ಖರ್ಚು ಮಾಡಿಕೊಂಡು, ಒಂದು ಕೂಲ್ಡ್ ಕ್ಯಾನ್ ಖರೀದಿ ಮಾಡಿ, ಅದನ್ನು ಆಟೋಕ್ಕೆ ಕುಡಿಸುವಾಗ ಪ್ರತ್ಯೇಕವಾಗಿ ಸಲಕರಣೆ ಜೋಡಿಸಿ, ಅದರೊಂದಿಗೆ ಗ್ಲಾಸ್ ಇಟ್ಟಿದ್ದಾನೆ.  



ರಸ್ತೆಯಲ್ಲಿ ಓಡಾಡುವ ಜನರು ಹಾಗೂ ತಾನು ನಿಲುಗಡೆಯಾದ ಪ್ರದೇಶದಲ್ಲಿ ಜನರಿಗೆ ನೀರಿನ ದಾಹವಾದಾಗ ಕುಡಿಯಲಿ ಎಂದು ಈ ರೀತಿಯಾಗಿ ಪ್ಲಾನ್ ಮಾಡಿದ್ದಾನೆ. ಅದರಂತೆ ಬೇಸಿಗೆ ಪ್ರಾರಂಭದಿಂದ(ಕಳೆದ ಎರಡು ತಿಂಗಳು) ಬೆಳಿಗ್ಗೆ ತಾನು ಕೆಲಸಕ್ಕೆ ಬರುವಾಗ ಒಂದು ಕ್ಯಾನ್ ತುಂಬಿಸಿಕೊಂಡು ಬರುತ್ತಾನೆ. ಇದಾದ ಮಧ್ಯಾಹ್ನದವರೆಗೆ ಆಟೋ ಓಡಿಸುತ್ತಾನೆ. ಅಷ್ಟರೊಳಗೆ ಖಾಲಿಯದಂತೆಲ್ಲ, ನೀರಿನ ತುಂಬಿಸಿಕೊಂಡು ಇಡುತ್ತಾನೆ. ಇದೇ ರೀತಿಯಾಗಿ ನಿತ್ಯ ಮೂರು, ನಾಲ್ಕು ಕ್ಯಾನ್ ಗಳನ್ನು ನೀರು ಖಾಲಿಯಾಗುತ್ತಿದ್ದವು. ಸಾರ್ವಜನಿಕರು ಕಂಡು ಆಟೋದ ಹತ್ತಿರ ಬಂದು ನೀರು ಸೇವನೆ ಮಾಡುತ್ತಿದ್ದರು.


ಫೆರೋಜ್ ಈತನ ನೀರಿನ ಸೇವೆ ಮಾಡುತ್ತಿರುವುದು ಕಂಡು ಕೆಲವು ಪ್ರಾಯಾಣಿಕರು ಹಾಗೂ ಕೆಲ ಸಾರ್ವಜನಿಕರು ನೀನು ಒಳ್ಳೆಯ ಕೆಲಸ ಮಾಡುತ್ತಿರುವೆ, ನನ್ನಿಂದ ನೀನಗೆ ಅನುಕೂಲವಾಗಲಿ ಎಂದು ನೀರಿನ ಕ್ಯಾನ್ ತುಂಬಿಸಿಕೊಳ್ಳಲಿ ಎಂದು ಹಣವನ್ನು ಸಹ ನೀಡುವುದಕ್ಕೆ ಮುಂದಾಗಿದ್ದಾರೆ. ಆದರೆ ಫೆರೋಜ್ ಅದನ್ನು ನಿರಾಕಾರಿಸಿ, ನಿತ್ಯ ಆಟೋ ಓಡಿಸಿ ಅದರಿಂದ ಬರುವ ೬೦೦ರಿಂರ ೭೦೦ ರೂಪಾಯಿ ದುಡಿಯುವ ಹಣದಲ್ಲಿಯೇ, ಫಿಲ್ಟರ್ ಕ್ಯಾನ್ ತುಂಬಿಸಿಕೊಂಡು ನೀರು ಸೇವೆ ಮಾಡುತ್ತಿರುವುದು ವಿಶೇಷವಾಗಿದೆ.


ಪ್ರಸಕ್ತ ಬೇಸಿಗೆಯಲ್ಲಿ ಅತಿಯಾದ ಬಿಸಿಲಿನ ತಾಪಮಾನ ಜಿಲ್ಲೆಯಲ್ಲಿ ದಾಖಲಾಗಿದೆ ಜೊತೆಗೆ ತೀರ ಬರಗಾಲ ಆವರಿಸಿದ್ದರಿಂದ ನೀರಿನ ಬವಣೆ ಸಹಯಿತ್ತು. ಇತ್ತ ಸಮಯದಲ್ಲಿ ತಾನು ಆಟೋ ಓಡಿಸಿ ಬಂದ ಹಣದಲ್ಲಿ ತನ್ನ ಕುಟುಂಬದ ನಿರ‍್ಹಣೆ ಮಾಡುವುದು ಕಷ್ಟದ ಸನ್ನಿವೇಶದಲ್ಲಿ ಯಾವುದೇ ಫಲಫೇಕ್ಷೇಯಿಲ್ಲದೆ ಸಾರ್ವಜನಿಕರಿಗೆ ಕುಡಿಯುವ ನೀರಿನ ದಾಹ ತೀರುಸುವ ಕೆಲಸ ಮಾಡಬೇಕು ಎನ್ನುವ ಈತನ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಇತರರಿಗೂ ಮಾದರಿಯಾಗಿದ್ದಾನೆ.

ಹಲವು ವರ್ಷಗಳಿಂದ ಆಟೋವನ್ನು ಓಡಿಸುತ್ತಿದ್ದಾನೆ. ಪ್ರತಿ ವರ್ಷ  ಬೇಸಿಗೆಯಲ್ಲಿ ಸಾಧಾರಣ ಬಿಸಿಲು ಇರುತ್ತಿತ್ತು. ಈ ಬಾರಿ ಹೆಚ್ಚಿನ ಬಿಸಿಲು ಕಂಡು ಬಂತು. ಅತಿಯಾದ ಬಿಸಿಲಿಗೆ ರಸ್ತೆಯಲ್ಲಿ ಓಡಾಡುವ ಜನರಿಗೆ ಬಾಯರಿಕೆ ಜಾಸ್ತಿಯಾಗುತ್ತದೆ. ಹೀಗಾಗಿ ನನ್ನಿಂದ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶದಿಂದ ಸ್ವಂತ ಹಣದಲ್ಲಿ ಕೂಲ್ಡ್ ಕ್ಯಾನ್ ಖರೀದಿ ಮಾಡಿ, ಅದನ್ನು ಆಟೋ ಆಳವಡಿಸುವುದಕ್ಕೆ ವೆಲ್ಡಿಂಗ್ ಮಾಡಿ ಬೀಳದಂತೆ ಜೋಡಿಸಿಕೊಂಡು ತಂಪಾದ ನೀರನ್ನು ತುಂಬಿಕೊಂಡು ಬರುತ್ತಿದೆ. ಇದನ್ನು ನೋಡಿ ಜನರು ಆಟೋ ಹತ್ತಿರ ಬಂದು ನೀರು ಕುಡಿಯುತ್ತಿದ್ದರೆ. ಜಾಸ್ತಿ ಬಿಸಿಲಿನ ಸಮಯದಲ್ಲಿ ನಿತ್ಯ ಮರ‍್ನಾಲ್ಕು ಕ್ಯಾನ್ ಖಾಲಿಯಾಗುತ್ತಿದ್ದವು. ಈಗ ಬೇಸಿಗೆ ಮುಗಿಯುವ ಸಮಯ ಬಂದಿದೆ. ಆದ್ರೂ ಎರಡು ಕ್ಯಾನ್ ಪ್ರತಿನಿತ್ಯ ಖಾಲಿಯಾಗುತ್ತಿವೆ. ಒಂದು ಕ್ಯಾನ್ ೩೦ ರೂಪಾಯಿಗೆ ಮಾಡಿಕೊಂಡು ಬರುತ್ತಿದೆ. ತನಗೆ ಬರುವ ಆದಾಯಲ್ಲಿ ಇದನ್ನು ಮಾಡಿದ್ದಾನೆ. ನನ್ನ ಈ ಕರ‍್ಯವನ್ನು ಕಂಡು ಕೆಲವರು ಸ್ವಯಂ ಪ್ರೇರಣೆಯಿಂದ ಹಣ ನೀಡುವುದಕ್ಕೆ ಮುಂದೆ ಬಂದರು. ಆದರೆ ನಿರಾಕಾರಿಸಿ ನನ್ನ ಸ್ವಂತಃ ಹಣದಿಂದ ಇದನ್ನು ಮಾಡಿದ್ದಾರೆ. ಹಣ ಬರುತ್ತದೆ ಹೋಗುತ್ತೆ ಮನುಷ್ಯನಿಗೆ ಮಾನಸಿಕ ನೆಮ್ಮದಿ ಮುಖ್ಯ. ಇದರಿಂದ ನನ್ನಗೆ ಮಾನಸಿಕ ನೆಮ್ಮದಿ ಹಾಗೂ ಒಳ್ಳೆಯ ಕಾರ್ಯ ಮಾಡಿರುವ ತೃಪ್ತಿಯಿದೆ ಅಂತಾನೆ ಆಟೋ ಚಾಲಕ  ಎಂ.ಡಿ.ಫಿರೋಜ್

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ