ಎಸ್ಟಿ ಅಭಿವೃದ್ಧಿ ನಿಗಮ ಅವ್ಯವಹಾರ ಸಿಬಿಐ ತನಿಖೆಗೆ ವಹಿಸಿ: ಶಾಸಕ ದದ್ದಲ್ ರಾಜೀನಾಮೆ ನೀಡಬೇಕು- ಎಂ.ವಿರುಪಾಕ್ಷಿ. ರಾಯಚೂರು,ಜೂ.20- ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ತನಿಖೆ ಸಿಬಿಐ ವಹಿಸಬೇಕು ಹಾಗು ನೈತಿಕ ಹೊಣೆ ಹೊತ್ತು ನಿಗಮದ ಅಧ್ಯಕ್ಷ ಶಾಸಕ ದದ್ದಲ್ ಬಸನಗೌಡ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಹುಕೋಟಿ ಅವ್ಯವಹಾರವಾಗಿದೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಲ್ಲದೆ ಇದ್ದಕ್ಕೆ ಸಂಬಂಧಿಸಿದ ಖಾತೆ ನಿಭಾಯಿಸುತ್ತಿದ್ದ ಸಚಿವ ನಾಗೇಂದ್ರ ಸಹ ರಾಜೀನಾಮೆ ನೀಡಿದ್ದಾರೆ ಆದರೆ ನಿಗಮದ ಅಧ್ಯಕ್ಷ ಶಾಸಕ ದದ್ದಲ್ ಬಸನಗೌಡ ಸಹ ಇದರಲ್ಲಿ ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಕಾಣುತ್ತಿದೆ ಮತ್ತು ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಬರುವ ಮುಂಚೆಯೇ ಕೋಟ್ಯಾಂತರ ರುಪಾಯಿ ವಿವಿಧ ಖಾತೆಗಳಿಗೆ ಜಮಾವಣೆಯಾಗಿದ್ದು ನಿಗಮದ ಅಧ್ಯಕ್ಷರ ಗಮನಕ್ಕಿರದೆ ಇದು ಅಸಾಧ್ಯವೆಂದು ಆರೋಪಿಸಿದ ಅವರು ಕೂಡಲೆ ರಾಜೀನಾಮೆ ನೀಡಬೇಕೆಂದರು. ಈ ಸಂದರ್ಭದಲ್ಲಿ ಸಣ್ಣ ನರಸಿಂಹ ನಾಯಕ, ಹಂಪಯ್ಯ ನಾಯಕ, ನಾಗರಾಜ್ , ಭೀಮರೆಡ್ಡಿ ಇನ್ನಿತರರು ಇದ್ದರು.
Comments
Post a Comment