ಮುಂಗಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನ ಸೆಳೆದ ಮುರಳಿಧರ ಕುಲಕರ್ಣಿ ಯವರ ನಿರೂಪಣೆ

 ರಾಯಚೂರು , ಜೂ.24-ಮುನ್ನೂರು ಕಾಪು ಸಮಾಜದ ವತಿಯಿಂದ  ರಾಯಚೂರು ನಗರದಲ್ಲಿ ದಿನಾಂಕ 21 ರಿಂದ 23ರ ವರೆಗೆ ಪ್ರತಿದಿನ ಸಂಜೆ ಹಮ್ಮಿಕೊಂಡ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕ ಮುರಳಿಧರ ಕುಲಕರ್ಣಿಯವರ  ಸೊಗಸಾದ ನಿರೂಪಣೆ ಎಲ್ಲರ ಮನ ಸೆಳೆಯಿತು. 

    ಬೃಹತ್ ವೇದಿಕೆ, ಬಣ್ಣ ಬಣ್ಣದ ಬೆಳಕಿನ  ವ್ಯವಸ್ಥೆಯಲ್ಲಿ 

ನಡೆದ ಪ್ರತಿಭಾನ್ವಿತ ಕಲಾವಿದರ  ಆಕರ್ಷಣೀಯ ನೃತ್ಯ ಕಾರ್ಯಕ್ರಮ ದಲ್ಲಿ ಮುರಳಿಧರ  ಕುಲಕರ್ಣಿಯವರ  ನಿರೂಪಣೆ 

ಎಲ್ಲರ ಮೆಚ್ಚುಗೆ ಗಳಿಸಿತು.

   ತುಮಕೂರು, ಧಾರವಾಡ, ಮೈಸೂರ, ನಿಂದ ಬಂದಂತ ಕಲಾವಿದರು ಸುಗ್ಗಿ ಹಾಡುಗಳಿಗೆ ಜಾನಪದ ಗೀತೆಗಳಿಗೆ,  ಭಾವಗೀತೆಗಳಿಗೆ ಮನಮೋಹಕವಾಗಿ ನೃತ್ಯವನ್ನು ಮಾಡಿದರು. ಪ್ರತಿಯೊಂದು ನೃತ್ಯದ ವಿವರಣೆಯನ್ನು ಹಾಗೂ ಅದರ ತಾತ್ಪರ್ಯಗಳನ್ನು ಅವರ ಸಾಧನೆಗಳನ್ನು ಮುರಳಿಧರ ಕುಲಕರ್ಣಿ ತಮ್ಮ  ನಿರೂಪಣೆಯಲ್ಲಿ  ಅರ್ಥಪೂರ್ಣವಾಗಿ  ಪ್ರಸ್ತುತಪಡಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. 

    ಇದರ ಜೊತೆಗೆ ರಾಯಚೂರು ನಗರದ ವಿವಿಧ ಕಾಲೇಜುಗಳ ನೃತ್ಯ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಸಹ ಎಲ್ಲರ ಮನಸ್ಸನ್ನು ಸೂರೆಗೊಂಡವು. ಕಾಲೇಜ

ವಿದ್ಯಾರ್ಥಿಗಳು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ   ಇವರ ನಿರೂಪಣೆಯು ಅವರಿಗೆ ಸ್ಪೂರ್ತಿದಾಯಕವಾಗಿದ್ದವು. 


     ರಾಜ್ಯದಾದ್ಯಂತ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಹರಿದಾಸ ಹಬ್ಬ, ಚಲನಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುರಳಿಧರ ಕುಲಕರ್ಣಿ ಅವರ ನಿರೂಪಣೆಯು ಆಕರ್ಷಣೀಯವಾಗಿ ಕೇಂದ್ರ ಬಿಂದು ಆಗಿರುತ್ತದೆ. ಈಗಾಗಲೇ ಇವರು ಸ್ಟಾರ್ ನಿರೂಪಕರೆಂದು ರಾಜ್ಯದಲ್ಲಿ ಹೆಸರು ಮಾಡಿರುತ್ತಾರೆ.  

   ಜಿಲ್ಲಾಡಳಿತದಿಂದ ಹಮ್ಮಿಕೊಳ್ಳುವ ಹಲವಾರು ಮಹನೀಯರ ಜಯಂತಿಯ ಕಾರ್ಯಕ್ರಮದಲ್ಲಿ, ನಗರದ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳುವ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಲ್ಲಿ,

ಪ್ರತಿ ವರ್ಷ ಹಮ್ಮಿಕೊಳ್ಳುವ ಗೋವಿಂದ ಗಾನ ಕಾರ್ಯಕ್ರಮ, 

ವೇದ ಸಂಭ್ರಮ ಮುಂತಾದ ಕಾರ್ಯಕ್ರಮಗಳಲ್ಲಿ ಇವರ ನಿರೂಪಣೆ ವಿಶೇಷವಾಗಿರುತ್ತದೆ.

  ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾಗಿ ನಗರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋದರ ಮೂಲಕ ನಿರಂತರವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.

    ಇವರು 2 ಸಾವಿರಕ್ಕೂ ಅಧಿಕವಾಗಿ ಸಾಂಸ್ಕೃತಿಕ ಮತ್ತು ಸಾಹಿತಿಕ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ  ಸಾಧನೆ ಇವರದಾಗಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ