ಮಂತ್ರಾಲಯ: ಶ್ರೀ ಜಯತೀರ್ಥರ ಮಹಿಮೋತ್ಸವ ಆಚರಣೆ. ರಾಯಚೂರು,ಜೂ.25- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಜಯತೀರ್ಥರ ಮಹಿಮೋತ್ಸವ(ಶ್ರೀ ಮನ್ ನ್ಯಾಯ ಸುಧಾ ಸಂಸ್ಮರಣೋತ್ಸವ) ನೆರವೇರಿತು. ಬೆಳಿಗ್ಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಜಯತೀರ್ಥರ ರಥೋತ್ಸವಕ್ಕೆ ಚಾಲನೆ ನೀಡಿದರು
. ಶ್ರೀ ಜಯತೀರ್ಥರ ಜೀವನ ಮತ್ತು ಅವರ ಕೊಡುಗೆ ಬಗ್ಗೆ ಪಾಠ ಪ್ರವಚನ ನೆರವೇರಿದವು. ಈ ದಿನ ಶ್ರೀ ಮನ್ ನ್ಯಾಯ ಸುಧಾ ಗ್ರಂಥವನ್ನು ಶ್ರೀ ಪದ್ಮನಾಭ ತೀರ್ಥರಿಗೆ ಸಮರ್ಪಣೆ ಮಾಡಿದ ದಿನವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಲಾಯಿತು.
ಪೀಠಾಧಿಪತಿಗಳು ಅನುಗ್ರಹ ಸಂದೇಶ ನೀಡಿದರು ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment