ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ತೆರೆ: ಗಜ ಗಾತ್ರದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ವೀಕ್ಷಿಸಲು ಜನಜಂಗುಳಿ. ರಾಯಚೂರು,ಜೂ.23- ಮುನ್ನೂರು ಕಾಪು ಸಮಾಜ ಹಾಗೂ ಎಪಿಎಂಸಿ ಸಹಯೋಗದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಮುಂಗಾರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇಂದು ತೆರೆ ಬೀಳಲಿದೆ.
ಮೊದಲ ದಿನ ಒಂದು ಟನ್, ನಂತರ ಎರಡನೆ ದಿನ ಕ್ರಮವಾಗಿ ಎರೆಡು ಟನ್, ಮೂರನೆ ದಿನ ಎರೆಡುವರೆ ಟನ್ ಭಾರವಾದ ಕಲ್ಲುಗಳನ್ನು ಎತ್ತುಗಳು ಎಳೆದವು ವಿವಿಧ ರಾಜ್ಯಗಳ ಎತ್ತುಗಳು ಸ್ಪರ್ದೆಯಲ್ಲಿ ಭಾಗವಹಿಸಿ ತಮ್ಮ ಮಾಲೀಕರಿಗೆ ಬಹುಮಾನ ತಂದುಕೊಟ್ಟವು.
ಸಾಯಂಕಾಲ ವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ನಿನ್ನೆ ಕಾರಹುಣ್ಣಿಮೆ ಅಂಗವಾಗಿ ಶ್ರೀ ಲಕ್ಷ್ಮಮ್ಮ ದೇವಿ ಮೆರವಣಿಗೆ, ಕಲಾ ತಂಡಗಳ ಪ್ರತಿಭೆ ಪ್ರದರ್ಶನ ಮತ್ತು ಆಲಂಕೃತ ಎತ್ತುಗಳ ಮೆರವಣಿಗೆ ನಡೆಯಿತು. ಮೆರವಣಿಗೆ ಸಾನಿಧ್ಯವನ್ನು ಹರಿಹರಪುರ ಶ್ರೀಗಳು ವಹಿಸಿದ್ದರು ಶ್ರೀ ಲಕ್ಷ್ಮಮ್ಮ ದೇವಸ್ಥಾನ ಅರ್ಚಕರು ಪಾಲ್ಗೊಂಡಿದ್ದರು. ಕೊನೆ ದಿನವಾದ ಇಂದು ಕಲ್ಲು ಗುಂಡು ಎತ್ತುವ ಸ್ಪರ್ಧೆ, ಕುಸ್ತಿಪಂದ್ಯಾವಳಿ ಪಡೆಯಲಿದೆ.
ಮುಂಗಾರು ಸಾಂಸ್ಕೃತಿಕ ಹಬ್ಬದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಮತ್ತು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ನೇತೃತ್ವದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ನಿಗಮ , ಮಂಡಳಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ನಗರಸಭೆ ಸದಸ್ಯರು,ವಿವಿಧ ಪಕ್ಷಗಳ ಅಧ್ಯಕ್ಷರು, ಮುಖಂಡರು,
ರೈತರು, ಗಂಜ್ ವರ್ತಕರು ಸೇರಿದಂತೆ ನಗರ ಜನತೆ ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Comments
Post a Comment