ಭಾರತ ಜಗತ್ತಿನ ಆರೋಗ್ಯಕ್ಕೆ ನೀಡಿದ ವಿಶೇಷ ಕೊಡುಗೆ ಯೋಗ:                                                                 ತೇಜಸ್ ವಿಶ್ವಸ್ಥ ಮಂಡಲಿಯಿಂದ ವಿಶ್ವ ಯೋಗ ದಿನ ಆಚರಣೆ.


ರಾಯಚೂರು,ಜೂ.22- ಪತಂಜಲಿ ಮುನಿಗಳ ಅಷ್ಟಾಂಗ ಯೋಗ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು  ಆರೋಗ್ಯಪೂರ್ಣ ಹಾಗು ಸಂತೃಪ್ತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಟ್ರಸ್ಟಿಗಳಾದ ಡಾ. ಕಿರಣ್ ಖೇಣೇದ್ ಅವರು ನುಡಿದರು.


ರಾಯಚೂರು ನಗರದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತೇಜಸ್ ವಿಶ್ವಸ್ಥ ಮಂಡಲಿ ಹಾಗು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜೂ 21 ರಂದು ಆಯೋಜಿಸಿದ್ದ 10 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಎಂದರೆ, ಕೇವಲ ಆಸನ, ಪ್ರಾಣಾಯಾಮ, ಧ್ಯಾನ ಮಾಡುವುದಷ್ಟೇ ಅಲ್ಲ, ಯೋಗ ಎಂದರೆ, ಎಲ್ಲರನ್ನೂ, ಎಲ್ಲವನ್ನೂ ಜೋಡಿಸುವುದು ಅದೊಂದು ಜೀವನ ಕಲೆ. ಪತಂಜಲಿ ಮುನಿ ಅವರೊಬ್ಬ ದಾರ್ಶನಿಕರು. ಭಾರತದ ಯೋಗ ಇಂದು ಜಗತ್ತನ್ನು ಒಂದುಗೂಡಿಸುತ್ತಿದೆ. ನಾವೆಲ್ಲರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಾ, ಸಾಮರಸ್ಯದ ಬದುಕನ್ನು ನಡೆಸುತ್ತಾ ಸಮಾಜಯೋಗಿಗಳಾಗೋಣ ಎಂದು ಕರೆನೀಡಿದರು. 

ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಅನುಭವಿ ಯೋಗ ಚಿಕಿತ್ಸಕರಾದ  ರಾಘವೇಂದ್ರ ಗುರುಮಿಟಕಲ್ ಅವರು ವಿವಿಧ ಯೋಗಾಭ್ಯಾಸಗಳನ್ನು ಮಾಡಿಸಿ, ಅದರಿಂದಾಗುವ ಲಾಭಗಳನ್ನು ವಿವರಿಸಿದರು. 

ಈ ಸಂದರ್ಭದಲ್ಲಿ ತೇಜಸ್ ವಿಶ್ವಸ್ಥ ಮಂಡಲಿಯ ಟ್ರಸ್ಟಿಗಳಾದ  ಶಿವಬಸಪ್ಪ ಮಾಲಿಪಾಟೀಲ್, ನಾಗರಾಜ ಆದೋನಿ ಹಾಗು   ಯೋಗಾಭ್ಯಾಸಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ