ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಅದ್ದೂರಿ ಚಾಲನೆ: ರೈತರಿಗೆ ಉತ್ತೇಜನ ನೀಡುವ ಕಾರ್ಯ ಶ್ಲಾಘನೀಯ.                                                              ರಾಯಚೂರು,ಜೂ.21- ಕಾರಹುಣ್ಣಿಮೆ ಅಂಗವಾಗಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. 

                         ಅವರಿಂದು ನಗರದ ರಾಜೇಂದ್ರ ಗಂಜ್  ಆವರಣದಲ್ಲಿ ಮುನ್ನೂರು ಕಾಪು ಸಮಾಜ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮ್ಮಿಕೊಂಡಿರುವ 24 ನೇ ವರ್ಷದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೊದಲ ದಿನ ಎತ್ತುಗಳಿಂದ  ಒಂದು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಇದೊಂದು ವಿಶಿಷ್ಟ ಬಗೆಯ ಹಬ್ಬ ಭಾರತ‌ ದೇಶ ಕೃಷಿ ಪ್ರಧಾನ ದೇಶ ರೈತರು ದೇಶದ ಬೆನ್ನೆಲುಬು ಅವರು ಬೆಳೆದರೆ ಮಾತ್ರ ದೇಶಕ್ಕೆ ಆಹಾರ ಸಿಗುತ್ತದೆ ಅವರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜಿಸಿತ್ತಿರುವ ಮಾಜಿ ಶಾಸಕರಾದ ಪಾಪರೆಡ್ಡಿ ಮತ್ತು ಮುನ್ನೂರು ಕಾಪು ಸಮಾಜದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ,ಸಮಾಜ ಬಾಂಧವರಿಗೆ ಮತ್ತು ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಾನಿಧ್ಯವನ್ನು ವಿವಿಧ ಮಠಾಧೀಶರು ವಹಿಸಿದ್ದರು.                                                     

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್, ಶಾಸಕರಾದ ಡಾ.ಶಿವರಾಜ ಪಾಟೀಲ್ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ,ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಅಮರೇಗೌಡ ಬಯ್ಯಾಪೂರು, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಆರ್ ಡಿ ಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ, ನಗರಸಭೆ ಸದಸ್ಯ ಜಯಣ್ಣ,

ಎನ್.ಶ್ರೀನಿವಾಸರೆಡ್ಡಿ, ಮುಖಂಡರಾದ ಕೆ.ಶಾಂತಪ್ಪ, ಜಿ.ಬಸವರಾಜ ರೆಡ್ಡಿ, ಕಡಗೋಲು ಆಂಜಿನೇಯ,ಗಿರೀಶ ಕನಕವೀಡು, ಜಿ.ನರಸರೆಡ್ಡಿ, ಜಯವಂತರಾವ ಪತಂಗೆ,ರಜಾಕ್ ಉಸ್ತಾದ್, ಡಿ.ಕೆ.ಮುರಳಿ‌ಯಾದವ್, ಸುದರ್ಶನ್ ರೆಡ್ಡಿ, ಮಹಿಂದ್ರ ರೆಡ್ಡಿ, ಪವನ್ ಪಾಟೀಲ್ ಸೇರಿದಂತೆ ಅನೇಕರಿದ್ದರು.

Comments

Popular posts from this blog